AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Index Plus: ಎಲ್​ಐಸಿಯಿಂದ ಇಂಡೆಕ್ಸ್ ಪ್ಲಸ್ ಹೊಸ ಪಾಲಿಸಿ; ಷೇರುಪೇಟೆ ಬೆಳವಣಿಗೆಯ ಲಾಭ ಪಡೆಯಿರಿ

Unit Linked Policy: ಎಲ್​ಐಸಿ ಸಂಸ್ಥೆ ಇಂಡೆಕ್ಸ್ ಪ್ಲಸ್ ಎಂಬ ಲೈಫ್ ಇನ್ಷೂರೆನ್ಸ್ ಮತ್ತು ಉಳಿತಾಯ ತರುವ ಪಾಲಿಸಿಯನ್ನು ಬಿಡುಗಡೆ ಮಾಡಿದೆ. 90 ದಿನದ ಮಗುವಿನಿಂದ ಹಿಡಿದು 60 ವರ್ಷದ ಹಿರಿಯವರೆಗೆ ಯಾರು ಬೇಕಾದರೂ ಎಲ್​ಐಸಿ ಇಂಡೆಕ್ಸ್ ಪ್ಲಸ್ ಪಾಲಿಸಿ ಪಡೆಯಬಹುದು. ಕನಿಷ್ಠ ಪ್ರೀಮಿಯಮ್ ಹಣ ತಿಂಗಳಿಗೆ 2,500 ರೂನಿಂದ ಆರಂಭವಾಗುತ್ತದೆ. ಪ್ರೀಮಿಯಮ್ ಹಣವನ್ನು ಹೂಡಿಕೆ ಮಾಡಲು ನಿಫ್ಟಿ100 ಮತ್ತು ನಿಫ್ಟಿ50 ಇಂಡೆಕ್ಸ್ ಆಯ್ಕೆಗಳು ಇವೆ.

LIC Index Plus: ಎಲ್​ಐಸಿಯಿಂದ ಇಂಡೆಕ್ಸ್ ಪ್ಲಸ್ ಹೊಸ ಪಾಲಿಸಿ; ಷೇರುಪೇಟೆ ಬೆಳವಣಿಗೆಯ ಲಾಭ ಪಡೆಯಿರಿ
ಎಲ್​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 07, 2024 | 6:02 PM

Share

ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್​ಐಸಿ (LIC) ಇದೀಗ ಮಾರುಕಟ್ಟೆ ಜೋಡಿತವಾದ (Unit linked policy) ಹೊಸ ಇನ್ಷೂರೆನ್ಸ್ ಸ್ಕೀಮ್ ಹೊರತಂದಿದೆ. ಎಲ್​ಐಸಿ ಇಂಡೆಕ್ಸ್ ಪ್ಲಸ್ ಪಾಲಿಸಿ (LIC Index Plus Policy) ಮೊನ್ನೆ ಸೋಮವಾರ (ಫೆ. 5) ಬಿಡುಗಡೆ ಆಗಿದೆ. ಇದು ಜೀವ ವಿಮೆ ಮತ್ತು ಉಳಿತಾಯ ಒದಗಿಸುವ ಯೋಜನೆಯಾಗಿದ್ದು, ಷೇರುಪೇಟೆ ಲಾಭ ತಂದುಕೊಡುತ್ತದೆ. 90 ದಿನ ಮಗುವಿನಿಂದ ಹಿಡಿದು 60 ವರ್ಷ ಹಿರಿಯವರೆಗೆ ಈ ಪಾಲಿಸಿ ಪಡೆಯಬಹುದು. ಕನಿಷ್ಠ ಖಾತ್ರಿ ಮೊತ್ತ ಅಥವಾ ಬೇಸಿಕ್ ಸಮ್ ಅಷ್ಯೂರ್ಡ್ (Basi sum assured) ಎಷ್ಟು ಎಂಬುದರ ಆಧಾರದ ಮೇಲೆ ಪಾಲಿಸಿ ಪಡೆಯಲು ಗರಿಷ್ಠ ವಯಸ್ಸು 50-60 ವರ್ಷ ಇರುತ್ತದೆ.

ಷೇರು ಮಾರುಕಟ್ಟೆಯ ಎರಡು ಫಂಡ್​ಗಳ ಆಯ್ಕೆ

ನಿಮ್ಮ ಪಾಲಿಸಿಯ ಎಲ್ಲಾ ಹಣವನ್ನು ಪೂರ್ಣವಾಗಿ ಷೇರು ಮಾರುಕಟ್ಟೆಗೆ ತೊಡಗಿಸಲಾಗುತ್ತದೆ. ಇದಕ್ಕೆ ಎರಡು ಆಯ್ಕೆಗಳನ್ನು ಮುಂದಿಡಲಾಗಿದೆ. ನಿಫ್ಟಿ50 (ಫ್ಲೆಕ್ಸಿ ಸ್ಮಾರ್ಟ್ ಗ್ರೋತ್ ಫಂಡ್) ಮತ್ತು ನಿಫ್ಟಿ100 (ಫ್ಲೆಕ್ಸಿ ಗ್ರೋತ್ ಫಂಡ್) ಇಂಡೆಕ್ಸ್ ಮ್ಯುಚುವಲ್ ಫಂಡ್​ಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಳ್ಳಬೇಕು. ನಿಮ್ಮ ಪ್ರೀಮಿಯಮ್ ಹಣ ಅದೇ ಫಂಡ್​ನಲ್ಲಿ ಹೂಡಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಸಾವರನ್ ಗೋಲ್ಡ್ ಬಾಂಡ್ ಫೆ. 12ರಿಂದ 16ರವರೆಗೆ; ಇದು ಈ ವರ್ಷದ ಕೊನೆಯ ಸರಣಿ

ಪಾಲಿಸಿ ಅವಧಿ ಕನಿಷ್ಠ 10ರಿಂದ 15 ವರ್ಷ ಇರುತ್ತದೆ. ಗರಿಷ್ಠ ಅವಧಿ 25 ವರ್ಷ ಆಗಿರುತ್ತದೆ. ಇಷ್ಟು ವರ್ಷದಲ್ಲಿ ಇಂಡೆಕ್ಸ್ ಫಂಡ್​ನಲ್ಲಿ ಮಾಡಿದ ಹೂಡಿಕೆ ಎಷ್ಟು ಬೆಳೆದಿರುತ್ತದೆ ಅಷ್ಟು ಮೊತ್ತದ ರಿಟರ್ನ್ ನಿಮಗೆ ಸಿಗುತ್ತದೆ.

ಎಲ್​ಐಸಿ ಇಂಡೆಕ್ಸ್ ಪ್ಲಸ್ ಪ್ರೀಮಿಯಮ್ ಎಷ್ಟು?

ಈ ಇಂಡೆಕ್ಸ್ ಪ್ಲಸ್ ಪಾಲಿಸಿಯಲ್ಲಿ ಕನಿಷ್ಠ ಪ್ರೀಮಿಯಮ್ ಮೊತ್ತ ವರ್ಷಕ್ಕೆ 30,000 ರೂ ಇದೆ. ನೀವು ವರ್ಷಕ್ಕೆ ಒಮ್ಮೆ ಪ್ರೀಮಿಯಮ್ ಪಾವತಿಸಬಹುದು. ಅಥವಾ ತಿಂಗಳಿಗೊಮ್ಮೆ 2,500 ರೂ ಪ್ರೀಮಿಯಮ್ ಕಟ್ಟಬಹುದು. ಮೂರು ತಿಂಗಳಿಗೆ, ಆರು ತಿಂಗಳಿಗೆ ಬೇಕಾದರೂ ಪ್ರೀಮಿಯಮ್ ಪಾವತಿಸುವ ಆಯ್ಕೆ ಪಡೆಯಬಹುದು.

ಇದನ್ನೂ ಓದಿ: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

ಮೇಲೆ ಹೇಳಿದ್ದು ಕನಿಷ್ಠ ಪ್ರೀಮಿಯಮ್ ಮೊತ್ತ. ನೀವು ಇಚ್ಛಿಸಿದಲ್ಲಿ ಎಷ್ಟು ಬೇಕಾದರೂ ಪ್ರೀಮಿಯಮ್ ಮೊತ್ತ ಆಯ್ಕೆ ಮಾಡಿಕೊಳ್ಳಬಹುದು. ಮೆಚ್ಯೂರಿಟಿ ಅದ ಬಳಿಕ ಫಂಡ್ ಹೂಡಿಕೆ ಬೆಳೆದಿರುವಷ್ಟು ಮೊತ್ತ ನಿಮಗೆ ಸಿಗುತ್ತದೆ. ಜೊತೆಗೆ ಆಕ್ಸಿಡೆಂಟ್ ಡೆತ್ ಫೀಚರ್ ಇದೆ. ಅಪಘಾತದಿಂದ ಮೃತಪಟ್ಟರೆ ವಾರಸುದಾರರಿಗೆ ಪರಿಹಾರ ಸಿಗುತ್ತದೆ. ಈ ಪಾಲಿಸಿಯನ್ನು ಆನ್​ಲೈನ್​ನಲ್ಲೇ ಪಡೆಯಬಹುದಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು