Multibagger: 1 ಲಕ್ಷ ರೂ ಹೂಡಿಕೆ ಒಂದು ವರ್ಷದಲ್ಲಿ 6 ಲಕ್ಷ ರೂ; ಇದು ಮಲ್ಟಿಬ್ಯಾಗರ್ ಅಪೋಲೋ ಮ್ಯಾಜಿಕ್ ಓಟ

|

Updated on: Nov 16, 2023 | 4:28 PM

Apollo Micro Systems Share Magic: ಡಿಫೆನ್ಸ್ ವಲಯದ ಅಪೋಲೋ ಮೈಕ್ರೋಸಿಸ್ಟಮ್ಸ್ ಸಂಸ್ಥೆಯ ಷೇರು ತನ್ನ ಭರ್ಜರಿ ಓಟ ಮುಂದುವರಿಸಿದೆ. ಕಳೆದ ಒಂದು ವರ್ಷದಲ್ಲಿ ಅಪೋಲೋ ಮೈಕ್ರೋ ಸಿಸ್ಟಮ್ಸ್ ಸಂಸ್ಥೆಯ ಷೇರು ಶೇ. 525ರಷ್ಟು ಏರಿದೆ. ಕಳೆದ ಆರು ತಿಂಗಳಲ್ಲಿ ಶೇ. 334 ರಷ್ಟು ಏರಿದೆ. ಕಳೆದ ಒಂದು ತಿಂಗಳಲ್ಲಿ ಅದರ ಷೇರುಬೆಲೆ ಶೇ. 120ರಷ್ಟು ಹೆಚ್ಚಾಗಿದೆ.

Multibagger: 1 ಲಕ್ಷ ರೂ ಹೂಡಿಕೆ ಒಂದು ವರ್ಷದಲ್ಲಿ 6 ಲಕ್ಷ ರೂ; ಇದು ಮಲ್ಟಿಬ್ಯಾಗರ್ ಅಪೋಲೋ ಮ್ಯಾಜಿಕ್ ಓಟ
ಷೇರುಪೇಟೆ
Follow us on

ಮುಂಬೈ, ನವೆಂಬರ್ 16: ಡಿಫೆನ್ಸ್ ವಲಯದ ಅಪೋಲೋ ಮೈಕ್ರೋಸಿಸ್ಟಮ್ಸ್ ಸಂಸ್ಥೆಯ (Apollo Micro Systems) ಷೇರು ತನ್ನ ಭರ್ಜರಿ ಓಟ ಮುಂದುವರಿಸಿದೆ. ಇಂದು ಗುರುವಾರ ಷೇರುಪೇಟೆಯಲ್ಲಿ ಅದು ಹೊಸ ಎತ್ತರಕ್ಕೆ ಏರಿದೆ. ಅಪೋಲೋ ಮೈಕ್ರೋಸಿಸ್ಟಮ್ಸ್ ಷೇರುಬೆಲೆ 147 ರೂ ಸಮೀಪಕ್ಕೆ ಹೋಗಿದೆ. ಇಂದು ಒಂದೇ ದಿನ ಶೇ. 10ರಷ್ಟು ಹೆಚ್ಚಾಗಿದೆ. ಕಳೆದ ಐದು ವರ್ಷದಿಂದ ಅಪೋಲೋದ ಓಟ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಅದರ ಮಧ್ಯೆ ಕಳೆದ ಒಂದು ವರ್ಷದಲ್ಲಿ ಎಲ್ಲರ ನಿರೀಕ್ಷೆ ಮೀರಿಸುವಷ್ಟು ವೇಗದಲ್ಲಿ ಅದರ ಷೇರುಬೆಲೆ ಬೇಡಿಕೆ ಕುದುರಿಸಿದೆ. ಅದರಲ್ಲೂ ಕಳೆದ ಎರಡು ತಿಂಗಳಲ್ಲಂತೂ ಅದು ರಾಕೆಟ್​ನಂತೆ ಛಂಗನೆ ಮೇಲೇರಿದೆ.

ಕಳೆದ ಒಂದು ವರ್ಷದಲ್ಲಿ ಅಪೋಲೋ ಮೈಕ್ರೋ ಸಿಸ್ಟಮ್ಸ್ ಸಂಸ್ಥೆಯ ಷೇರು ಶೇ. 525ರಷ್ಟು ಏರಿದೆ. ಕಳೆದ ಆರು ತಿಂಗಳಲ್ಲಿ ಶೇ. 334 ರಷ್ಟು ಏರಿದೆ. ಕಳೆದ ಒಂದು ತಿಂಗಳಲ್ಲಿ ಅದರ ಷೇರುಬೆಲೆ ಶೇ. 120ರಷ್ಟು ಹೆಚ್ಚಾಗಿದೆ.

ಅಪೋಲೋದಲ್ಲಿ ವರ್ಷದ ಹಿಂದೆ ಹೂಡಿಕೆ ಮಾಡಿದವರಿಗೆ ಸಿಗುವ ರಿಟರ್ನ್ ಎಷ್ಟು?

ಒಂದು ವರ್ಷದ ಹಿಂದೆ, ಅಂದರೆ 2022ರ ನವೆಂಬರ್​ನಲ್ಲಿ ಅಪೋಲೋ ಮೈಕ್ರೋ ಸಿಸ್ಟಮ್ಸ್ ಷೇರುಬೆಲೆ 22 ರೂ ಇತ್ತು. ಆಗ ಯಾರಾದರೂ ಕೂಡ ಈ ಷೇರಿನ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರು ಸಂಪತ್ತು 6.66 ಲಕ್ಷ ರೂ ಆಗಿರುತ್ತಿತ್ತು. ಅಂದರೆ ಒಂದೇ ವರ್ಷದಲ್ಲಿ ಹೂಡಿಕೆ ಆರು ಪಟ್ಟು ಹೆಚ್ಚಾಗಿ ಹೋದಂತಾಗುತ್ತದೆ.

ಇದನ್ನೂ ಓದಿ: ನಿಮ್ಮಲ್ಲಿ 10 ಲಕ್ಷ ರೂ ಇದ್ದರೆ ಎಲ್ಲೆಲ್ಲಿ ಹೂಡಿಕೆ ಮಾಡಬಹುದು? ಇಲ್ಲಿವೆ ನಾಲ್ಕು ಆಯ್ಕೆಗಳು

ಅಪೋಲೋ ಬೆಳವಣಿಗೆಗೆ ಏನು ಕಾರಣ?

  • ಅಪೋಲೋ ಮೈಕ್ರೋಸಿಸ್ಟಮ್ಸ್ ಡಿಫೆನ್ಸ್ ವಲಯದ ಕಂಪನಿಯಾಗಿರುವುದು
  • ಅಂಡರ್​ವಾಟರ್ ಮೈನ್​ಗಳ ಸರಬರಾಜು ಮಾಡುವ ಏಕೈಕ ಸಂಸ್ಥೆ. ಅಂದರೆ ಪ್ರತಿಸ್ಪರ್ಧಿಯೇ ಇಲ್ಲ
  • ರಕ್ಷಣಾ ವಲಯಕ್ಕೆ ಸರ್ಕಾರ ಹೆಚ್ಚು ಒತ್ತುಕೊಡುತ್ತಿರುವುದು ಮತ್ತು ಹೂಡಿಕೆ ಮಾಡುತ್ತಿರುವುದು
  • ಅಪೋಲೋ ಸಂಸ್ಥೆಯ ಕೈಯಲ್ಲಿ ಹಲವು ಡಿಫೆನ್ಸ್ ಪ್ರಾಜೆಕ್ಟ್​ಗಳಿರುವುದು

ಈ ಕಾರಣಗಳಿಗೆ ಹೂಡಿಕೆದಾರರ ಚಿತ್ತ ಅಪೋಲೋ ಮೈಕ್ರೋಸಿಸ್ಟಮ್ಸ್ ಮೇಲೆ ನೆಟ್ಟಿದೆ. ಆದಾಗ್ಯೂ, ಷೇರುಪೇಟೆ ತಜ್ಞರು ಈ ಸ್ಟಾಕ್ ಖರೀದಿಗೆ ಮುಗಿಬೀಳಬಾರದು ಎಂದು ಸಲಹೆ ಕೂಡ ನೀಡಿದ್ದಾರೆ. ಇದನ್ನು ಖಂಡಿತವಾಗಿ ಗಮನಿಸಬೇಕು. ಅವರ ಈ ಎಚ್ಚರಿಕೆಗೆ ಕಾರಣಗಳೂ ಇಲ್ಲದಿಲ್ಲ.

ಇದನ್ನೂ ಓದಿ: Genus Share: ಒಂದು ಲಕ್ಷ ರೂ ಹೂಡಿಕೆ ಮೂರು ವರ್ಷದಲ್ಲಿ 9 ಲಕ್ಷಕ್ಕೆ ವೃದ್ಧಿ; ಇದು ಜೀನಸ್ ಪವರ್ ಷೇರು ಮಹಿಮೆ

ಎರಡು ತಿಂಗಳಿಂದ ಒಂದು ಷೇರು ರಾಕೆಟ್​ನಂತೆ ಲಂಬವಾಗಿ ಏರುವುದು ಅಸ್ವಾಭಾವಿಕವಾಗಿರುತ್ತದೆ. ಕೋರ್ಸ್ ಕರೆಕ್ಷನ್ ಬಗ್ಗೆ ನೀವು ಕೇಳಿರಬಹುದು. ಅಸಾಧಾರಣವಾಗಿ ಬೆಲೆ ಏರಿದರೆ ಅದು ನೈಜ ಬೆಲೆ ಆಗಿರುವುದಿಲ್ಲ. ಸ್ವಾಭಾವಿಕವಾಗಿ ನೈಜ ಬೆಲೆಗೆ ಮರಳುತ್ತದೆ. ಈ ರೀತಿ ಅಪೋಲೋ ಮೈಕ್ರೋಸಿಸ್ಟಮ್ಸ್​ನ ಷೇರುಬೆಲೆ ಕೋರ್ಸ್ ಕರೆಕ್ಷನ್ ಆಗುವವರೆಗೂ ಕಾದು ನೋಡಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಈ ತಜ್ಞರ ಪ್ರಕಾರ ಅಪೋಲೋ ಮೈಕ್ರೋ ಸಿಸ್ಟಮ್ಸ್​ನ ಷೇರುಬೆಲೆ 130ರಿಂದ 135 ರೂ ಶ್ರೇಣಿಗೆ ಬಂದಲ್ಲಿ ಆಗ ಅದರ ಷೇರು ಖರೀದಿಸುವುದು ಉತ್ತಮ ಮತ್ತು ಸುರಕ್ಷಿತ. ಕೆಲ ಬ್ರೋಕರೇಜ್ ಕಂಪನಿಗಳು ಈ ಷೇರಿಗೆ 163 ರೂ ಟಾರ್ಗೆಟ್ ಪ್ರೈಸ್ ನೀಡಿವೆ. ಅಂದರೆ, ಕೆಲ ತಿಂಗಳಲ್ಲಿ ಇದರ ಬೆಲೆ 146 ರೂನಿಂದ 163 ರೂಗೆ ಏರುವ ಸಾಧ್ಯತೆ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ