AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್​ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್

SEBI considering proposal to start gift card or PPI for investing in Mutual Funds: ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವಂತಹ ಪ್ರೀಪೇಡ್ ಕಾರ್ಡ್ ಅಥವಾ ಗಿಫ್ಟ್ ಕಾರ್ಡ್​ನಂತಹ ಸ್ಕೀಮ್ ಅನ್ನು ಜಾರಿಗೊಳಿಸುವ ಪ್ರಸ್ತಾಪ ಸೆಬಿ ಮುಂದಿದೆ. ಯಾವುದೇ ಎಎಂಸಿ ಅಥವಾ ಮ್ಯೂಚುವಲ್ ಫಂಡ್ ಸಂಸ್ಥೆಯಿಂದ ಈ ಪಿಪಿಐ ಅನ್ನು ಖರೀದಿಸಿ, ಯಾರಿಗಾದರೂ ಅದನ್ನು ಗಿಫ್ಟ್ ಆಗಿ ನೀಡಬಹುದು. ಈ ಪ್ರಸ್ತಾವಿತ ಸ್ಕೀಮ್ ಬಗ್ಗೆ ಒಂದಷ್ಟು ಮಾಹಿತಿ.

ಮ್ಯೂಚುವಲ್ ಫಂಡ್​ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್
ಮ್ಯೂಚುವಲ್ ಫಂಡ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 25, 2026 | 4:03 PM

Share

ನವದೆಹಲಿ, ಮಾರ್ಚ್ 25: ಮ್ಯೂಚುವಲ್ ಫಂಡ್​ಗಳಲ್ಲಿ (Mutual Funds) ಹೂಡಿಕೆ ಮಾಡಬಹುದಾದಂತಹ ಗಿಫ್ಟ್ ಕಾರ್ಡ್ ಅಥವಾ ಗಿಫ್ಟ್ ಪಿಪಿಐ (PPI- Pre Paid Instrument) ಅನ್ನು ಹೊರತರಲು ಸೆಬಿ ಯೋಜಿಸಿದೆ. ಪಿಪಿಐ ಎಂಬುದು ಒಂದು ರೀತಿಯಲ್ಲಿ ಪ್ರೀಪೇಡ್ ಕಾರ್ಡ್. ಈ ಪ್ರೀಪೇಡ್ ಕಾರ್ಡ್ ಬಳಸಿ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಯಾರು, ಯಾರಿಗೆ ಬೇಕಾದರೂ ಈ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಕೊಡಬಹುದು.

ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ?

ಯಾವುದೇ ಮ್ಯೂಚುವಲ್ ಫಂಡ್ ಸಂಸ್ಥೆಯಿಂದ ಗಿಫ್ಟ್ ಕಾರ್ಡ್ ಅಥವಾ ಪ್ರೀಪೇಡ್ ಕಾರ್ಡ್ (ಪಿಪಿಐ) ಅನ್ನು ಖರೀದಿಸಬಹುದು. ಒಂದು ಗಿಫ್ಟ್ ಕಾರ್ಡ್​ನ ಮೌಲ್ಯ 10,000 ರೂ ಮೀರುವಂತಿಲ್ಲ. ಈ ಕಾರ್ಡ್ ಅನ್ನು ಖರೀದಿಸಿದವರು ಯಾರಿಗೆ ಬೇಕಾದರೂ ಗಿಫ್ಟ್ ಆಗಿ ಕೊಡಬಹುದು. ಅವರು ಕಾರ್ಡ್ ಅನ್ನು ರಿಡೀಮ್ ಮಾಡಿ ಆ ಹಣವನ್ನು ಮ್ಯೂಚುವಲ್ ಫಂಡ್ ಸಂಸ್ಥೆಯ ಯಾವುದೇ ಫಂಡ್ ಸ್ಕೀಮ್​ಗಳಲ್ಲಿ ಹೂಡಿಕೆಗೆ ಬಳಸಬಹುದು. ರಿಡೀಮ್ ಮಾಡಿದ ಹಣ ಪೂರ್ಣವಾಗಿ ಹೂಡಿಕೆಗೆ ಬಳಕೆ ಆಗಬೇಕು. ಅರ್ಧ ಮಾತ್ರ ಮಾಡುತ್ತೇನೆ, ಸ್ವಲ್ಪ ಮಾಡುತ್ತೇನೆ ಎಂದರೆ ಅದಕ್ಕೆ ಅವಕಾಶ ಇರುವುದಿಲ್ಲ. ಇದೆ ಸೆಬಿ ಮುಂದಿರುವ ಪ್ರಸ್ತಾವವಾಗಿದೆ.

ಇದನ್ನೂ ಓದಿ: ಸರ್ಕಾರದ ಸುಕನ್ಯಾ ಸಮೃದ್ದಿ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?

ಪ್ರಸ್ತಾವಿತ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಸ್ಕೀಮ್ ಬಗ್ಗೆ

  • ಗಿಫ್ಟ್ ಪಿಪಿಐನ ಗರಿಷ್ಠ ಮೌಲ್ಯ 10,000 ರೂ ಇರಬಹುದು.
  • ಒಂದು ವರ್ಷದಲ್ಲಿ ಒಂದು ಮ್ಯೂಚುವಲ್ ಫಂಡ್ ಸಂಸ್ಥೆಯಲ್ಲಿ ಈ ರೀತಿ ಗಿಫ್ಟ್ ಕಾರ್ಡ್​ಗಳ ಮೂಲಕ ಗರಿಷ್ಠ 50,000 ರೂ ಹೂಡಿಕೆಗೆ ಮಾತ್ರ ಅವಕಾಶ ಇರುತ್ತದೆ.
  • ಈ ಗಿಫ್ಟ್ ಕಾರ್ಡ್ ಅಥವಾ ಪಿಪಿಐ ಒಂದು ವರ್ಷದವರೆಗೆ ಮಾನ್ಯವಿರುತ್ತದೆ. ಅದನ್ನು ಬಳಸದಿದ್ದರೆ ಖರೀದಿದಾರರಿಗೆ ಹಣ ಮರಳುತ್ತದೆ.
  • ಗಿಫ್ಟ್ ಕಾರ್ಡ್​ನಿಂದ ಕ್ಯಾಷ್ ಪಡೆಯಲು ಆಗುವುದಿಲ್ಲ. ಮ್ಯೂಚುವಲ್ ಫಂಡ್ ಯುನಿಟ್​ಗಳನ್ನು ಮಾತ್ರವೇ ಖರೀದಿಸಬಹುದು.
  • ಗಿಫ್ಟ್ ಕಾರ್ಡ್ ಬಳಸುವ ವ್ಯಕ್ತಿಯ ಹೆಸರಿನಲ್ಲೇ ಹೂಡಿಕೆ ಆಗಬೇಕು.
  • ಗಿಫ್ಟ್ ಕಾರ್ಡ್​ನ ಎಲ್ಲಾ ಹಣವೂ ಮ್ಯೂಚುವಲ್ ಫಂಡ್ ಯುನಿಟ್​ಗಳ ಖರೀದಿಗೆ ಬಳಕೆ ಆಗಬೇಕು.
  • ಗಿಫ್ಟ್ ಕಾರ್ಡ್​ಗಳನ್ನು ನೀಡಲು ಆಗುವ ವೆಚ್ಚವನ್ನು ಮ್ಯೂಚುವಲ್ ಫಂಡ್ ಸಂಸ್ಥೆಗಳೇ ಭರಿಸಬೇಕು. ಹೂಡಿಕೆದಾರರಿಂದ ಈ ವೆಚ್ಚ ಭರಿಸುವಂತಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Wed, 25 March 26

Follow Us
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಇಂದು ನಾಗಪಂಚಮಿಯ ಜೊತೆಗೆ ಸೂರ್ಯ ಸಂಕ್ರಮಣದ ವಿಶೇಷ ಪರ್ವ ದಿನ!
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ಚಿಕ್ಕಪ್ಪನ ಜೊತೆ ನಟನೆ, ನಟ ನಿರಂಜನ್ ಹೇಳಿದ್ದೇನು? ವಿಡಿಯೋ ನೋಡಿ
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಂಸ್ಕೃತಿಯ ಸೊಗಡು
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು