ಪರ್ಸನಲ್ ಲೋನ್: ನಿಶ್ಚಿತ ಬಡ್ಡಿದರ ಆಯ್ಕೆಗೆ ಅವಕಾಶ ಇರಬೇಕು: ಆರ್​ಬಿಐ ನಿಯಮ

|

Updated on: Jan 14, 2025 | 1:31 PM

Personal loan rules: ಬ್ಯಾಂಕುಗಳಲ್ಲಿನ ಇಎಂಐಗಳಿರುವ ಪರ್ಸನಲ್ ಲೋನ್ ವಿಚಾರದಲ್ಲಿ ಆರ್​ಬಿಐ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಪರ್ಸನಲ್ ಲೋನ್ ನೀಡುವಾಗ ಬ್ಯಾಂಕುಗಳು ಗ್ರಾಹಕರಿಗೆ ಎಲ್ಲಾ ಮಾಹಿತಿ ಮತ್ತು ಪರಿಣಾಮಗಳ ಬಗ್ಗೆ ವಿವರ ನೀಡಬೇಕು. ಬೆಂಚ್​ಮಾರ್ಕ್ ರೇಟ್ ಬದಲಾದಾಗ ಇಎಂಐನಲ್ಲಿ ಏನು ವ್ಯತ್ಯಾಸ ಆಗುತ್ತದೆ ಎಂಬೆಲ್ಲಾ ವಿವರವನ್ನು ಗ್ರಾಹಕರಿಗೆ ತಿಳಿಸಬೇಕು.

ಪರ್ಸನಲ್ ಲೋನ್: ನಿಶ್ಚಿತ ಬಡ್ಡಿದರ ಆಯ್ಕೆಗೆ ಅವಕಾಶ ಇರಬೇಕು: ಆರ್​ಬಿಐ ನಿಯಮ
ಹಣ
Follow us on

ನವದೆಹಲಿ, ಜನವರಿ 14: ಬ್ಯಾಂಕುಗಳಲ್ಲಿ ನೀವು ಸಾಲ ಪಡೆಯುವಾಗ ಬಡ್ಡಿ ವಿಚಾರದಲ್ಲಿ ಕೆಲ ಆಯ್ಕೆಗಳಿರುತ್ತವೆ. ಸಾಲಕ್ಕೆ ಬಡ್ಡಿದರವು ಗ್ರಾಹಕರಿಂದ ಗ್ರಾಹಕರಿಗೆ ವ್ಯತ್ಯಾಸವಾಗಬಹುದು. ಸಾಮಾನ್ಯವಾಗಿ, ನಿಶ್ಚಿತ ಬಡ್ಡಿದರದಲ್ಲಿ ಸಾಲದ ಆಯ್ಕೆ, ಹಾಗೂ ಫ್ಲೋಟಿಂಗ್ ಬಡ್ಡಿದರದಲ್ಲಿ ಸಾಲ ಪಡೆಯುವ ಆಯ್ಕೆ ನೀಡಲಾಗಿರುತ್ತದೆ. ಫ್ಲೋಟಿಂಗ್ ಇಂಟರೆಸ್ಟ್ ರೇಟ್​ನಲ್ಲಿ ಸಾಲ ಪಡೆದರೆ ಬಡ್ಡಿದರ ಬದಲಾಯಿಸುವ ಸಾಧ್ಯತೆ ಇರುತ್ತದೆ. ಇದೀಗ, ಪರ್ಸನಲ್ ಲೋನ್ ವಿಚಾರದಲ್ಲಿ ಆರ್​ಬಿಐ ಇತ್ತೀಚೆಗೆ ಹೊಸ ನಿಯಮವೊಂದನ್ನು ರೂಪಿಸಿದೆ. ಅದರ ಪ್ರಕಾರ ಪರ್ಸನಲ್ ಲೋನ್​ನಲ್ಲಿ ಗ್ರಾಹಕರು ನಿಶ್ಚಿತ ಬಡ್ಡಿದರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹೊಂದಿರಬೇಕು.

ಆರ್​ಬಿಐ ಹೊರಡಿಸಿದ ಸುತ್ತೋಲೆಯಲ್ಲಿ ಈ ನಿಯಮ ತಿಳಿಸಲಾಗಿದೆ. ಇಎಂಐ ಇರುವ ಪರ್ಸನಲ್ ಲೋನ್​ಗೆ ಈ ನಿಯಮ ಅನ್ವಯ ಆಗುತ್ತದೆ. ಪರ್ಸನಲ್ ಲೋನ್ ನೀಡುವಾಗ ಗ್ರಾಹಕರಿಗೆ ಫಿಕ್ಸೆಡ್ ಇಂಟರೆಸ್ಟ್ ರೇಟ್ ಮತ್ತು ಫ್ಲೋಟಿಂಗ್ ಇಂಟರೆಸ್ಟ್ ರೇಟ್​ನ ಪರಿಣಾಮಗಳ ಬಗ್ಗೆ ವಿವರ ನೀಡಬೇಕು ಎನ್ನುತ್ತದೆ ಈ ನಿಯಮ.

ಇದನ್ನೂ ಓದಿ: ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ

ಫ್ಲೋಟಿಂಗ್ ಇಂಟರೆಸ್ಟ್ ರೇಟ್​ನಲ್ಲಿ ಬಡ್ಡಿದರ ಬದಲಾದಾಗ ಇಎಂಐ ಸಂಯೋಜನೆಯಲ್ಲೂ ಬದಲಾವಣೆ ಆಗುತ್ತದೆ. ಇದನ್ನು ಗ್ರಾಹಕರಿಗೆ ವಿವರಿಸಿ ತಿಳಿಸಿರಬೇಕು. ಬಡ್ಡಿದರ ಬದಲಾವಣೆ ಆಗುವ ಮುನ್ನ ಅದನ್ನು ಗ್ರಾಹಕರ ಗಮನಕ್ಕೆ ತರಬೇಕಾಗುತ್ತದೆ. ಅಷ್ಟೇ ಅಲ್ಲ, ಹಾಲಿ ಬಡ್ಡಿದರ ಮುಂದುವರಿಸುವ ಮತ್ತು ದರ ಬದಲಾವಣೆ ಹೊಂದುವ ಆಯ್ಕೆಗಳು ಗ್ರಾಹಕರಿಗೆ ಇರಬೇಕು. ಗ್ರಾಹಕರು ಹಾಲಿ ಬಡ್ಡಿದರದಲ್ಲೇ ಮುಂದುವರಿಯುವ ಅವಕಾಶ ಹೊಂದಿರಬೇಕು.

ಸಾಲದ ಅವಧಿಯಲ್ಲಿ ಬೆಂಚ್​ಮಾರ್ಕ್ ದರ ಬದಲಾವಣೆ ಕಾರಣದಿಂದ ಇಎಂಐ ಮೊತ್ತ ಮತ್ತು ಇಎಂಐ ಅವಧಿ ಬದಲಾದರೆ ಅದನ್ನು ಸರಿಯಾಗಿ ವಿವರಿಸಿ ತಿಳಿಸಬೇಕು. ಪ್ರತೀ ತ್ರೈಮಾಸಿಕ ವರದಿಯಲ್ಲಿ ತೀರಿಸಲಾಗಿರುವ ಅಸಲು ಹಣ, ಈವರೆಗೆ ಕಟ್ಟಲಾಗಿರುವ ಬಡ್ಡಿಹಣ, ಬಾಕಿ ಉಳಿದಿರುವ ಅಸಲು ಹಣ, ಮುಂದಿನ ಇಎಂಐಗಳ ಮೊತ್ತ, ಇಎಂಐ ಸಂಖ್ಯೆ, ವಾರ್ಷಿಕ ಬಡ್ಡಿದರ ಇವೆಲ್ಲಾ ವಿವರಗಳಿರಬೇಕು.

ಇದನ್ನೂ ಓದಿ: ಮೃತ ವ್ಯಕ್ತಿಯ ಸಾಲಕ್ಕೆ ಕುಟುಂಬಸ್ಥರು ಹೊಣೆಗಾರರಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಡೀಟೇಲ್ಸ್

ಇಲ್ಲಿ ಗ್ರಾಹಕರು ತಮ್ಮ ಸಾಲಕ್ಕೆ ಬಡ್ಡಿದರ ನೀತಿಯನ್ನು ಫ್ಲೋಟಿಂಗ್ ರೇಟ್​ನಿಂದ ಫಿಕ್ಸೆಡ್ ರೇಟ್​ಗೆ ಬದಲಾಯಿಸಿಕೊಳ್ಳಲು, ಅಥವಾ ಫಿಕ್ಸೆಡ್ ರೇಟ್​ನಿಂದ ಫ್ಲೋಟಿಂಗ್ ರೇಟ್​ಗೆ ಬದಲಾಯಿಸಿಕೊಳ್ಳಲು ನಿಗದಿತ ಶುಲ್ಕವನ್ನು ತೆರಬೇಕಾಗಬಹುದು. ಎಷ್ಟು ಶುಲ್ಕ ಎಂಬುದನ್ನು ಬ್ಯಾಂಕುಗಳೇ ನಿರ್ಧರಿಸಬಹುದು. ಈ ಬಗ್ಗೆಯೂ ಬ್ಯಾಂಕು ತನ್ನ ಗ್ರಾಹಕರಿಗೆ ಸಾಲ ನೀಡುವಾಗಲೇ ಸ್ಪಷ್ಟಪಡಿಸಿರಬೇಕು ಎನ್ನುತ್ತದೆ ಆರ್​ಬಿಐ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ