Multibagger: 1 ಲಕ್ಷ ಹೂಡಿಕೆಗೆ 3 ವರ್ಷದಲ್ಲಿ 1.42 ಕೋಟಿ ರೂ ಲಾಭ; ಮಲ್ಟಿಬ್ಯಾಗರ್ ಆದ ಕ್ರೆಸ್ಸಾಂಡಾ ಷೇರಿನ ಬೆಲೆ 140 ಪಟ್ಟು ಹೆಚ್ಚು

|

Updated on: May 25, 2023 | 3:59 PM

Cressanda Solutions Turn Multibagger in 3 Years: ಮುಂಬೈ ಮೂಲದ ಮಾಹಿತಿ ಸೇವಾ ಸಂಸ್ಥೆ ಕ್ರೆಸ್ಸಾಂಡಾ ಸಲ್ಯೂಷನ್ಸ್ ಕಂಪನಿಯ ಷೇರು ಮೌಲ್ಯ ಕಳೆದ 3 ವರ್ಷದಲ್ಲಿ ಅದ್ಘುತವಾಗಿ ಹೆಚ್ಚಾಗಿದೆ. 19 ಪೈಸೆ ಇದ್ದ ಬೆಲೆ ಬರೋಬ್ಬರಿ 27 ರೂ ಮುಟ್ಟಿದೆ.

Multibagger: 1 ಲಕ್ಷ ಹೂಡಿಕೆಗೆ 3 ವರ್ಷದಲ್ಲಿ 1.42 ಕೋಟಿ ರೂ ಲಾಭ; ಮಲ್ಟಿಬ್ಯಾಗರ್ ಆದ ಕ್ರೆಸ್ಸಾಂಡಾ ಷೇರಿನ ಬೆಲೆ 140 ಪಟ್ಟು ಹೆಚ್ಚು
ಷೇರುಮಾರುಕಟ್ಟೆ
Follow us on

ಷೇರುಮಾರುಕಟ್ಟೆಯಲ್ಲಿ ಬಹಳ ಷೇರುಗಳು ಎಲೆಮರೆಕಾಯಿಯಂತಿರುತ್ತವೆ. ಎಲ್ಲರೂ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡಲು ಹುಡುಕಾಟ ನಡೆಸುತ್ತಿದ್ದರೆ, ಕೆಲ ಸಾಮಾನ್ಯ ಎನಿಸುವ ಕಂಪನಿಗಳ ಷೇರು ಅದ್ವಿತೀಯ ರೀತಿಯಲ್ಲಿ ಜಿಗಿಜಿಗಿದು ಓಡುತ್ತಿರುತ್ತವೆ. ಕಳೆದ ಐದಾರು ವರ್ಷದಲ್ಲಿ ಕಂಡ ಹಲವು ಮಲ್ಟಿಬ್ಯಾಗರ್ ಸ್ಟಾಕುಗಳಲ್ಲಿ ಸಣ್ಣ ಕಂಪನಿಗಳದ್ದೂ ಹಲವುವಿವೆ. ಇಂಥ ಕಂಪನಿಗಳಲ್ಲಿ ಕ್ರೆಸ್ಸಾಂಡಾ ಸಲ್ಯೂಷನ್ಸ್ (Cressanda Solutions) ಕೂಡ ಒಂದು. ಕಳೆದ ಮೂರು ವರ್ಷಗಳಲ್ಲಿ ಇದರ ಷೇರು ಅದ್ವಿತೀಯ ರೀತಿಯಲ್ಲಿ ಬೇಡಿಕೆ ಕುದುರಿಸಿಕೊಂಡು ಮಲ್ಟಿಬ್ಯಾಗರ್ ಸ್ಟಾಕ್ ಎನಿಸಿದೆ. ಈ ಮೂರು ವರ್ಷದಲ್ಲಿ ಇದರ ಷೇರು ಬೆಲೆ 140 ಪಟ್ಟು ಹೆಚ್ಚಾಗಿದೆ.

ಬಿಎಸ್​ಇ ಷೇರುಪೇಟೆಯಲ್ಲಿ 3 ವರ್ಷದ ಹಿಂದೆ ಪ್ರತೀ ಷೇರಿಗೆ ಕೇವಲ 19 ಪೈಸೆ ಬೆಲೆ ಹೊಂದಿದ್ದ ಕ್ರೆಸ್ಸಾಂಡಾ ಸಲ್ಯೂಷನ್ಸ್ ಸಂಸ್ಥೆ ಕಳೆದ ವಾರ 27.35 ರುಪಾಯಿಗೆ ಉಬ್ಬಿತ್ತು. ಅಂದರೆ ಅದರ ಬೆಲೆ ಶೇ. 1400ರಷ್ಟು ಹೆಚ್ಚಳವಾಗಿತ್ತು.

ಈಗ ಅದರ ಷೇರು ಬೆಲೆ 25 ರೂ ಆಸುಪಾಸಿಗೆ ಇಳಿದಿದೆ. ಸಾಕಷ್ಟು ಏರಿಳಿತಗಳ ನಡುವೆಯೂ ಕ್ರೆಸ್ಸಾಂಡಾ ಮುನ್ನುಗ್ಗಿ ಹೋಗುತ್ತಿರುವುದು ಗಮನಾರ್ಹ. ಕಳೆದ ಒಂದು ವರ್ಷದಲ್ಲಿ ಇದು 42.25 ರೂ ಗರಿಷ್ಠ ಮಟ್ಟ ಮುಟ್ಟಿದ್ದು ವಿಶೇಷ. ಹಾಗೆಯೇ, ಈ ವರ್ಷ 17 ರುಪಾಯಿಗೆ ಕುಸಿದಿದ್ದೂ ಹೌದು.

ಇದನ್ನೂ ಓದಿWipro: ಬೆಂಗಳೂರಿನ ವಿಪ್ರೋ ಎಕ್ಸಿಕ್ಯೂಟಿವ್ ಛೇರ್ಮನ್ ರಿಷದ್ ಪ್ರೇಮ್​ಜಿ ವೇತನ ಅರ್ಧದಷ್ಟು ಕಡಿತ; ಸಿಇಒಗಿಂತಲೂ ಪ್ರೇಮ್​ಜಿ ಸಂಬಳ ತೀರಾ ಕಡಿಮೆ

ಒಳ್ಳೆಯ ಲಾಭದಲ್ಲಿ ಕ್ರೆಸ್ಸಾಂಡಾ

ಮುಂಬೈನಲ್ಲಿ ಮುಖ್ಯಕಚೇರಿ ಹೊಂದಿರುವ ಕ್ರೆಸ್ಸಾಂಡಾ ಸಲ್ಯೂಷನ್ಸ್ ಐಟಿ ಹಾಗು ಮಾಹಿತಿ ಸೇವೆ ಕಂಪನಿಯಾಗಿದೆ. ಡಿಜಿಟಲ್ ಮೀಡಿಯಾ, ಐಟಿ ಮತ್ತು ಐಟಿ ಎನೇಬಲ್ಡ್ ಸರ್ವಿಸ್​ಗಳನ್ನು ನೀಡುತ್ತದೆ. ಕಳೆದ ಮೂರು ವರ್ಷಗಳಲ್ಲಿ ಈ ಸಂಸ್ಥೆ ಒಳ್ಳೆಯ ಲಾಭ ಗಳಿಸುತ್ತಾ ಬಂದಿದೆ. ಹೀಗಾಗಿ, ಅದರ ಷೇರುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ. ವರ್ಷದಿಂದ ವರ್ಷಕ್ಕೆ, ಕ್ವಾರ್ಟರ್​ನಿಂದ ಕ್ವಾರ್ಟರ್​ಗೆ ಅದರ ಲಾಭ ವೃದ್ಧಿಸುತ್ತಲೇ ಬಂದಿರುವುದು ಹೂಡಿಕೆದಾರರನ್ನು ಆಕರ್ಷಿಸಿರಬಹುದು.

3 ವರ್ಷದ ಹಿಂದೆ ಕ್ರೆಸ್ಸಾಂಡಾ ಷೇರಿನ ಮೇಲೆ 1ಲಕ್ಷ ಹೂಡಿದ್ದರೆ ಎಷ್ಟು ಲಾಭ ಇರುತ್ತಿತ್ತು?

ಆಗಲೇ ಹೇಳಿದಂತೆ ಕ್ರೆಸ್ಸಾಂಡಾ ಸಲ್ಯೂಷನ್ಸ್ 3 ವರ್ಷದ ಹಿಂದೆ, 2020 ಮೇ 1ರಂದು ಹೊಂದಿದ್ದ ಷೇರು ಬೆಲೆ ಕೇವಲ 19 ಪೈಸೆ ಮಾತ್ರ. ಮೇ 17ರಂದು ಅದರ ಬೆಲೆ ಬರೋಬ್ಬರಿ 27 ರುಪಾಯಿ ಆಗಿತ್ತು. ಈಗ ಮೇ 25ರಂದು ಬೆಲೆ 25.30 ರುಪಾಯಿಗೆ ಇಳಿದಿದೆ.

ಇದನ್ನೂ ಓದಿMahindra CIE: ಸಿಐಇ ಆಟೊಮೋಟಿವ್​ನಲ್ಲಿನ ಎಲ್ಲ ಪಾಲು ಮಾರಿದ ಮಹೀಂದ್ರ; ಎರಡೂ ಕಂಪನಿಗಳ ಷೇರಿಗೆ ಒಳ್ಳೆಯ ಡಿಮ್ಯಾಂಡ್

2020ರಲ್ಲಿ ಇದರ ಬೆಲೆ 19 ಪೈಸೆಯಷ್ಟಿದ್ದಾಗ 1 ಲಕ್ಷ ರೂ ಮೊತ್ತದಷ್ಟು ಹೂಡಿಕೆ ಮಾಡಿದವರು 2023 ಮೇ 17ರಂದು ಮಾರಿದ್ದರೆ 1.42 ಕೋಟಿ ರೂ ಸಂಪಾದನೆ ಮಾಡಬಹುದಿತ್ತು. ಕೆಲ ಜನರು ಷೇರುಪೇಟೆಯಿಂದ ದಿಢೀರ್ ಸಾಹುಕಾರರಾದರು ಎಂದು ನಾವು ಕೇಳುವ ಕಥೆ ಬಹುಶಃ ಇಂಥವೇ. ಇಂಥ ಮಲ್ಟಿಬ್ಯಾಗರ್ ಸ್ಟಾಕ್​ಗಳು ಸಿಕ್ಕವರೇ ಅದೃಷ್ಟಶಾಲಿಗಳು. ಹಾಗಂತ, ಮೂರು ವರ್ಷಗಳಲ್ಲಿ ಇದು ಸಖತ್ತಾಗಿ ಏರಿದೆ ಎಂದು ನಂಬಿ ಇದರ ಮೇಲೆ ಈಗ ಹೂಡಿಕೆ ಮಾಡಿದರೆ ಇನ್ನೂ 3 ವರ್ಷದಲ್ಲಿ ಇದು ಹೀಗೇ ಹೆಚ್ಚುತ್ತಾ ಹೋಗುತ್ತದೆ ಎನ್ನುವುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅದೇ ಷೇರುಪೇಟೆಯ ಅದೃಷ್ಟದಾಟದ ಮಹಿಮೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ