
ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆಂದು ಸರ್ಕಾರ ವಿವಿಧ ನಿವೃತ್ತಿ ಸ್ಕೀಮ್ಗಳನ್ನು ನಡೆಸುತ್ತಿದೆ. ಇದರಲ್ಲಿ ಪಿಎಂ ಎಸ್ವೈಎಂ ಸ್ಕೀಮ್ ಕೂಡ ಒಂದು. ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯಲ್ಲಿ ಬಹಳ ಅಲ್ಪ ಹೂಡಿಕೆಯಲ್ಲಿ 3,000 ರೂಗಳ ಮಾಸಿಕ ಖಾತ್ರಿ ಪಿಂಚಣಿ ಸೃಷ್ಟಿಸಲು ಸಾಧ್ಯ. 2019ರಲ್ಲೇ ಈ ಸ್ಕೀಮ್ ಆರಂಭವಾಗಿದೆ. ಇಪಿಎಫ್, ಎನ್ಪಿಎಸ್ ಇತ್ಯಾದಿ ಸೌಲಭ್ಯ ಇಲ್ಲದ ಕೆಲಸಗಾರರು, ಉದ್ಯೋಗಿಗಳಿಗೆಂದು ಈ ಯೋಜನೆ ಇರುವುದು.
ಬೀದಿಬದಿ ವ್ಯಾಪಾರಿಗಳು, ಕಟ್ಟಡ ನಿರ್ಮಾಣದ ಕೂಲಿಕಾರ್ಮಿಕರು, ಮನೆಗೆಲಸದವರು, ಸಣ್ಣ ವರ್ತಕರು ಇತ್ಯಾದಿ ಅಸಂಘಟಿತ ವಲಯದ ಕೆಲಸಗಾರರು ಪಿಎಂ ಎಸ್ವೈಎಂ ಯೋಜನೆಗೆ ಅರ್ಹರಿರುತ್ತಾರೆ. 60 ವರ್ಷ ವಯಸ್ಸಿನವರೆಗೂ ಪ್ರತೀ ತಿಂಗಳು ಅಲ್ಪ ಮೊತ್ತವನ್ನು ಕಟ್ಟುತ್ತಾ ಹೋಗಲು ಅವಕಾಶ ಇರುತ್ತದೆ. ನೀವು ಎಷ್ಟು ಕಟ್ಟುತ್ತೀರೋ, ಅದಕ್ಕೆ ಸರಿಸಮಾನವಾದ ಮೊತ್ತವನ್ನು ಸರ್ಕಾರವೂ ಒದಗಿಸುತ್ತದೆ. ಈ ಎರಡೂ ಹಣವೂ ಸೇರಿ, ಫಲಾನುಭವಿಯ ವಯಸ್ಸು 60 ವರ್ಷವಾದ ಬಳಿಕ ನಿಶ್ಚಿತ ಪಿಂಚಣಿ ದೊರಕುತ್ತಾ ಹೋಗುತ್ತದೆ.
ಇದನ್ನೂ ಓದಿ: ಮ್ಯೂಚುವಲ್ ಫಂಡ್ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್
ಹೂಡಿಕೆ ಆರಂಭಿಸಲು ಇರುವ ವಯೋಮಿತಿ 18ರಿಂದ 40 ವರ್ಷ. ಹೂಡಿಕೆ 60 ವರ್ಷ ವಯಸ್ಸಾಗುವವರೆಗೂ ಮಾಡಬೇಕು. 18 ವರ್ಷದಲ್ಲೇ ಹೂಡಿಕೆ ಆರಂಭಿಸಿದರೆ ಮಾಸಿಕ ಹೂಡಿಕೆ 55 ರೂ ಮಾತ್ರವೇ ಇರುತ್ತದೆ. ಒಂದು ವೇಳೆ 40 ವರ್ಷಕ್ಕೆ ಹೂಡಿಕೆ ಆರಂಭಿಸಿದರೆ ಮಾಸಿಕ ಹೂಡಿಕೆ 200 ರೂ ಇರುತ್ತದೆ. ಹೀಗೆ ಹೂಡಿಕೆಯ ಆರಂಭಿಕ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮೊತ್ತದಲ್ಲಿ ವ್ಯತ್ಯಾಸ ಇರಬಹುದು.
ಇದನ್ನೂ ಓದಿ: ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?
ಸಮೀಪದ ಸಿಎಸ್ಸಿ ಸೆಂಟರ್ ಅಥವಾ ನಾಗರಿಕ ಕೇಂದ್ರಕ್ಕೆ ಹೋಗಿ ಈ ಸ್ಕೀಮ್ಗೆ ಅರ್ಜಿ ಹಾಕಬಹುದು. ಮಾನಧನ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲೇ ಎನ್ರೋಲ್ ಆಗಬಹುದು.
ಈ ಯೋಜನೆಯಲ್ಲಿ ಇಲ್ಲಿಯವರೆಗೆ 52 ಲಕ್ಷಕ್ಕೂ ಅಧಿಕ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ