ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್​ಡಿ ದರಗಳು

Best FD rates in India: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಫಿಕ್ಸೆಡ್ ಡೆಪಾಸಿಟ್ ಪ್ಲಾನ್​ಗಳಿಗೆ ಬಹುತೇಕ ಬ್ಯಾಂಕುಗಳು ಹೆಚ್ಚಿನ ಬಡ್ಡಿ ನೀಡುತ್ತವೆ. ಸಹಕಾರಿ ಬ್ಯಾಂಕುಗಳು ಮತ್ತು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು ಅತಿಹೆಚ್ಚು ಬಡ್ಡಿ ಆಫರ್ ಮಾಡುತ್ತವೆ. ಸರ್ಕಾರಿ ಬ್ಯಾಂಕುಗಳಲ್ಲಿ ಠೇವಣಿ ದರ ಕಡಿಮೆ ಇದ್ದರೂ ಶೇ. 7ರ ಆಸುಪಾಸಿನಲ್ಲಿದೆ.

ವಯಸ್ಸಾದವರಿಗೆ ಶೇ. 8.5ರವರೆಗೆ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್; ಇಲ್ಲಿವೆ ವಿವಿಧ ಬ್ಯಾಂಕುಗಳ ಎಫ್​ಡಿ ದರಗಳು
ಹಿರಿಯ ನಾಗರಿಕರು

Updated on: Sep 05, 2025 | 5:41 PM

ಫಿಕ್ಸೆಡ್ ಡೆಪಾಸಿಟ್ ಭಾರತದಲ್ಲಿ ಜನಸಾಮಾನ್ಯರ ಪಾಲಿಗೆ ಈಗಲೂ ಬಳಕೆಯಾಗುವ ಸಾಮಾನ್ಯ ಹೂಡಿಕೆ ಸ್ಥಳ. ಬ್ಯಾಂಕುಗಳಲ್ಲಿ ಮತ್ತು ಪೋಸ್ಟ್ ಆಫೀಸ್​ಗಳಲ್ಲಿ ವಿವಿಧ ಅವಧಿಗಳಿಗೆ ಠೇವಣಿ (Fixed Deposit) ಇಡುವ ಅವಕಾಶ ಇರುತ್ತದೆ. ಹಲವು ಬ್ಯಾಂಕುಗಳಲ್ಲಿ ಶೇ. 8ಕ್ಕಿಂತಲೂ ಹೆಚ್ಚಿನ ಬಡ್ಡಿದರಗಳನ್ನು ಠೇವಣಿಗಳಿಗೆ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸಾಮಾನ್ಯರಿಗಿಂತ 0.50 ಪ್ರತಿಶತದಷ್ಟು ಹೆಚ್ಚು ಬಡ್ಡಿ ಕೊಡಲಾಗುತ್ತದೆ.

ಇಲ್ಲಿ 60 ವರ್ಷ ದಾಟಿದ ವಯಸ್ಸಿನವರನ್ನು ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತದೆ. ಕೆಲ ಬ್ಯಾಂಕುಗಳು 80 ವರ್ಷ ದಾಟಿದವರನ್ನು ಸೂಪರ್ ಸೀನಿಯರ್ಸ್ ಎಂದು ಪರಿಗಣಿಸಿ, ಅವರಿಗೆ ಇನ್ನಷ್ಟು ಹೆಚ್ಚು ಬಡ್ಡಿ ಕೊಡುವುದುಂಟು.

ಇದನ್ನೂ ಓದಿ: ಫಿಕ್ಸೆಡ್ ಡೆಪಾಸಿಟ್​ಗೆ ಟಿಡಿಎಸ್ ಕಡಿತ ಇರುತ್ತಾ? ಅದನ್ನು ತಪ್ಪಿಸಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಫಿಕ್ಸೆಡ್ ಡೆಪಾಸಿಟ್​ಗಳಿಗೆ ವಾಣಿಜ್ಯ ಬ್ಯಾಂಕುಗಳಿಗಿಂತ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳು ಹೆಚ್ಚಿನ ಬಡ್ಡಿ ಆಫರ್ ಮಾಡುತ್ತವೆ. ವಿವಿಧ ಬ್ಯಾಂಕುಗಳಲ್ಲಿ ಎಫ್​ಡಿ ದರಗಳು ಎಷ್ಟಿವೆ ಎನ್ನುವ ಮಾಹಿತಿ ಇಲ್ಲಿದೆ:

ಸಣ್ಣ ಫೈನಾನ್ಸ್ ಬ್ಯಾಂಕ್​ಗಳಲ್ಲಿ ಹಿರಿಯ ನಾಗರಿಕರಿಗೆ ಎಫ್​ಡಿ ದರಗಳು (ಸೆಪ್ಟೆಂಬರ್ 2025)

  • ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ 8.50 ಬಡ್ಡಿ (2-3 ವರ್ಷ)
  • ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.5 ಬಡ್ಡಿ (18 ತಿಂಗಳು)
  • ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.40 ಬಡ್ಡಿ (5 ವರ್ಷ)
  • ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 8.25 ಬಡ್ಡಿ (3 ವರ್ಷದ ಠೇವಣಿ)
  • ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: ಶೇ. 7.95 ಬಡ್ಡಿ (2 ವರ್ಷದ ಠೇವಣಿ)
  • ಇಎಸ್​ಎಎಫ್, ಈಕ್ವಿಟಾಸ್, ಎಯು, ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ: ಶೇ 7.25ರಿಂದ ಶೇ. 8.0 ಬಡ್ಡಿ

ಖಾಸಗಿ ವಾಣಿಜ್ಯ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಎಫ್​ಡಿ ದರ

  • ಯೆಸ್ ಬ್ಯಾಂಕ್: ಶೇ. 7.75
  • ಐಡಿಎಫ್​ಸಿ ಬ್ಯಅಂಕು: ಶೇ. 7.5 ಬಡ್ಡಿ
  • ಇಂಡಸ್​ಇಂಡ್ ಬ್ಯಾಂಕು: ಶೇ. 7.5 ಬಡ್ಡಿ
  • ಆರ್​ಬಿಎಲ್ ಬ್ಯಾಂಕು: ಶೇ. 7.7 ಬಡ್ಡಿ
  • ಬಂಧನ್ ಬ್ಯಾಂಕು: ಶೇ. 7.7 ಬಡ್ಡಿ
  • ಎಕ್ಸಿಸ್, ಎಚ್​ಡಿಎಫ್​ಸಿ, ಐಸಿಐಸಿಐ, ಕೋಟಕ್ ಮಹೀಂದ್ರ ಬ್ಯಾಂಕುಗಳಲ್ಲಿ ಶೇ. 7.1ರಿಂದ ಶೇ. 7.50ಯವರೆಗೆ ಬಡ್ಡಿ

ಇದನ್ನೂ ಓದಿ: ಪೋಸ್ಟ್ ಆಫೀಸ್: 20 ವರ್ಷಕ್ಕೆ 4 ಪಟ್ಟು ರಿಟರ್ನ್ ಕೊಡಬಲ್ಲ ಟಿಡಿ ಪ್ಲಾನ್

ಸರ್ಕಾರಿ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ ಎಫ್​ಡಿ ದರಗಳು

  • ಎಸ್​​ಬಿಐ, ಬ್ಯಾಂಕ್ ಆಫ್ ಬರೋಡ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶೇ. 7.1 ಬಡ್ಡಿ
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 7.5 ಬಡ್ಡಿ
  • ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್​ಸೀಸ್ ಬ್ಯಾಂಕ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಶೇ. 7.2ರಿಂದ ಶೇ. 7.25 ಬಡ್ಡಿ
  • ಕೆನರಾ ಬ್ಯಾಂಕು: ಶೇ. 7 ಬಡ್ಡಿ

ಸೂಪರ್ ಸೀನಿಯರ್ ಸಿಟಿಜನ್ಸ್​ಗೆ ಇನ್ನೂ ಹೆಚ್ಚು ಬಡ್ಡಿ

80 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರನ್ನು ಸೂಪರ್ ಸೀನಿಯರ್ ಸಿಟಿಜನ್ಸ್ ಎಂದು ಪರಿಗಣಿಸಲಾಗುತ್ತದೆ. ಕೆಲ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನೀಡುವದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಇವರಿಗೆ ನೀಡುತ್ತವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಆರ್​ಬಿಎಲ್, ಇಂಡಿಯನ್ ಬ್ಯಾಂಕ್ ಮೊದಲಾದವು 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ