AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paytm: ಪೇಟಿಎಂನಿಂದ 20,000 ಫೀಲ್ಡ್ ಸೇಲ್ಸ್​ ಎಕ್ಸ್​ಕ್ಯೂಟಿವ್ಸ್​ಗಳ ನೇಮಕ

ಪೇಟಿಎಂ ಐಪಿಒ (Paytm IPO) ಸಿದ್ಧತೆ ನಡೆಸಿರುವಾಗ ದೇಶದಾದ್ಯಂತ 20,000 ಫೀಲ್ಡ್ ಸೇಲ್ಸ್​ ಎಕ್ಸ್​ಕ್ಯೂಟಿವ್ಸ್​ಗಳನ್ನು ನೇಮಿಸಿಕೊಳ್ಳಲಿದೆ. ಫೋನ್​ಪೇ, ಗೂಗಲ್​ ಪೇದಂಥ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಫಿನ್​ಟೆಕ್​ ಕಂಪೆನಿಯಾದ ಪೇಟಿಎಂನಿಂದ ಈ ತೀರ್ಮಾನ ಬಂದಿದೆ. ಈಗ ನೇಮಕ ಆಗುವವರು ಪ್ರತಿ ತಿಂಗಳು 35,000 ರೂಪಾಯಿ ತನಕ ಗಳಿಸಬಹುದಾಗಿದೆ. ಅವರನ್ನು ಪೇಟಿಎಂನ ಕ್ಯೂಆರ್​ ಕೋಡ್​ಗಳು, ಪಿಒಎಸ್​ ಮಶೀನ್​ಗಳು, ಪೇಟಿಎಂ ಸೌಂಡ್​ಬಾಕ್ಸ್ ಮತ್ತಿತರ ಉತ್ಪನ್ನಗಳನ್ನು ಒಳಗೊಂಡ ಪೋರ್ಟ್​ಫೋಲಿಯೋವನ್ನು ಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತದೆ. ಇದರ ಜತೆ ಜತೆಗೆ ವ್ಯಾಲೆಟ್, ಯುಪಿಐ, ಪೇಟಿಎಂ […]

Paytm: ಪೇಟಿಎಂನಿಂದ 20,000 ಫೀಲ್ಡ್ ಸೇಲ್ಸ್​ ಎಕ್ಸ್​ಕ್ಯೂಟಿವ್ಸ್​ಗಳ ನೇಮಕ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 28, 2021 | 12:30 PM

Share

ಪೇಟಿಎಂ ಐಪಿಒ (Paytm IPO) ಸಿದ್ಧತೆ ನಡೆಸಿರುವಾಗ ದೇಶದಾದ್ಯಂತ 20,000 ಫೀಲ್ಡ್ ಸೇಲ್ಸ್​ ಎಕ್ಸ್​ಕ್ಯೂಟಿವ್ಸ್​ಗಳನ್ನು ನೇಮಿಸಿಕೊಳ್ಳಲಿದೆ. ಫೋನ್​ಪೇ, ಗೂಗಲ್​ ಪೇದಂಥ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಫಿನ್​ಟೆಕ್​ ಕಂಪೆನಿಯಾದ ಪೇಟಿಎಂನಿಂದ ಈ ತೀರ್ಮಾನ ಬಂದಿದೆ. ಈಗ ನೇಮಕ ಆಗುವವರು ಪ್ರತಿ ತಿಂಗಳು 35,000 ರೂಪಾಯಿ ತನಕ ಗಳಿಸಬಹುದಾಗಿದೆ. ಅವರನ್ನು ಪೇಟಿಎಂನ ಕ್ಯೂಆರ್​ ಕೋಡ್​ಗಳು, ಪಿಒಎಸ್​ ಮಶೀನ್​ಗಳು, ಪೇಟಿಎಂ ಸೌಂಡ್​ಬಾಕ್ಸ್ ಮತ್ತಿತರ ಉತ್ಪನ್ನಗಳನ್ನು ಒಳಗೊಂಡ ಪೋರ್ಟ್​ಫೋಲಿಯೋವನ್ನು ಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತದೆ. ಇದರ ಜತೆ ಜತೆಗೆ ವ್ಯಾಲೆಟ್, ಯುಪಿಐ, ಪೇಟಿಎಂ ಪೋಸ್ಟ್​ ಪೇಯ್ಡ್, ವರ್ತಕರ ಸಾಲ ಹಾಗೂ ಇನ್ಷೂರೆನ್ಸ್​ ಪ್ರಾಡಕ್ಟ್​ಗಳ ಬಗ್ಗೆ ಕೂಡ ಪ್ರಚಾರ ಮಾಡಲಾಗುತ್ತದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪೇಟಿಎಂನ ವಕ್ತಾರರು ಯಾವುದೇ ಹೇಳಿಕೆ ನೀಡಿಲ್ಲ. ನೋಯ್ಡಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಪೇಟಿಎಂ, ಈಚೆಗಷ್ಟೇ ಫೀಲ್ಡ್ ಸೇಲ್ಸ್ ಎಕ್ಸ್​ಕ್ಯೂಟಿವ್ ಪ್ರೋಗ್ರಾಮ್ ಆರಂಭಿಸಿದೆ. ಪದವಿಪೂರ್ವ ಹಂತದವರಿಗೆ ಉದ್ಯೋಗಾವಕಾಶ ಒದಗಿಸುವ ಗುರಿಯನ್ನು ಹಾಕಿಕೊಂಡಿದೆ.

ಅಕ್ಟೋಬರ್ ತಿಂಗಳ ಹೊತ್ತಿಗೆ 16,600 ಕೋಟಿ ರೂಪಾಯಿ ಮೊತ್ತದ ಐಪಿಒಗೆ ಪೇಟಿಎಂ ಕಂಪೆನಿ ಸಿದ್ಧತೆ ನಡೆಸಿದೆ. ಮೇ ತಿಂಗಳ ಹೊತ್ತಿಗೆ ಯುಪಿಐ ವಹಿವಾಟಿನಲ್ಲಿ ಪೇಟಿಎಂ ಮಾರುಕಟ್ಟೆ ಷೇರು ಶೇ 11ರಷ್ಟು ಪಾಲು ಹೊಂದಿತ್ತು. ಫೋನ್​ಪೇ ಶೇ 45ರಷ್ಟು, ಗೂಗಲ್ ಪೇ ಶೇ 35ರಷ್ಟು ಪಾಲು ಹೊಂದಿದೆ ಎಂದು ಎನ್​ಪಿಸಿಐ ದತ್ತಾಂಶಗಳಿಂದ ತಿಳಿದುಬಂದಿದೆ. ಈ ತಿಂಗಳ ಆರಂಭದಲ್ಲಿ ಪ್ರಾಸ್ಪೆಕ್ಟಸ್ ಕರಡಿನಲ್ಲಿ ತಿಳಿಸಿರುವಂತೆ, ಪೇಟಿಎಂ ಮೌಲ್ಯವು 1600 ಕೋಟಿ ಅಮೆರಿಕನ್ ಡಾಲರ್ ಎನ್ನಲಾಗಿದೆ. ಗ್ರಾಹಕರು ಹಾಗೂ ವರ್ತಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಐಪಿಒ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಬಳಸಲಾಗುವುದು.

ಇದನ್ನೂ ಓದಿ: Paytm: ಇಂಡಸ್​ಇಂಡ್ ಬ್ಯಾಂಕ್ ಎಫ್​ಡಿಯ ಮೂಲಕವೂ ಪೇಟಿಎಂ ಬಳಕೆದಾರರು ತಕ್ಷಣ ಪಾವತಿ ಮಾಡಬಹುದು

(Paytm To Recruit 20000 Sales Executives Ahead Of IPO Here Is The Details)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು