ಐಟಿ ರಿಟರ್ನ್ ಫೈಲ್ (ITR Filing) ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ. ಜುಲೈ 31ಕ್ಕೆ ಡೆಡ್ಲೈನ್ ಇದೆ. ಐಟಿಆರ್ನಲ್ಲಿ ನಾವು ನಮ್ಮೆಲ್ಲಾ ಆದಾಯವನ್ನೂ ಸರಿಯಾಗಿ ತೋರಿಸಬೇಕು ಎಂಬ ನಿಯಮ ಇದೆ. ಐಟಿ ರಿಟರ್ನ್ ಸಲ್ಲಿಸುವ ಉದ್ದೇಶವೇ ಅದು. ನಮ್ಮ ಆದಾಯಮೂಲಗಳು ಹಾಗೂ ಆ ವರ್ಷದ ಪ್ರಮುಖ ಆದಾಯಗಳನ್ನು ತೋರಿಸಬೇಕು. ಅದರಲ್ಲೂ ದೊಡ್ಡ ಆದಾಯ ಮುಚ್ಚಿಡುವಂತಿಲ್ಲ. ಆದರೆ, ಆದಾಯ ತೋರಿಸಿದರೆ ತೆರಿಗೆ ಬೀಳಬಹುದು ಎಂಬ ಕಾರಣಕ್ಕೆ ಹಲವರು ತಮ್ಮ ಆದಾಯವನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿದೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಆದಾಯ ಮುಚ್ಚಿಡುವುದಾಗಲೀ ಅಥವಾ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡುವುದಾಗಲೀ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
‘1961ರ ಆದಾಯ ತೆರಿಗೆ ಕಾಯ್ದೆ ಅಡಿ ಆದಾಯವನ್ನು ಮರೆಮಾಚಿದರೆ ಹಾಗೂ ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕಾದೀತು. ವರ್ಷಕ್ಕೆ ಶೇ 12ರ ದರದಲ್ಲಿ ಬಡ್ಡಿ, ತೆರಿಗೆ ಮೊತ್ತದ 200 ಪ್ರತಿಶತದಷ್ಟು ದಂಡ, ಹಾಗೂ ಜೈಲುಶಿಕ್ಷೆ ವಿಧಿಸುವ ಸಾಧ್ಯತೆಯೂ ಇರುತ್ತದೆ’ ಎಂದು ಆಂಧ್ರ ಮತ್ತು ತೆಲಂಗಾಣದ ಆದಾಯ ತೆರಿಗೆ ಇಲಾಖೆಯ ಪ್ರಿನ್ಸಿಪಾಲ್ ಚೀಫ್ ಕಮಿಷನರ್ ಮಿಥಾಲಿ ಮಧುಸ್ಮಿತಾ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Refund Status: ಐಟಿ ರಿಟರ್ನ್ಸ್ ಸಲ್ಲಿಸಿದ್ದೀರಾ? ರೀಫಂಡ್ ಬಂದಿದೆಯಾ ಎಂದು ಪರಿಶೀಲಿಸುವುದು ಹೇಗೆ?
ಹಾಗೊಂದು ವೇಳೆ ನೀವು ಮೇಲೆ ತಿಳಿಸಿದ ರೀತಿ ಐಟಿಆರ್ ಫಾರ್ಮ್ನಲ್ಲಿ ಆದಾಯ ಮರೆಮಾಚಿ, ತಪ್ಪಾಗಿ ಡಿಡಕ್ಷನ್ ಕ್ಲೈಮ್ ಮಾಡಿದ್ದರೆ ಅದನ್ನು ಸರಿಪಡಿಸಲು ಮಾರ್ಗೋಪಾಯವನ್ನೂ ಐಟಿ ಅಧಿಕಾರಿ ಸೂಚಿಸಿದ್ದಾರೆ.
Under the Income-tax Act,1961(the ‘Act’) there are stringent consequences of misreporting of income and claiming wrongful deductions. Those include interest @ 12% /yr, penalty @ 200% of taxes, prosecution which may entail imprisonment
-Pr Chief Commissioner, @IncomeTax_APTS
1/2 pic.twitter.com/wqaA9qG9Fx— PIB in Telangana ?? (@PIBHyderabad) July 7, 2023
ನೀವು ಈಗಾಗಲೇ ಐಟಿ ರಿಟರ್ನ್ ಫೈಲ್ ಮಾಡಿದ್ದರೂ ಸೆಕ್ಷನ್ 140ಬಿ ಅಡಿಯಲ್ಲಿ ಮತ್ತೊಮ್ಮೆ ಪರಿಷ್ಕೃತ ಅರ್ಜಿ ಸಲ್ಲಿಸಿ ಹಿಂದಿನ ತೆರಿಗೆ ಬಾಕಿ ಪಾವತಿಸಬಹುದು. ಇದು 2021-22 ಹಾಗೂ 2022-23ರ ಅಸೆಸ್ಮೆಂಟ್ ವರ್ಷಕ್ಕೆ ಅನ್ವಯ ಆಗುತ್ತದೆ. ಈ ಬಾರಿ ಫೈಲ್ ಮಾಡಲಾಗುತ್ತಿರುವ 2023-24ರ ಅಸೆಸ್ಮೆಂಟ್ ವರ್ಷಕ್ಕೆ ಸೆಕ್ಷನ್ 139(5) ಅಡಿಯಲ್ಲಿ ಪರಿಷ್ಕೃತ ಐಟಿಆರ್ ಫೈಲ್ ಮಾಡಬಹುದು.
ಭಾರತದಲ್ಲಿ ಒಂದು ಅಂದಾಜು ಪ್ರಕಾರ 5 ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರಿದ್ದಾರೆ. ಇವರ ಪೈಕಿ 3 ಕೋಟಿ ಅಸುಪಾಸಿನ ಸಂಖ್ಯೆಯಷ್ಟು ಜನರು ತೆರಿಗೆ ಪಾವತಿಸುತ್ತಾರೆ.
ಇದನ್ನೂ ಓದಿ: PMLA: ಜಿಎಸ್ಟಿ ವಂಚನೆ ಎಸಗುವವರಿಗೆ ಕಾದಿದೆ ಇಡಿ ಕುಣಿಕೆ; ಪಿಎಂಎಲ್ಎ ವ್ಯಾಪ್ತಿಗೆ ಜಿಎಸ್ಟಿಎನ್ ಸೇರಿಸಿದ ಸರ್ಕಾರ
ಈಗ ಐಟಿ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ ತುಸು ಸರಳಗೊಳಿಸಲಾಗಿದೆ. ಏಳು ಐಟಿಆರ್ ಫಾರ್ಮ್ಗಳ ಆಯ್ಕೆ ಇದ್ದು, ನಮ್ಮ ಆದಾಯಮೂಲಕ್ಕೆ ಅನುಸಾರವಾಗಿ ಫಾರ್ಮ್ ಆಯ್ದುಕೊಳ್ಳಬೇಕು. ಸಂಬಳವೇ ಪ್ರಮುಖ ಆದಾಯಮೂಲವಾಗಿದ್ದರೆ ಐಟಿಆರ್1 ಫಾರ್ಮ್ ಅನ್ನು ಭರ್ತಿ ಮಾಡಿ ಸಲ್ಲಿಸಬಹುದು.
ನಿಮ್ಮ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಫಾರ್ಮ್16, ಫಾರ್ಮ್ 16ಎ, 16ಬಿ, 16ಸಿ, ಫಾರ್ಮ್ 26ಎಎಸ್, ಬಾಡಿಗೆ ಕರಾರು, ಕ್ರಯ ಪತ್ರ, ಡಿವಿಡೆಂಡ್ ವಾರಂಟ್, ಹೂಡಿಕೆ ದಾಖಲೆ ಇತ್ಯಾದಿ ಅಗತ್ಯ ದಾಖಲೆಗಳನ್ನು ಐಟಿಆರ್ ಜೊತೆ ಸಲ್ಲಿಸಬೇಕಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ