ದಿನಕ್ಕೆ 210 ರೂ ಕಟ್ಟಿರಿ; ತಿಂಗಳಿಗೆ 5,000 ರೂ ಪಿಂಚಣಿ ಪಡೆಯಿರಿ; ಇದು ಎಪಿವೈ ಸ್ಕೀಮ್ ಅನುಕೂಲ

|

Updated on: Oct 13, 2023 | 6:54 PM

Atal Pension Scheme: ಎಪಿವೈ ಸ್ಕೀಮ್, 18ರಿಂದ 40 ವರ್ಷದೊಳಗಿನ ಕಡಿಮೆ ಆದಾಯ ಗುಂಪಿನ ವ್ಯಕ್ತಿಗಳ ನಿವೃತ್ತಿ ಜೀವನಕ್ಕೆ ಆಧಾರವಾಗಿರಲೆಂದು ರೂಪಿಸಿದ ಯೋಜನೆ. 60 ವರ್ಷದ ಬಳಿಕ ತಿಂಗಳಿಗೆ 1,000 ರೂನಿಂದ 5,000 ರೂವರೆಗೆ ಪಿಂಚಣಿ ಪಡೆಯಲು ಈ ಯೋಜನೆ ಸಹಾಯವಾಗುತ್ತದೆ. ಈ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆಯ ಜೊತೆಗೆ ಸರ್ಕಾರ ಕೂಡ ವರ್ಷಕ್ಕೆ 1,000 ರೂವರೆಗೂ ಧನಸಹಾಯ ಒದಗಿಸುತ್ತದೆ.

ದಿನಕ್ಕೆ 210 ರೂ ಕಟ್ಟಿರಿ; ತಿಂಗಳಿಗೆ 5,000 ರೂ ಪಿಂಚಣಿ ಪಡೆಯಿರಿ; ಇದು ಎಪಿವೈ ಸ್ಕೀಮ್ ಅನುಕೂಲ
ಎಪಿವೈ ಸ್ಕೀಮ್​
Follow us on

ಇವತ್ತು ಸಂಪಾದನೆ ಮಾಡುವಾಗ ಹಣ ಉಳಿಸದೇ, ಬೆಳೆಸದೇ ಉಳಿದರೆ ನಿವೃತ್ತಿ ಬಳಿಕ ಪ್ರಶ್ನಾರ್ಥಕ ಚಿಹ್ನೆ ಎದುರಿಸಬೇಕಾಗುತ್ತದೆ. ಮಾಸಿಕ ಪಿಂಚಣಿ (pension) ಬರುವ ರೀತಿಯಲ್ಲಿ ನೀವು ಹಣಕಾಸು ಯೋಜನೆಗಳನ್ನು ಸಾಕಷ್ಟು ಮುಂಚಿತವಾಗಿ ಆರಂಭಿಸಬೇಕು. ನಿಮಗೆ ಎಷ್ಟು ಪಿಂಚಣಿ ಬೇಕು ಅಥವಾ ಮಾಸಿಕ ಆದಾಯ ಎಷ್ಟು ಬೇಕು ಎಂದು ಗುರಿ ನಿಗದಿಪಡಿಸಿಕೊಂಡು ಅದಕ್ಕೆ ತಕ್ಕಂತೆ ಹಣಕಾಸು ಹೂಡಿಕೆ ಮಾಡಬೇಕು. ಈ ರೀತಿ ಹೂಡಿಕೆ ಆಯ್ಕೆಗಳು ಹಲವಿವೆ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದರೆ ಹೈ ರಿಟರ್ನ್ ಸಾಧ್ಯತೆ ಹೆಚ್ಚಿರುತ್ತದೆಯಾದರೂ ರಿಸ್ಕ್ ಕೂಡ ಹೆಚ್ಚಿರುತ್ತದೆ. ರಿಸ್ಕ್ ಇಲ್ಲದ ಹೂಡಿಕೆ ಆಯ್ಕೆಗಳಲ್ಲಿ ಸರ್ಕಾರಿ ಪ್ರಾಯೋಕತ್ವದ ಕೆಲ ಪಿಂಚಣಿ ಸ್ಕೀಮ್​ಗಳಿವೆ. ಅದರಲ್ಲಿ ಅಟಲ್ ಪೆನ್ಷನ್ ಯೋಜನಾ (Atal Pension Scheme) ಒಂದು.

ಏನಿದು ಎಪಿವೈ ಯೋಜನೆ?

ಇದು 18ರಿಂದ 40 ವರ್ಷದೊಳಗಿನ ಕಡಿಮೆ ಆದಾಯ ಗುಂಪಿನ ವ್ಯಕ್ತಿಗಳ ನಿವೃತ್ತಿ ಜೀವನಕ್ಕೆ ಆಧಾರವಾಗಿರಲೆಂದು ರೂಪಿಸಿದ ಯೋಜನೆ. 60 ವರ್ಷದ ಬಳಿಕ ತಿಂಗಳಿಗೆ 1,000 ರೂನಿಂದ 5,000 ರೂವರೆಗೆ ಪಿಂಚಣಿ ಪಡೆಯಲು ಈ ಯೋಜನೆ ಸಹಾಯವಾಗುತ್ತದೆ. ಈ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆಯ ಜೊತೆಗೆ ಸರ್ಕಾರ ಕೂಡ ವರ್ಷಕ್ಕೆ 1,000 ರೂವರೆಗೂ ಧನಸಹಾಯ ಒದಗಿಸುತ್ತದೆ.

ಇದನ್ನೂ ಓದಿ: ಸಾಲದ ಕಂತು ಕಟ್ಟಲು ಸಾಧ್ಯವಾಗಲಿಲ್ಲವಾ? ಕ್ರೆಡಿಟ್ ಸ್ಕೋರ್ ಹೋದೀತೆಂಬ ಭಯವಾ? ನಿಮ್ಮ ಮುಂದಿರುವ ಆಯ್ಕೆಗಳು ಇಲ್ಲಿವೆ

ತಿಂಗಳಿಗೆ 5,000 ರೂ ಪಿಂಚಣಿ ಪಡೆಯುವುದು ಹೇಗೆ?

ಅಟಲ್ ಪಿಂಚಣಿ ಯೋಜನೆ ಪಡೆಯಲು ಗರಿಷ್ಠ ವಯಸ್ಸು 40 ವರ್ಷ. ಆ ವಯಸ್ಸಿನಲ್ಲಿ ನೀವು ಸ್ಕೀಮ್ ಪಡೆಯುವುದಾದರೆ 20 ವರ್ಷ ಕಾಲ ಹೂಡಿಕೆ ಮಾಡಬಹುದು. ತಿಂಗಳಿಗೆ 1,454 ರೂನಂತೆ ಹಣ ಪಾವತಿಸುತ್ತಾ ಹೋದರೆ ಇದು 5,000 ರೂಗಳ ಮಾಸಿಕ ಪಿಂಚಣಿ ಪಡೆಯಬಹುದು. ಇನ್ನೂ ಕಡಿಮೆ ಪಿಂಚಣಿ ಬೇಕೆಂದರೆ ಮಾಸಿಕ ಕಂತು ಕಡಿಮೆ ಇರುತ್ತದೆ. ಉದಾಹರಣೆಗೆ, ನೀವು ಮಾಸಿಕ ಪಿಂಚಣಿ 1,000 ರೂ ಬೇಕೆಂದರೆ ತಿಂಗಳಿಗೆ 291 ರೂ ಹೂಡಿಕೆ ಆದರೆ ಸಾಕು.

ಇನ್ನು 18ರ ವಯಸ್ಸಿನಿಂದಲೇ ನೀವು ಈ ಯೋಜನೆಯಲ್ಲಿ ಹೂಡಿಮೆ ಮಾಡುವಿರಾದರೆ ತಿಂಗಳಿಗೆ 210 ರೂ ಕಟ್ಟಿದರೆ 5,000 ರೂ ಮಾಸಿಕ ಪಿಂಚಣಿ ಪಡೆಯಬಹುದು.

ಇದನ್ನೂ ಓದಿ: ಐದು ವರ್ಷದೊಳಗೆ ಪಿಎಫ್ ಹಣ ಹಿಂಪಡೆದರೆ ತೆರಿಗೆ ಕಡಿತ; ಈ ಇಪಿಎಫ್ ನಿಯಮಗಳು ತಿಳಿದಿರಲಿ

ಎಪಿವೈ ಸ್ಕೀಮ್​ಗೆ ಅರ್ಹತೆ ಏನು?

18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಅಟಲ್ ಪೆನ್ಷನ್ ಯೋಜನೆ ಪಡೆಯಬಹುದು. ಆದರೆ, ಇವರು ಬೇರೆ ಯಾವುದೇ ಸರ್ಕಾರಿ ಪ್ರಾಯೋಜಿತ ಸಾಮಾಜಿಕ ಭದ್ರತಾ ಸ್ಕೀಮ್​ಗಳನ್ನು ಹೊಂದಿರಬಾರದು. ಮತ್ತು ತೆರಿಗೆ ಪಾವತಿದಾರರೂ ಆಗಿರಬಾರದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ