ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್ (Credit Card) ಬಳಸುತ್ತಾರೆ. ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹಲವಾರು ಅನುಕೂಲಗಳಿದ್ದರೂ, ಕೆಲವು ಅನಾನುಕೂಲಗಳೂ ಇವೆ. ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಮತ್ತು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದೀರೇ? ಹೌದು ಎಂದಾದರೆ, ಅದರ ಅನುಕೂಲಗಳು ಮತ್ತು ಅನನಕೂಲಗಳ ಬಗ್ಗೆ ತಿಳಿಯುವುದು ಉತ್ತಮ. ಮತ್ತೊಂದೆಡೆ, ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ನೀವು ಇನ್ನೊಂದು ಕ್ರೆಡಿಟ್ ಕಾರ್ಡ್ ಅನ್ನು ಯಾವಾಗ ತೆಗೆದುಕೊಳ್ಳಬೇಬಹುದು ಎಂಬ ಕುರಿತೂ ಇಲ್ಲಿ ಮಾಹಿತಿ ನೀಡಲಾಗಿದೆ.
ಹಲವು ಕೊಡುಗೆಗಳು, ರಿಯಾಯಿತಿಗಳು ಆಗಾಗ ಕ್ರೆಡಿಟ್ ಕಾರ್ಡ್‌ಗಳಲ್ಲಿ ಬರುತ್ತಲೇ ಇರುತ್ತವೆ. ನಿಮ್ಮ ಬಳಿ ಹಣವಿಲ್ಲದಿದ್ದ ಸಂದರ್ಭಗಳಲ್ಲಿ ನೀವು ಕ್ರೆಡಿಟ್ ಕಾರ್ಡ್ ಬಳಸಿ ವ್ಯವಹಾರ ನಡೆಸಬಹುದು. ನಂತರ ನೀವು ಅದನ್ನು ಸುಲಭವಾಗಿ ಇಎಂಐಗೆ ಪರಿವರ್ತಿಸಿ ಪಾವತಿಸಬಹುದು.
ಕ್ರೆಡಿಟ್ ಕಾರ್ಡ್‌ನ ಬಹುಮುಖ್ಯ ಪ್ರಯೋಜನವೆಂದರೆ ನಿಮ್ಮ ಬಳಿ ಹಣವಿಲ್ಲದಿದ್ದರೂ ನೀವು ಶಾಪಿಂಗ್ ಮಾಡಬಹುದು. ಮತ್ತೊಂದೆಡೆ, ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದರೆ, ನಂತರ ನೀವು ವಿವಿಧ ಕ್ರೆಡಿಟ್ ಕಾರ್ಡ್‌ಗಳನ್ನು ವಿವಿಧ ವೆಚ್ಚಗಳಿಗಾಗಿ ಬಳಸಬಹುದು. ಉದಾಹರಣೆಗೆ, ನೀವು ಒಂದು ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡುತ್ತಿದ್ದರೆ, ಇನ್ನೊಂದನ್ನು ಪ್ರಯಾಣ ಅಥವಾ ಇತರ ವೆಚ್ಚಗಳ ಪಾವತಿಗಾಗಿ ಇರಿಸಬಹುದು. ಈ ರೀತಿಯಾಗಿ, ಕೇವಲ ಒಂದು ಕಾರ್ಡ್‌ನ ಹೊರೆ ನಿಮ್ಮ ಮೇಲೆ ಹೆಚ್ಚಾಗುವುದಿಲ್ಲ. ವಿವಿಧ ಬ್ಯಾಂಕ್‌ಗಳು ನಿಮಗೆ ಹಲವು ರೀತಿಯ ಆಫರ್‌ಗಳನ್ನು ನೀಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಏಕಕಾಲದಲ್ಲಿ ಅನೇಕ ಕೊಡುಗೆಗಳನ್ನು ಬಳಸಬಹುದು.
ಕ್ರೆಡಿಟ್ ಕಾರ್ಡ್‌ಗಳ ದೊಡ್ಡ ಅನನುಕೂಲವೆಂದರೆ ಖರ್ಚುಗಳನ್ನು ಹೆಚ್ಚಿಸುವುದು. ಒಂದು ಅಥವಾ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ಕೆಲವೊಮ್ಮೆ ನೀವು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುತ್ತೀರಿ. ನಂತರ ನಿಮ್ಮ ಎಲ್ಲಾ ಹಣವನ್ನು ಅದರ ಮರುಪಾವತಿಗೆ ಖರ್ಚು ಮಾಡಲಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ಬಳಸದಿದ್ದರೆ, ಅದು ನಿಮಗೆ ಸಮಸ್ಯೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ವಿವೇಚನೆಯಿಂದ ಬಳಸುವುದು ಬಹು ಮುಖ್ಯವಾಗುತ್ತದೆ.
ಹಲವು ಆಫರ್ಗಳು ಇದ್ದಾಗ, ವಿವೇಚನೆಯಿಂದ ಬಳಸುವಂಥ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ಗಳನ್ನೂ ಹೊಂದಬಹುದು. ಆದರೆ, ಈಗಾಗಲೇ ಒಂದು ಕ್ರೆಡಿಟ್ ಕಾರ್ಡ್ ಇದ್ದು, ಮತ್ತೊಂದಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಒಮ್ಮೆಗೆ ತುಸು ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ, ನಂತರ ಸಮರ್ಪಕವಾದ ಪಾವತಿ ಮಾಡುವ ಮೂಲಕ ಅದನ್ನು ಹೆಚ್ಚಿಸಿಕೊಳ್ಳಲು ಅವಕಾಶವಿದೆ.