ಮಕ್ಕಳಿಗೆಂದು ಎಲ್ಐಸಿ ಹೊಸ ಇನ್ಷೂರೆನ್ಸ್ ಪಾಲಿಸಿ ರೂಪಿಸಿದೆ. ಎಲ್ಐಸಿ ಅಮೃತಬಾಲ್ (LIC Amritbaal) ಪ್ಲಾನ್ ಅನ್ನು ಫೆಬ್ರುವರಿ 16, ಶುಕ್ರವಾರದಂದು ಅನಾವರಣಗೊಳಿಸಲಾಗಿದೆ. ಮಗುವಿನ ಓದು ಮತ್ತಿತರ ಅಗತ್ಯತೆಗಳನ್ನು ಪೂರೈಸಿಸಲು ಗಮನದಲ್ಲಿರಿಸಿಕೊಂಡು ಎಲ್ಐಸಿ ರೂಪಿಸಿರುವ ಉಳಿತಾಯ ಮತ್ತು ಜೀವ ವಿಮಾ ಪಾಲಿಸಿ ಇದಾಗಿದೆ. ಸಿಂಗಲ್ ಪ್ರೀಮಿಯಮ್ ಸೌಲಭ್ಯವೂ ಇದೆ. ಹಾಗೆಯೇ, ವಿವಿಧ ಅವಧಿಯವರೆಗೆ ಪ್ರೀಮಿಯಮ್ ಕಟ್ಟುವ ಅವಕಾಶವೂ ಇದೆ. ಕನಿಷ್ಠ ಭರವಸೆ ಮೊತ್ತ ಅಥವಾ ಸಮ್ ಅಶೂರ್ಡ್ 2 ಲಕ್ಷ ರೂ ಆಗಿದೆ. ಜೊತೆಗೆ ಗ್ಯಾರಂಟಿ ಸೇರ್ಪಡೆಗಳೂ (Guaranteed Addition) ಸಿಗುತ್ತವೆ.
ಎಲ್ಐಸಿ ಅಮೃತ್ಬಾಲ್ ಇನ್ಷೂರೆನ್ಸ್ ಸ್ಕೀಮ್ ಅನ್ನು ಮಗುವಿನ ಹೆಸರಿನಲ್ಲಿ ಪಡೆಯಬಹುದು. ಮಗುವಿನ ವಯಸ್ಸು ಒಂದು ತಿಂಗಳಾದರೂ ಆಗಿರಬೇಕು. ಗರಿಷ್ಠ ವಯಸ್ಸು 13 ವರ್ಷ ಎಂದು ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಬೇರೆ ಬೇರೆ ಸ್ಕೀಮ್ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್
ಸಿಂಗಲ್ ಪ್ರೀಮಿಯಮ್ ಮತ್ತು ಲಿಮಿಟೆಡ್ ಪ್ರೀಮಿಯಮ್ ಪಾವತಿ ಆಯ್ಕೆಗಳಿವೆ. ಹಾಗೆಯೇ, ಕಿರು ಅವಧಿ ಮತ್ತು ದೀರ್ಘ ಅವಧಿ ಪ್ರೀಮಿಯಮ್ ಕಟ್ಟುವ ಆಯ್ಕೆಗಳೂ ಇವೆ. ಐದು ವರ್ಷದಿಂದ 25 ವರ್ಷದವರೆಗೆ ಪಾಲಿಸಿ ಪ್ರೀಮಿಯಮ್ ಅವಧಿ ಇದೆ.
ಶಾರ್ಟ್ ಪ್ರೀಮಿಯಮ್ ಪೇಮೆಂಟ್ನಲ್ಲಿ 5, 6, ಮತ್ತು 7 ವರ್ಷದ ಆಯ್ಕೆಗಳಿವೆ. ಲಾಂಗ್ ಪ್ರೀಮಿಯಮ್ ಪೇಮೆಂಟ್ನಲ್ಲಿ 25 ವರ್ಷದವರೆಗೆ ಆಯ್ಕೆ ಇದೆ.
ಇಲ್ಲಿ ಬೇಸಿಕ್ ಸಮ್ ಅಶೂರ್ಡ್ ಮೊತ್ತ ಕನಿಷ್ಠ 2 ಲಕ್ಷ ರೂ ಆಗಿರುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪಾಲಿಸಿ ಮಾಡಿಸಬಹುದು. ಅದಕ್ಕೆ ಮಿತಿ ಇಲ್ಲ. ಇನ್ನು, ಪಾಲಿಸಿ ಆರಂಭವಾದ ಬಳಿಕ ಪ್ರತೀ ವರ್ಷಾಂತ್ಯದಲ್ಲೂ ನಿಮ್ಮ ಬೇಸಿಕ್ ಸಮ್ ಅಶ್ಯೂರ್ಡ್ ಮೊತ್ತಕ್ಕೆ ಸಾವಿರಕ್ಕೆ 80 ರೂನಂತೆ ಗ್ಯಾರಂಟಿ ಸೇರ್ಪಡೆ ಹಣವನ್ನು ಸೇರಿಸಲಾಗುತ್ತದೆ. ಪಾಲಿಸಿ ಅವಧಿಯವರೆಗೂ ಇದು ವರ್ಷ ವರ್ಷ ಸೇರ್ಪಡೆಯಾಗುತ್ತಿರುತ್ತದೆ.
ಇದನ್ನೂ ಓದಿ: ಎಲ್ಐಸಿಯಿಂದ ಇಂಡೆಕ್ಸ್ ಪ್ಲಸ್ ಹೊಸ ಪಾಲಿಸಿ; ಷೇರುಪೇಟೆ ಬೆಳವಣಿಗೆಯ ಲಾಭ ಪಡೆಯಿರಿ
ಉದಾಹರಣೆಗೆ, ನಿಮ್ಮ ಪಾಲಿಸಿಯಲ್ಲಿ ಬೇಸಿಕ್ ಸಮ್ ಅಶ್ಯೂರ್ಡ್ ಮೊತ್ತ 2 ಲಕ್ಷ ರೂ ಆಗಿದ್ದರೆ ನಿಮಗೆ ಪ್ರತೀ ವರ್ಷ 16,000 ರೂ ಹಣವು ಗ್ಯಾರಂಟೀಡ್ ಅಡಿಶನ್ ಆಗಿ ಸೇರ್ಪಡೆಯಾಗುತ್ತದೆ. ಪಾಲಿಸಿ ಮೆಚ್ಯೂರಿಟಿ ಆದಾಗ ಮೂಲ ಭರವಸೆ ಮೊತ್ತದ ಜೊತೆಗೆ ಗ್ಯಾರಂಟಿ ಸೇರ್ಪಡೆ ಮೊತ್ತವೂ ಸೇರಿಸಿ ಬರುತ್ತದೆ. ನಿಗೆ ಬೇಕೆಂದರೆ ಮೆಚ್ಯೂರಿಟಿ ಆದ ಬಳಿಕ ಕಂತುಗಳಲ್ಲಿಯೂ ಹಣವನ್ನು ಪಡೆಯಬಹುದು. ಈ ಪಾಲಿಸಿಯಲ್ಲಿ ಡೆತ್ ಬೆನಿಫಿಟ್ ಕೂಡ ಇದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ