ಡೀಮ್ಯಾಟ್ ಅಕೌಂಟ್
ಬೇರೆ ಬೇರೆ ಕಾರಣಕ್ಕೆ ನಾವು ಹಲವು ಡೀಮ್ಯಾಟ್ ಅಕೌಂಟ್ ಪಡೆದಿರಬಹುದು. ಈಗ ಕೆಲವು ಬಳಕೆಯಲ್ಲಿ ಇಲ್ಲದೇ ಇದ್ದರೂ ಅವುಗಳಿಗೆ ವಾರ್ಷಿಕ ಪಾಲನಾ ಶುಲ್ಕ ಅಥವಾ ಆ್ಯನುವಲ್ ಮೇಂಟೆನೆನ್ಸ್ ಫೀ ನೀಡುತ್ತಿರಬೇಕು. ಅಲ್ಲದೇ ಹಲವು ಡೀಮ್ಯಾಟ್ ಅಕೌಂಟ್ಗಳಿದ್ದರೆ ಗೊಂದಲಕ್ಕೆ ಎಡೆ ಮಾಡಿಕೊಡಬಹುದು. ಹೀಗಾಗಿ, ಅಗತ್ಯವಾದ ಅಕೌಂಟ್ಗಳನ್ನು ಉಳಿಸಿಕೊಂಡು, ಉಳಿದವನ್ನು ನೀಗಿಸುವುದು ಉತ್ತಮ.
ಡೀಮ್ಯಾಟ್ ಅಕೌಂಟ್ ಎಂದರೆ ಡೀಮೆಟೀರಿಯಲೈಸ್ಡ್ ಅಕೌಂಟ್. ಎಲೆಕ್ಟ್ರಾನಿಕ್ ರೂಪದಲ್ಲಿ ಷೇರುಗಳನ್ನು, ಬಾಂಡ್ಗಳನ್ನು ಇರಿಸಿಕೊಳ್ಳಲು ಇರುವ ಖಾತೆ. ಭಾರತದಲ್ಲಿ 2023-24ರಲ್ಲಿ 15 ಕೋಟಿಗೂ ಅಧಿಕ ಡೀಮ್ಯಾಟ್ ಖಾತೆಗಳು ಇವೆ ಎನ್ನಲಾಗುತ್ತಿದೆ.
ಡೀಮ್ಯಾಟ್ ಖಾತೆ ನಿಲ್ಲಿಸುವ ಮುನ್ನ ಈ ಕಾರ್ಯ ಮಾಡಿ….
- ನಿಮ್ಮ ಡೀಮ್ಯಾಟ್ ಅಕೌಂಟ್ಗೆ ಸಂಬಂಧಿಸಿದ ಯಾವುದೇ ಶುಲ್ಕ, ದಂಡ ಇತ್ಯಾದಿ ಎಲ್ಲಾ ಬಾಕಿ ಹಣ ಚುಕ್ತಾ ಮಾಡಬೇಕು. ಇಲ್ಲದಿದ್ದರೆ ಅಕೌಂಟ್ ನಿಲ್ಲಿಸಲು ಅಸಾಧ್ಯ.
- ನಿಮ್ಮ ಅಕೌಂಟ್ನಲ್ಲಿ ಯಾವುದಾದರೂ ಷೇರು ಇತ್ಯಾದಿ ಸೆಕ್ಯುರಿಟಿಗಳಿದ್ದಲ್ಲಿ ಅದನ್ನು ನಿಮ್ಮ ಬೇರೊಂದು ಸಕ್ರಿಯ ಖಾತೆಗೆ ವರ್ಗಾಯಿಸಬೇಕು.
- ಡಿಮ್ಯಾಟ್ ಖಾತೆಯಲ್ಲಿ ಮ್ಯುಚುವಲ್ ಫಂಡ್ ಇದ್ದಲ್ಲಿ ಅದನ್ನು ಹಿಂಪಡೆಯಿರಿ, ಅಥವಾ ಬೇರೆ ಖಾತೆಗೆ ವರ್ಗಾವಣೆ ಮಾಡಿ.
ಇದನ್ನೂ ಓದಿ: ಎಸ್ಜಿಬಿ vs ಗೋಲ್ಡ್ ಇಟಿಎಫ್ vs ಡಿಜಿಟಲ್ ಗೋಲ್ಡ್; ಯಾವುದು ಉತ್ತಮ? ಇಲ್ಲಿದೆ ಒಂದು ಹೋಲಿಕೆ
ಡೀಮ್ಯಾಟ್ ಅಕೌಂಟ್ ಮುಕ್ತಾಯಗೊಳಿಸುವ ಪ್ರಕಿಯೆಗಳು
- ನಿಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್ (ಬ್ರೋಕರ್ ಕಂಪನಿಗಳು) ವೆಬ್ಸೈಟ್ನಿಂದ ಡೀಮ್ಯಾಟ್ ಅಕೌಂಟ್ ಕ್ಲೋಶರ್ ಫಾರ್ಮ್ ಡೌನ್ಲೋಡ್ ಮಾಡಿ.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ. ಅಕೌಂಟ್ ನಂಬರ್, ಕ್ಲೈಂಟ್ ಐಡಿ, ಡಿಪಿ ಐಡಿ ಇತ್ಯಾದಿ ಎಲ್ಲಾ ಮಾಹಿತಿಯನ್ನು ನಿಖರವಾಗಿ ತುಂಬಿರಿ.
- ನಿಮ್ಮ ಪ್ಯಾನ್, ಆಧಾರ್ ಅಥವಾ ಬೇರೆ ಐಡಿ ಪ್ರೂಫ್ ದಾಖಲೆ ಪ್ರತಿ ಎತ್ತಿಟ್ಟುಕೊಳ್ಳಿ. ಹಾಗೆಯೇ, ಬ್ಯಾಂಕ್ನ ಕ್ಯಾನ್ಸಲ್ಡ್ ಚೆಕ್ ಎತ್ತಿಟ್ಟುಕೊಳ್ಳಿ.
- ನೀವು ಅರ್ಜಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ಬ್ರೋಕರ್ನ ಕಚೇರಿಗೆ ಹೋಗಿ ಸಲ್ಲಿಸಬೇಕು. ಕೆಲ ಬ್ರೋಕರ್ ಸಂಸ್ಥೆಗಳು ಇಮೇಲ್ ಮೂಲಕವೇ ಅಕೌಂಟ್ ನಿಲುಗಡೆಗೆ ಅವಕಾಶ ಕೊಡುತ್ತವೆ. ಯಾವುದಕ್ಕೂ ನಿಮ್ಮ ಡಿಪಿ ವೆಬ್ಸೈಟ್ನಲ್ಲಿ ನಿಯಮಗಳನ್ನು ತಿಳಿದು ಮುಂದುವರಿಯಿರಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ