ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ

Reactivating dormant bank accounts: 12 ತಿಂಗಳು ಖಾತೆಯಲ್ಲಿ ವಹಿವಾಟು ಆಗದೇ ಇದ್ದರೆ ಅದನ್ನು ಇನ್ಯಾಕ್ಟಿವ್ ಅಕೌಂಟ್ ಎಂದು ವರ್ಗೀಕರಿಸಬಹುದು. 24 ತಿಂಗಳು ವಹಿವಾಟು ಕಾಣದ ಅಕೌಂಟ್​ಗಳನ್ನು ಡಾರ್ಮಂಟ್ ಅಕೌಂಟ್ ಎಂದು ಪರಿಗಣಿಸಬಹುದು. ಇಂಥ ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಲು ಸಾಧ್ಯ. ಇದರ ವಿವರ ಇಲ್ಲಿದೆ...

ಎಷ್ಟು ಅವಧಿ ವಹಿವಾಟು ನಡೆಯದಿದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ? ಅಕೌಂಟ್ ರೀಆ್ಯಕ್ಟಿವೇಟ್ ಮಾಡುವ ಕ್ರಮ
ಬ್ಯಾಂಕ್ ಖಾತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 13, 2025 | 3:46 PM

ಇವತ್ತು ನಾನಾ ಕಾರಣಗಳಿಗೆ ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿರಬಹುದು. ಹೊಸ ಕೆಲಸಕ್ಕೆ ಸೇರಿದಾಗ ಬೇರೆ ಬ್ಯಾಂಕ್ ಖಾತೆ ಮಾಡಿಸಬೇಕಾಗಬಹುದು. ಉತ್ತಮ ಎಫ್​ಡಿ ದರ ಸಿಗಬಹುದೆಂದು ಮತ್ತೊಂದು ಬ್ಯಾಂಕ್ ಖಾತೆ ಮಾಡಿಸಬಹುದು. ಹೀಗೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೆಚ್ಚಿನ ಜನರು ಹೊಂದಿರುವುದು ಸಹಜ. ಆದರೆ, ವರ್ಷಗಳುರುಳಿದಂತೆ ಕೆಲ ಬ್ಯಾಂಕ್ ಖಾತೆಗಳ ಅಗತ್ಯತೆ ಅಥವಾ ಬಳಕೆ ಕಡಿಮೆ ಆಗುತ್ತಾ ಹೋಗಬಹುದು, ಅಥವಾ ನಿಂತೇ ಹೋಗಬಹುದು. ಕೆಲವೊಮ್ಮೆ ಬ್ಯಾಂಕ್ ಖಾತೆಯಲ್ಲಿ ಇರಲಿ ಬಿಡು ಎಂದು ಒಂದಷ್ಟು ಹಣವನ್ನು ಹಾಗೆ ಬಿಟ್ಟು ಸುಮ್ಮನಾಗಿಬಿಡಬಹುದು. ಹೀಗೆ ವಹಿವಾಟು ಇತ್ಯಾದಿ ಚಟುವಟಿಕೆಯೇ ಇಲ್ಲದ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ ಎಂಬುದು ತಿಳಿದಿರಿ.

ಆರ್​ಬಿಐ ನಿಯಮಗಳ ಪ್ರಕಾರ ನಿರ್ದಿಷ್ಟ ಅವಧಿಯವರೆಗೆ ಯಾವುದೇ ವಹಿವಾಟು ಕಾಣದ ಬ್ಯಾಂಕ್ ಖಾತೆಗಳನ್ನು ಇನ್​ಆ್ಯಕ್ಟಿವ್ ಅಕೌಂಟ್ ಮತ್ತು ಡಾರ್ಮಂಟ್ ಅಕೌಂಟ್​ಗಳೆಂದು ವರ್ಗೀಕರಿಸಲಾಗುತ್ತದೆ. ಇಂಥ ಅಕೌಂಟ್​ಗಳಲ್ಲಿರುವ ಹಣ ಅವು ಆ್ಯಕ್ಟಿವೇಟ್ ಆಗುವವರೆಗೂ ಬಳಕೆಗೆ ಲಭ್ಯ ಇರುವುದಿಲ್ಲ. ಈ ಹಣಕ್ಕೆ ಬಡ್ಡಿ ಕೂಡ ಸಿಗುವುದಿಲ್ಲ. ಝೀರೋ ಬ್ಯಾಲನ್ಸ್ ಇರುವ ಮತ್ತು ಎರಡು ವರ್ಷದಿಂದ ಯಾವುದೇ ವಹಿವಾಟು ಆಗದೇ ಇರುವ ಡಾರ್ಮಂಟ್ ಖಾತೆಗಳನ್ನು ಮುಚ್ಚುವಂತೆ ಬ್ಯಾಂಕುಗಳಿಗೆ ಆರ್​ಬಿಐ ನಿರ್ದೇಶನ ನೀಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮೃತ ವ್ಯಕ್ತಿಯ ಸಾಲಕ್ಕೆ ಕುಟುಂಬಸ್ಥರು ಹೊಣೆಗಾರರಾ? ಕಾನೂನು ಏನು ಹೇಳುತ್ತೆ? ಇಲ್ಲಿದೆ ಡೀಟೇಲ್ಸ್

ಸಾಮಾನ್ಯವಾಗಿ 12 ತಿಂಗಳ ಕಾಲ ಯಾವುದೇ ವಹಿವಾಟು ಕಾಣದಿದ್ದರೆ ಆ ಬ್ಯಾಂಕ್ ಖಾತೆಯನ್ನು ಇನ್ಯಾಕ್ಟಿವ್ ಅಕೌಂಟ್ ಎಂದು ವರ್ಗೀಕರಿಸಲಾಗುತ್ತದೆ. 12ರಿಂದ 24 ತಿಂಗಳ ಕಾಲ ವಹಿವಾಟು ಆಗದೇ ಇದ್ದರೆ ಅಂಥವನ್ನು ಡಾರ್ಮಂಟ್ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ಕೆಲ ಬ್ಯಾಂಕುಗಳಲ್ಲಿ ವಹಿವಾಟು ಅವಧಿ ವಿಚಾರದಲ್ಲಿ ಬೇರೆಯೇ ನಿಯಮ ಇರಬಹುದು.

ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ?

ಇವತ್ತು ಎಲ್ಲಾ ಬ್ಯಾಂಕ್ ಖಾತೆಗಳನ್ನು ಅನ್​ಲೈನ್​ನಲ್ಲೇ ನಿರ್ವಹಿಸಬಹುದು. ಯುಪಿಐ ವ್ಯವಸ್ಥೆ ಬಂದ ಮೇಲೆ ಅವುಗಳ ನಿರ್ವಹಣೆ ಬಹಳ ಸುಲಭ. ವರ್ಷಕ್ಕೊಮ್ಮೆ ಒಂದು ಖಾತೆಗೆ ಹಣ ಹಾಕುವುದು ಅಥವಾ ಅದರಿಂದ ಹಣ ತೆಗೆಯುವುದು ಇವತ್ತು ಸುಲಭವಾಗಿದೆ. ಬ್ಯಾಂಕ್ ಕಚೇರಿಗೆ ಹೋಗುವ ಪ್ರಮೇಯ ಇರುವುದಿಲ್ಲ. ಆದರೆ, ಸಹಕಾರಿ ಬ್ಯಾಂಕುಗಳಂತಹ ಬ್ಯಾಂಕುಗಳಿಗೆ ನೀವು ಕಚೇರಿಗೆ ಹೋಗಿ ವಹಿವಾಟು ನಡೆಸಬೇಕಾಗಬಹುದು. ಹೀಗಾಗಿ, ನಿಮಗೆ ಅಗತ್ಯ ಇರುವ ಬ್ಯಾಂಕ್ ಖಾತೆಗಳನ್ನಷ್ಟೇ ಇಟ್ಟುಕೊಂಡು, ಉಳಿದವನ್ನು ರದ್ದುಗೊಳಿಸುವುದು ಉತ್ತಮ.

ಇದನ್ನೂ ಓದಿ: ಎಷ್ಟು ಥರದ ಇಟಿಎಫ್​ಗಳಿವೆ? ನಿಮಗೆ ಸೂಕ್ತವೆನಿಸಿವ ಫಂಡ್​ಗಳನ್ನು ಆಯ್ದುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ನಿಷ್ಕ್ರಿಯ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸುವ ಕ್ರಮ

ಇನ್ಯಾಕ್ಟಿವ್ ಇರುವ ಮತ್ತು ಡಾರ್ಮಂಟ್ ಆಗಿರುವ ಬ್ಯಾಂಕ್ ಖಾತೆಗಳನ್ನು ಮತ್ತೆ ಸಕ್ರಿಯಗೊಳಿಸಬಹುದು. ಸಾಮಾನ್ಯವಾಗಿ ಆನ್​ಲೈನ್​ನಲ್ಲಿ ಇದಕ್ಕೆ ಅವಕಾಶ ಇರುವುದಿಲ್ಲ. ಬ್ಯಾಂಕ್​ನ ಯಾವುದಾದರೂ ಕಚೇರಿಗೆ ಹೋಗಿ, ಅರ್ಜಿ ಮೂಲಕ ಮನವಿ ಸಲ್ಲಿಸಬೇಕು. ಅರ್ಜಿ ಜೊತೆಗೆ ಮತ್ತೊಮ್ಮೆ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಒಂದಷ್ಟು ಶುಲ್ಕ ಅಥವಾ ದಂಡ ಪಾವತಿಸಬೇಕಾಗುತ್ತದೆ. ಆಗ ಖಾತೆ ರೀಆ್ಯಕ್ಟಿವೇಟ್ ಆಗುತ್ತದೆ.

ನಿಮ್ಮ ಖಾತೆ ವರ್ಷದಿಂದ ವಹಿವಾಟು ಕಾಣದೇ ಹೋದರೆ ಬ್ಯಾಂಕ್​ನಿಂದ ನಿಮಗೆ ನೋಟೀಸ್ ಬರಬಹುದು. ಅದನ್ನು ಗಮನಿಸಿ ನೀವು 90 ದಿನದೊಳಗೆ ವಹಿವಾಟು ಮಾಡಿದರೆ ಖಾತೆ ಸಕ್ರಿಯಗೊಳ್ಳುತ್ತದೆ. ಇಲ್ಲದಿದ್ದರೆ ಹೆಚ್ಚುವರಿ ಶುಲ್ಕ ಪಾವತಿಸಿ ಅಕೌಂಟ್ ಸಕ್ರಿಯಗೊಳಿಸಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದ ಮೊದಲ ದಿನವಾದ ಇಂದು 1 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ಕಾರ್ಯಕರ್ತರಿಂದಲೇ ಸರ್ಕಾರ ಅಂತ ಹತ್ತು ಸಲ ಹೇಳಿದ್ದೇನೆ: ಸತೀಶ್ ಜಾರಕಿಹೊಳಿ
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್
ನಿನ್ನೆ ಜೋಡಿ, ಇಂದು ವೈರಿ: ಕಿತ್ತಾಡಿದ ಭವ್ಯಾ-ತ್ರಿವಿಕ್ರಮ್