ಮದುವೆ (Marriage) ಎಂಬುದು ಯಾರದೇ ಬದುಕಿನಲ್ಲಿ ಬರುವ ಅತ್ಯಂತ ಮಹತ್ವದ ಘಟನೆ ಅಥವಾ ತಿರುವು. ಮೋಜು ಮಸ್ತಿಗೆ ಸಂಗಾತಿ ಸಿಗುವುದೇ ಮದುವೆ ಅಲ್ಲ, ಅದು ಹೊಸ ಸಂಸಾರದ ಸೃಷ್ಟಿಯ ಆದಿ. ಗಂಡ ಹೆಂಡತಿ ಸೇರಿ ಸಂಸಾರದ ನೊಗ ಹೊರಲು ಮದುವೆ ಎಂಬುದು ಒಂದು ಮೂಗುದಾರ. ಈ ಸಂಸಾರದ ರಥಕ್ಕೆ ಹಣಕಾಸು ಭದ್ರತೆ ಎಂಬುದು ಗಾಲಿ ಇದ್ದಂತೆ. ಹಣಕಾಸು ದೂರದೃಷ್ಟಿ ಇಲ್ಲದೆ ಹೋದರೆ ಸಂಸಾರದ ರಥ ಬಹಳ ದೂರ ಸಾಗುವುದಿಲ್ಲ, ಅಲ್ಲಲ್ಲಿ ನೆಲಕ್ಕುರುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಸಂಸಾರ ಗಟ್ಟಿಗೊಳಿಸಲು ವಿವಾಹ ಪೂರ್ವದಿಂದಲೇ ಅಥವಾ ವಿವಾಹವಾದಾಗಿನಿಂದಲೂ ಹಣಕಾಸು ಯೋಜನೆಗಳನ್ನು (Investment Schemes) ಹಮ್ಮಿಕೊಳ್ಳಬೇಕು. ಅಂಥ ಕೆಲ ಪ್ರಮುಖ 5 ಹೂಡಿಕೆ ಆಯ್ಕೆಗಳನ್ನು ಇಲ್ಲಿ ನೀವು ಕಾಣಬಹುದು.
ನೀವು ಒಬ್ಬರಿದ್ದವರು ಮದುವೆಯಾದ ಬಳಿಕ ಇಬ್ಬರಾಗುತ್ತೀರಿ, ಮೂವರಾಗುತ್ತೀರಿ. ಜೊತೆಗೆ ಅಪ್ಪ ಅಮ್ಮನೂ ಸೇರಿ ಸಂಸಾರ ದೊಡ್ಡದಾಗುತ್ತದೆ. ಇವರೆಲ್ಲರ ಆರೋಗ್ಯ, ಹಣಕಾಸು ಭದ್ರತೆ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ಇನ್ಷೂರೆನ್ಸ್ ಪಾಲಿಸಿಗಳು ಬಹಳ ಮುಖ್ಯ. ಇಡೀ ಕುಟುಂಬಕ್ಕೆ ಕವರೇಜ್ ಕೊಡುವ ಜೀವ ವಿಮೆ ಮತ್ತು ಆರೋಗ್ಯ ವಿಮೆಗಳನ್ನು ಮಾಡಿಸುವುದು ನಿಮ್ಮ ಮೊದಲ ಆದ್ಯತೆ ಆಗಬೇಕು.
ಇದನ್ನೂ ಓದಿ: Higher Pension: ಅಧಿಕ ಇಪಿಎಸ್ ಪಿಂಚಣಿಗೆ ಜುಲೈ 11 ಡೆಡ್ಲೈನ್; ಇಪಿಎಸ್ ಮತ್ತು ಎನ್ಪಿಎಸ್, ಯಾವುದು ಬೆಟರ್?
ಮಹಿಳೆಯರಿಗೆ, ಅದರಲ್ಲೂ ನವವಿವಾಹಿತ ಹೆಣ್ಮಕ್ಕಳಿಗೆ ಒಡವೆ ಎಂದರೆ ವಿಶೇಷ ಪ್ರೀತಿ. ಚಿನ್ನ ಯಾವತ್ತಿದ್ದರೂ ಬೇಡಿಕೆ ಇರುವ ವಸ್ತು. ನೀವು ಚಿನ್ನವನ್ನು ನಿಯಮಿವಾಗಿ ಖರೀದಿಸುವ ರೂಢಿ ಇಟ್ಟುಕೊಳ್ಳಿ. ಚಿನ್ನದಲ್ಲಿ ಅಲ್ಪಭಾಗ ಮಾತ್ರ ಆಭರಣವಿರಲಿ. ಉಳಿದವು ಕಾಯಿನ್, ಗಟ್ಟಿ ಇತ್ಯಾದಿ ರೂಪದಲ್ಲಿರಲಿ.
ಪ್ರತಿಯೊಂದು ಪ್ರಾಣಿ ಪಕ್ಷಿಗಳೂ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಹಲವು ಪಕ್ಷಿಗಳು ಪ್ರತ್ಯೇಕವಾಗಿ ಗೂಡು ಕಟ್ಟಿಕೊಳ್ಳುತ್ತವೆ. ಅಂತೆಯೇ ಮನುಷ್ಯನೂ ಕೂಡ ಸ್ವಂತ ಸೂರು ಪಡೆಯಲು ಹಾತೊರೆಯುತ್ತಾನೆ. ನಿಮಗೆ ಸ್ವಂತ ಮನೆ ಇಲ್ಲದೇ ಇದ್ದರೆ ಆ ನಿಟ್ಟಿನಲ್ಲಿ ನಿಮ್ಮ ಗಮನ ಇರಲಿ. ನಿಮ್ಮ ಕೆಲಸದ ಸ್ಥಳಕ್ಕೆ ಹೋಗಿ ಬರಲು ಅನುಕೂಲವಾಗುವ ಪ್ರದೇಶದಲ್ಲಿ ಮನೆ ಮಾಡುವುದಕ್ಕೆ ಆಲೋಚಿಸಿ. ದಿನಗುರುಳುತ್ತಿರುವಂತೆಯೆ ಮನೆ ನಿರ್ಮಾಣದ ವೆಚ್ಚ ದುಬಾರಿ ಆಗುತ್ತಾ ಹೋಗುತ್ತದೆ. ಹೀಗಾಗಿ, ಸಾಧ್ಯವಾದಷ್ಟು ಬೇಗ ಹಣ ಹೊಂದಿಸಿ ಮನೆ ಕಟ್ಟಿರಿ. ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ ಇಬ್ಬರ ಸಂಬಳ ಸೇರಿ ಜಂಟಿಯಾಗಿ ಬ್ಯಾಂಕ್ ಲೋನ್ ಪಡೆಯಬಹುದು.
ಇದನ್ನೂ ಓದಿ: Bank FD vs PPF: ಬ್ಯಾಂಕ್ ಎಫ್ಡಿ ವರ್ಸಸ್ ಪಿಪಿಎಫ್ ಅಕೌಂಟ್- ಯಾವುದು ಉತ್ತಮ; ಬಡ್ಡಿ ದರ, ತೆರಿಗೆ ಹೋಲಿಕೆ
ದೀರ್ಘಾವಧಿ ಹೂಡಿಕೆಗೆ ಹೇಳಿಮಾಡಿಸಿದ ಯೋಜನೆಗಳಲ್ಲಿ ಪಿಪಿಎಫ್ ಒಂದು. ಇದು ಹೈ ರಿಟರ್ನ್ ಕೊಡುತ್ತದೆ. ಜೊತೆಗೆ ಸರ್ಕಾರದಿಂದ ರೂಪಿಸಲಾದ ಸ್ಕೀಮ್ ಆದ್ದರಿಂದ ನಿಮ್ಮ ಹಣಕ್ಕೆ ಗ್ಯಾರಂಟಿಯೂ ಇರುತ್ತದೆ.
ನ್ಯಾಷನಲ್ ಪೆನ್ಷನ್ ಸಿಸ್ಟಂ ಅಥವಾ ಎನ್ಪಿಎಸ್ ಎಂಬುದು 18ರಿಂದ 75 ವರ್ಷದ ಯಾವುದೇ ವ್ಯಕ್ತಿಗಳು ಹೂಡಿಕೆ ಮಾಡಬಹುದಾದ ಪೆನ್ಷನ್ ಪ್ಲಾನ್. ನಿವೃತ್ತಿ ನಂತರದ ಭದ್ರತೆಗೆ ಇಪಿಎಫ್ ಮತ್ತು ಎನ್ಪಿಎಸ್ ಡಬಲ್ ಎಂಜಿನ್ನಂತೆ ಕೆಲಸ ಮಾಡಬಹುದು. ಎನ್ಪಿಎಸ್ನಲ್ಲಿ ನೀವು ಮಾಡುವ ಹೂಡಿಕೆ ಷೇರುಪೇಟೆಗೆ ಜೋಡಿತವಾಗಿರುವುದರಿಂದ ಅಧಿಕ ಲಾಭದ ನಿರೀಕ್ಷೆ ಮಾಡಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ