ಪೇಟಿಎಂ ಐಪಿಒ (Paytm IPO) ಸಿದ್ಧತೆ ನಡೆಸಿರುವಾಗ ದೇಶದಾದ್ಯಂತ 20,000 ಫೀಲ್ಡ್ ಸೇಲ್ಸ್ ಎಕ್ಸ್ಕ್ಯೂಟಿವ್ಸ್ಗಳನ್ನು ನೇಮಿಸಿಕೊಳ್ಳಲಿದೆ. ಫೋನ್ಪೇ, ಗೂಗಲ್ ಪೇದಂಥ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಫಿನ್ಟೆಕ್ ಕಂಪೆನಿಯಾದ ಪೇಟಿಎಂನಿಂದ ಈ ತೀರ್ಮಾನ ಬಂದಿದೆ. ಈಗ ನೇಮಕ ಆಗುವವರು ಪ್ರತಿ ತಿಂಗಳು 35,000 ರೂಪಾಯಿ ತನಕ ಗಳಿಸಬಹುದಾಗಿದೆ. ಅವರನ್ನು ಪೇಟಿಎಂನ ಕ್ಯೂಆರ್ ಕೋಡ್ಗಳು, ಪಿಒಎಸ್ ಮಶೀನ್ಗಳು, ಪೇಟಿಎಂ ಸೌಂಡ್ಬಾಕ್ಸ್ ಮತ್ತಿತರ ಉತ್ಪನ್ನಗಳನ್ನು ಒಳಗೊಂಡ ಪೋರ್ಟ್ಫೋಲಿಯೋವನ್ನು ಪ್ರಚಾರ ಮಾಡಲು ಬಳಸಿಕೊಳ್ಳಲಾಗುತ್ತದೆ. ಇದರ ಜತೆ ಜತೆಗೆ ವ್ಯಾಲೆಟ್, ಯುಪಿಐ, ಪೇಟಿಎಂ ಪೋಸ್ಟ್ ಪೇಯ್ಡ್, ವರ್ತಕರ ಸಾಲ ಹಾಗೂ ಇನ್ಷೂರೆನ್ಸ್ ಪ್ರಾಡಕ್ಟ್ಗಳ ಬಗ್ಗೆ ಕೂಡ ಪ್ರಚಾರ ಮಾಡಲಾಗುತ್ತದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪೇಟಿಎಂನ ವಕ್ತಾರರು ಯಾವುದೇ ಹೇಳಿಕೆ ನೀಡಿಲ್ಲ. ನೋಯ್ಡಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಪೇಟಿಎಂ, ಈಚೆಗಷ್ಟೇ ಫೀಲ್ಡ್ ಸೇಲ್ಸ್ ಎಕ್ಸ್ಕ್ಯೂಟಿವ್ ಪ್ರೋಗ್ರಾಮ್ ಆರಂಭಿಸಿದೆ. ಪದವಿಪೂರ್ವ ಹಂತದವರಿಗೆ ಉದ್ಯೋಗಾವಕಾಶ ಒದಗಿಸುವ ಗುರಿಯನ್ನು ಹಾಕಿಕೊಂಡಿದೆ.
ಅಕ್ಟೋಬರ್ ತಿಂಗಳ ಹೊತ್ತಿಗೆ 16,600 ಕೋಟಿ ರೂಪಾಯಿ ಮೊತ್ತದ ಐಪಿಒಗೆ ಪೇಟಿಎಂ ಕಂಪೆನಿ ಸಿದ್ಧತೆ ನಡೆಸಿದೆ. ಮೇ ತಿಂಗಳ ಹೊತ್ತಿಗೆ ಯುಪಿಐ ವಹಿವಾಟಿನಲ್ಲಿ ಪೇಟಿಎಂ ಮಾರುಕಟ್ಟೆ ಷೇರು ಶೇ 11ರಷ್ಟು ಪಾಲು ಹೊಂದಿತ್ತು. ಫೋನ್ಪೇ ಶೇ 45ರಷ್ಟು, ಗೂಗಲ್ ಪೇ ಶೇ 35ರಷ್ಟು ಪಾಲು ಹೊಂದಿದೆ ಎಂದು ಎನ್ಪಿಸಿಐ ದತ್ತಾಂಶಗಳಿಂದ ತಿಳಿದುಬಂದಿದೆ. ಈ ತಿಂಗಳ ಆರಂಭದಲ್ಲಿ ಪ್ರಾಸ್ಪೆಕ್ಟಸ್ ಕರಡಿನಲ್ಲಿ ತಿಳಿಸಿರುವಂತೆ, ಪೇಟಿಎಂ ಮೌಲ್ಯವು 1600 ಕೋಟಿ ಅಮೆರಿಕನ್ ಡಾಲರ್ ಎನ್ನಲಾಗಿದೆ. ಗ್ರಾಹಕರು ಹಾಗೂ ವರ್ತಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಐಪಿಒ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಬಳಸಲಾಗುವುದು.
ಇದನ್ನೂ ಓದಿ: Paytm: ಇಂಡಸ್ಇಂಡ್ ಬ್ಯಾಂಕ್ ಎಫ್ಡಿಯ ಮೂಲಕವೂ ಪೇಟಿಎಂ ಬಳಕೆದಾರರು ತಕ್ಷಣ ಪಾವತಿ ಮಾಡಬಹುದು
(Paytm To Recruit 20000 Sales Executives Ahead Of IPO Here Is The Details)