EPFO Higher Pension: ಇಪಿಎಸ್, ಹೆಚ್ಚು ಪಿಂಚಣಿಗೆ ಇವತ್ತೇ ಕೊನೆ; ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳು ಸಿದ್ಧವಿರಲಿ

|

Updated on: Jul 11, 2023 | 10:57 AM

EPS Scheme: ಇಪಿಎಫ್​ಒನ ಯೂನಿಫೈಡ್ ಮೆಂಬರ್ ಪೋರ್ಟಲ್​ನಲ್ಲಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಜುಲೈ 11, ಇವತ್ತು ಡೆಡ್​ಲೈನ್ ಇದೆ. ಅರ್ಜಿ ಸಲ್ಲಿಸುವ ಮುನ್ನ ದಾಖಲೆಗಳು ಏನೇನು ಬೇಕು ಎನ್ನುವ ವಿವರ ಇಲ್ಲಿದೆ...

EPFO Higher Pension: ಇಪಿಎಸ್, ಹೆಚ್ಚು ಪಿಂಚಣಿಗೆ ಇವತ್ತೇ ಕೊನೆ; ಅರ್ಜಿ ಸಲ್ಲಿಸುವ ಮುನ್ನ ಈ ದಾಖಲೆಗಳು ಸಿದ್ಧವಿರಲಿ
ಇಪಿಎಫ್
Follow us on

ಇಪಿಎಫ್​ಒದಿಂದ ನಡೆಸಲಾಗುವ ಇಪಿಎಫ್ ಯೋಜನೆಗೆ ಜೋಡಿತವಾಗಿರುವ ಇಪಿಎಸ್ ಸ್ಕೀಮ್​ನಲ್ಲಿ ಹೆಚ್ಚುವರಿ ಪಿಂಚಣಿಗೆ (Higher Pension) ಅರ್ಜಿ ಸಲ್ಲಿಸಲು ಇವತ್ತು (ಜುಲೈ 11) ಕೊನೆಯ ದಿನವಾಗಿದೆ. ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದ್ದು, ಕೆಲ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಂಡರೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಇಪಿಎಫ್​ಒನ ಯೂನಿಫೈಡ್ ಮೆಂಬರ್ ಪೋರ್ಟಲ್​ನಲ್ಲಿರುವ ಪೆನ್ಷನ್ ಆನ್ ಹೈಯರ್ ಸ್ಯಾಲರಿ (Pension on Higher Salary) ಎಂಬ ಆಯ್ಕೆ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯ. ಈ ಹಿಂದೆ ಇದ್ದ ಪ್ರಕ್ರಿಯೆ ತುಸು ಸಂಕೀರ್ಣ ಎನಿಸಿತ್ತು. ಸಂಸ್ಥೆ ಹಾಗು ಉದ್ಯೋಗಿಗಳು ಜಂಟಿ ಅರ್ಜಿ ಸಲ್ಲಿಸಬೇಕಿತ್ತು. ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ಇಪಿಎಫ್​ಒ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

ನೀವು ಅಧಿಕ ಪಿಂಚಣಿಗೆ ಅರ್ಹರಾಗಿದ್ದು ಇನ್ನೂ ಅರ್ಜಿ ಸಲ್ಲಿಸಿಲ್ಲದಿದ್ದರೆ, ಈ ಕೆಳ ಕಾಣಿಸಿದ ದಾಖಲೆಗಳನ್ನು ಅಥವಾ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಿ:

  1. ಯುಎಎನ್ ನಂಬರ್
  2. ಆಧಾರ್ ಕಾರ್ಡ್
  3. ಆಧಾರ್​ಗೆ ಜೋಡಿತವಾದ ಮೊಬೈಲ್ ನಂಬರ್
  4. ನೀವು ಕೆಲಸ ಮಾಡಿದ ಎಲ್ಲಾ ಸಂಸ್ಥೆಗಳಲ್ಲಿನ ಇಪಿಎಸ್ ನಂಬರ್​ಗಳು, ಆ ಸಂಸ್ಥೆಗಳ ಇಪಿಎಸ್ ಶುರುವಾದ ಹಾಗೂ ಮುಕ್ತಾಯವಾದ ದಿನಾಂಕಗಳ ಮಾಹಿತಿ
  5. ಪಿಎಫ್ ಪಾಸ್​ಬುಕ್​ನ ಒಂದು ಪ್ರತಿ
  6. 1952ರ ಇಪಿಎಫ್ ಸ್ಕೀಮ್​ನ ಪ್ಯಾರಾ 26(6) ಅಡಿಯಲ್ಲಿ ಸಂಸ್ಥೆಯ ಮುಚ್ಚಳಿಕೆ ಹಾಗೂ ಸಂಸ್ಥೆ ಮತ್ತು ಉದ್ಯೋಗಿಯಿಂದ ಜಂಟಿ ಮನವಿಯ ದಾಖಲೆ

ಇದನ್ನೂ ಓದಿHigher Pension: ಅಧಿಕ ಇಪಿಎಸ್ ಪಿಂಚಣಿಗೆ ಜುಲೈ 11 ಡೆಡ್​ಲೈನ್; ಇಪಿಎಸ್ ಮತ್ತು ಎನ್​ಪಿಎಸ್, ಯಾವುದು ಬೆಟರ್?

ಇಲ್ಲಿ ಕೊನೆಯ ಅಂಶದ ವಿಚಾರದಲ್ಲಿ ಹಿಂದೆ ತುಸು ಸಂಕೀರ್ಣ ನಿಯಮವಿತ್ತು. ಈಗ ಅದನ್ನು ಸರಳಗೊಳಿಸಲಾಗಿದೆ. ಪರ್ಮಿಷನ್ ಪ್ರೂಫ್ ಕೊಡುವ ಅವಶ್ಯಕತೆ ಈಗ ಇಲ್ಲ. ಹಿಂದೆ ಅಧಿಕ ವೇತನಕ್ಕೆ ಪಿಎಫ್ ಕೊಡುಗೆ ಇರುವುದಕ್ಕೆ ಪಿಎಫ್ ಪಾಸ್​ಬುಕ್ ಕೂಡ ಸರಿಯಾದ ದಾಖಲೆಯಾಗುತ್ತದೆ.

ನೀವು ಅರ್ಜಿ ಸಲ್ಲಿಸುವುದಾದರೆ ಯೂನಿಫೈಡ್ ಮೆಂಬರ್ ಪೋರ್ಟಲ್​ಗೆ ಭೇಟಿ ನೀಡಿ: unifiedportal-mem.epfindia.gov.in/memberinterface/

ಇಲ್ಲಿ ಯುಎಎನ್ ನಂಬರ್ ಬಳಸಿ ಲಾಗಿನ್ ಆದ ಬಳಿಕ ಪೆನ್ಷನ್ ಆನ್ ಹೈಯರ್ ಸ್ಯಾಲರಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಅಲ್ಲಿಯೇ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ