ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಬಜೆಟ್​ನಿಂದ ಎಲೆಕ್ಟ್ರಾನಿಕ್ ಉದ್ಯಮದ ನಿರೀಕ್ಷೆಗಳಿವು…

Indian electronics industry expectations from Union budget: ಭಾರತದ ಎಲೆಕ್ಟ್ರಾನಿಕ್ಸ್ ಉದ್ಯಮ ಈ ಬಾರಿಯ ಬಜೆಟ್​ನಿಂದ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಆಮದು ಸುಂಕಗಳ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎನ್ನುವ ಬೇಡಿಕೆ ಇದೆ. ಬಿಡಿಭಾಗಗಳ ತಯಾರಿಕೆಗೆ ಉತ್ತೇಜನ ಕೊಡಲು ಇನ್ಸೆಂಟಿವ್ ಸ್ಕೀಮ್ ಅನ್ನು ಸರ್ಕಾರ ಜಾರಿಗೊಳಿಸಲಿ ಎನ್ನುವ ನಿರೀಕ್ಷೆಯೂ ಇದೆ.

ವಿಯೆಟ್ನಾಂ, ಚೀನಾ ರೀತಿ ಆಮದು ಸುಂಕ ಇಳಿಯಲಿ: ಬಜೆಟ್​ನಿಂದ ಎಲೆಕ್ಟ್ರಾನಿಕ್ ಉದ್ಯಮದ ನಿರೀಕ್ಷೆಗಳಿವು...
ಎಲೆಕ್ಟ್ರಾನಿಕ್ಸ್ ಉದ್ಯಮ
Follow us
|

Updated on: Jul 03, 2024 | 11:11 AM

ನವದೆಹಲಿ, ಜುಲೈ 3: ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಏರುಗತಿಯಲ್ಲಿ ಇದ್ದು, ಇದು ವಿಯೆಟ್ನಾಂ ಇತ್ಯಾದಿ ಇತರ ಕೆಲ ದೇಶಗಳ ಪ್ರಬಲ ಪೈಪೋಟಿ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್​ಫೋನ್ ತಯಾರಕ ಉದ್ಯಮ ಸರ್ಕಾರದಿಂದ ಇನ್ನಷ್ಟು ಉತ್ತೇಜನ ನಿರೀಕ್ಷಿಸುತ್ತಿದೆ. ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಉದ್ಯಮದ ಬೆಳವಣಿಗೆಗೆ ಪೂರಕವಾಗುವಂತಹ ಕ್ರಮಗಳನ್ನು ಪ್ರಕಟಿಸಬಹುದು ಎನ್ನುವ ಆಶಯದಲ್ಲಿದೆ. ಸ್ಮಾರ್ಟ್​ಫೋನ್ ತಯಾರಿಕೆಗೆ ಬೇಕಾದ ಬಿಡಿಭಾಗಗಳ ಆಮದಿಗೆ ಇರುವ ಸುಂಕವನ್ನು (Input tariffs) ಇಳಿಸುವುದು, ಎಲೆಕ್ಟ್ರಾನಿಕ್ಸ್ ಭಾಗಗಳ ತಯಾರಿಕೆಗೆ ಇನ್ಸೆಂಟಿವ್ ಸ್ಕೀಮ್ ಇತ್ಯಾದಿ ಕ್ರಮಗಳನ್ನು ಬಜೆಟ್​ನಲ್ಲಿ ಘೋಷಿಸಲಿ ಎಂದು ಈ ಉದ್ಯಮ ವಲಯ ನಿರೀಕ್ಷೆ ಮಾಡುತ್ತಿದೆ.

ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್​ಫೋನ್ ಉದ್ಯಮದ ಪರವಾಗಿ ಐಸಿಇಎ (ಇಂಡಿಯಾ ಸೆಲೂಲಾರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್) ಸರ್ಕಾರಕ್ಕೆ ಕೆಲ ಸಲಹೆಗಳನ್ನು ಮತ್ತು ಮನವಿಗಳನ್ನು ಮಾಡಿದೆ. ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್​ಗಳ ಆಮದಿಗೆ ಬಹಳ ಅಧಿಕ ತೆರಿಗೆ ಇರುವುದರಿಂದ ದೇಶೀಯ ಉದ್ಯಮ ಹೆಚ್ಚು ಸ್ಪರ್ಧಾತ್ಮಕವಾಗಿ ಇರಲು ಆಗುತ್ತಿಲ್ಲ. ಇದು ಜಾಗತಿಕ ಮೌಲ್ಯ ಸರಪಳಿಯ (ಗ್ಲೋಬಲ್ ವ್ಯಾಲ್ಯೂ ಚೈನ್) ಭಾಗವಾಗಿ ಸೇರುವುದು ಭಾರತಕ್ಕೆ ಕಷ್ಟವಾಗುತ್ತದೆ ಎಂಬ ವಾದಗಳನ್ನು ಐಸಿಇಎ ಮುಂದಿಟ್ಟಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2024: ಏಕೀಕೃತ ಸಬ್ಸಿಡಿ, ಜೈವಿಕ ರಸಗೊಬ್ಬರಗಳಿಗೆ ಸಬ್ಸಿಡಿ ಸೇರಿದಂತೆ ಕೃಷಿ ವಲಯದ ವಿವಿಧ ಬೇಡಿಕೆಗಳಿವು…

ವಿಯೆಟ್ನಾಂ, ಚೀನಾ ಉದಾಹರಣೆ ಕೊಟ್ಟ ಉದ್ಯಮ

ಭಾರತದಲ್ಲಿ ಹೆಚ್ಚಿನ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಆಮದಿಗೆ ಸರಾಸರಿ ಸುಂಕ ಬಹಳ ಹೆಚ್ಚಿನ ಮಟ್ಟದಲ್ಲಿದೆ. ಆದ್ಯತೆಯ ದೇಶದಿಂದ (ಎಂಎಫ್​ಎನ್) ಮಾಡಿಕೊಳ್ಳಲಾಗುವ ಆಮದಿಗೆ ಸುಂಕದ ಪ್ರಮಾಣ ಸರಾಸರಿಯಾಗಿ ಶೇ. 7.5ರಷ್ಟಿದೆ. ಈ ವಿಚಾರದಲ್ಲಿ ಚೀನಾ ವಿಧಿಸುವ ಆಮದು ಸುಂಕ ಬಹುತೇಕ ಶೂನ್ಯ. ವಿಯೆಟ್ನಾಂ ಕೂಡ ಶೇ. 0.7ರಷ್ಟು ಮಾತ್ರವೇ ಆಮದು ಸುಂಕ ಹಾಕುತ್ತದೆ.

ಬೇರೆ ಎಲ್ಲಾ ದೇಶಗಳಿಂದ ಮಾಡಿಕೊಳ್ಳಲಾಗುವ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ಆಮದಿನ ವಿಚಾರದಲ್ಲಿ ಭಾರತ ಹೆಚ್ಚಿನವಕ್ಕೆ ಹೆಚ್ಚಿನ ತೆರಿಗೆ ವಿಧಿಸುತ್ತದೆ. ಶೇ. 45ರಷ್ಟು ಕಾಂಪೊನೆಂಟ್​ಗಳಿಗೆ ಮಾತ್ರವೇ ಶೇ. 5ರವರೆಗೆ ತೆರಿಗೆ ವಿಧಿಸುತ್ತದೆ. ಬೇರೆಯವಕ್ಕೆ ಇನ್ನೂ ಹೆಚ್ಚಿನ ತೆರಿಗೆ ಹಾಕುತ್ತದೆ.

ಇದನ್ನೂ ಓದಿ: ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಮಿತಿ ಹೆಚ್ಚಿಸಲಿ: ಬಜೆಟ್​ನಿಂದ ಆದಾಯ ತೆರಿಗೆ ಪಾವತಿದಾರರಿಂದ ಅಪೇಕ್ಷೆ

ಅದೇ ಚೀನಾ ದೇಶವು ಸೊನ್ನೆಯಿಂದ ಐದು ಪ್ರತಿಶತದವರೆಗಿನ ಇನ್ಪುಟ್ ಟ್ಯಾರಿಫ್ ಶೇ. 56ರಷ್ಟು ಭಾಗಗಳಿಗೆ ಅನ್ವಯ ಆಗುತ್ತದೆ. ವಿಯೆಟ್ನಾಂನಲ್ಲಂತೂ ಶೇ. 97ರಷ್ಟು ಕಾಂಪೊನೆಂಟ್​ಗಳಿಗೆ ವಿಧಿಸುವ ಆಮದು ಸುಂಕ ಸೊನ್ನೆಯಿಂದ ಶೇ. 5ರವರೆಗಿನ ಮಟ್ಟದಲ್ಲಿದೆ.

ಭಾರತದಲ್ಲಿ ಸದ್ಯ ಆಮದು ಸುಂಕಗಳಿಗೆ ಏಳು ಸ್ಲ್ಯಾಬ್​ಗಳಿವೆ. 2025ರೊಳಗೆ ಈ ಸ್ಲ್ಯಾಬ್ ಸಂಖ್ಯೆ ನಾಲ್ಕಕ್ಕೆ (0%, 5%, 10% ಮತ್ತು 15%) ಇಳಿಯಲಿ ಎಂದು ಉದ್ಯಮ ವಲಯ ಕೇಳುತ್ತಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಭೈರತಿ ಸುರೇಶ್​ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಚನ್ನಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಾನೇ ಮಾಡಿದ್ದು: ಕುಮಾರಸ್ವಾಮಿ
ಜಮೀನಿಗೆ ₹ 62 ಕೋಟಿ ಕೇಳುವ ಸಿಎಂ ರೈತರ ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ಜಮೀನಿಗೆ ₹ 62 ಕೋಟಿ ಕೇಳುವ ಸಿಎಂ ರೈತರ ಬಗ್ಗೆ ಯೋಚಿಸಿದರೇ? ಕುಮಾರಸ್ವಾಮಿ
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಮಂಗಳೂರು-ಮೂಡಬಿದರೆ ರಸ್ತೆಯಲ್ಲಿ ಗುಡ್ಡಕುಸಿತವುಂಟಾಗುವ ಭೀತಿ!
ಕರಾವಳಿ ಪ್ರಾಂತ್ಯದಲ್ಲಿ ನಿಲ್ಲದ ಮಳೆ ಅಬ್ಬರ, ಅರಬ್ಬೀ ಸಮುದ್ರ ಪ್ರಕ್ಷುಬ್ದ
ಕರಾವಳಿ ಪ್ರಾಂತ್ಯದಲ್ಲಿ ನಿಲ್ಲದ ಮಳೆ ಅಬ್ಬರ, ಅರಬ್ಬೀ ಸಮುದ್ರ ಪ್ರಕ್ಷುಬ್ದ
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘
‘ದರ್ಶನ್ ಆರೋಪಿ , ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ‘