ಸಾಮಾನ್ಯ ಜನರ ಮೊದಲ ಹೂಡಿಕೆ ಆಯ್ಕೆ ಈಗಲೂ ಫಿಕ್ಸೆಡ್ ಡೆಪಾಸಿಟ್ಗಳೇ (fixed deposit) ಆಗಿವೆ. ಉಳಿಸಿ ಕೂಡಿಟ್ಟ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಸಹಕಾರಿ ಬ್ಯಾಂಕುಗಳಿಗೆ (co-operative banks) ಹೋಲಿಸಿದರೆ ಪ್ರಮುಖ ಬ್ಯಾಂಕುಗಳಲ್ಲಿ ಎಫ್ಡಿಗಳಿಗೆ ನೀಡಲಾಗುವ ಬಡ್ಡಿ ಕಡಿಮೆಯೇ. ಆದರೆ, ಎಫ್ಡಿಗಳು ತುಸು ದೀರ್ಘಾವಧಿಯದ್ದಾದ್ದರಿಂದ ದೊಡ್ಡ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹೆಚ್ಚು ಸುರಕ್ಷಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಎರಡು ಅತಿದೊಡ್ಡ ಬ್ಯಾಂಕುಗಳಾದ ಎಚ್ಡಿಎಫ್ಸಿ ಮತ್ತು ಎಸ್ಬಿಐಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಎಷ್ಟು ಬಡ್ಡಿ ಆಫರ್ ಮಾಡಲಾಗುತ್ತಿದೆ ಎಂಬ ವಿವರ ಮತ್ತು ಹೋಲಿಕೆ ಇಲ್ಲಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್ಡಿಎಫ್ಸಿಯಲ್ಲಿ ಫಿಕ್ಸೆಡ್ ಡೆಪಾಸಿಟ್ಗಳು 7 ದಿನದಿಂದ ಆರಂಭಿಸಿ 10 ವರ್ಷದವರೆಗೂ ಅವಕಾಶಗಳಿವೆ. ಇವಕ್ಕೆ ಬಡ್ಡಿದರಗಳು ಶೇ. 3ರಿಂದ ಮೊದಲುಗೊಂಡು ಶೇ. 7.10ರವರೆಗೆ ಇವೆ. ಹಿರಿಯ ನಾಗರಿಕರಿಗೆ ಬಡ್ಡಿ ಶೇ. 7.75ರವರೆಗೂ ಇದೆ.
ಹಿರಿಯ ನಾಗರಿಕರಿಗೆ 50 ಬೇಸಿಸ್ ಅಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆದರೆ, 5 ವರ್ಷದಿಂದ 10 ವರ್ಷದ ಠೇವಣಿ ಇಡುವ ಹಿರಿಯ ನಾಗರಿಕರಿಗೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ.
ಇದನ್ನೂ ಓದಿ: Gold Loan- ಬ್ಯಾಂಕ್ ಸಾಲ ಸಿಗುತ್ತಿಲ್ಲವಾ? ಪರ್ಸನಲ್ ಲೋನ್ಗಿಂತಲೂ ಕಡಿಮೆ ದರಕ್ಕೆ ನಿಮಗೆ ಸುಲಭವಾಗಿ ಸಿಗುತ್ತದೆ ಈ ಸಾಲ
ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕೆನಿಸಿದ ಎಸ್ಬಿಐನಲ್ಲಿ 7 ದಿನದಿಂದ 10 ವರ್ಷದವರೆಗೂ ವಿವಿಧ ಅವಧಿ ಠೇವಣಿಗಳಿವೆ. ಬಡ್ಡಿದರ ಶೇ. 3ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗಕರಿಗೆ ಶೇ. 7.50ರವರೆಗೂ ಬಡ್ಡಿ ದರ ಇದೆ.
ಹಿರಿಯ ನಾಗರಿಕರಾದರೆ 2 ವರ್ಷದಿಂದ 3 ವರ್ಷಕ್ಕೆ ಹಾಗೂ 5 ವರ್ಷದಿಂದ 10 ವರ್ಷಕ್ಕೆ ಇಡುವ ಎಫ್ಡಿಗಳಿಗೆ ಶೇ. 7.50ರಷ್ಟು ಬಡ್ಡಿ ಕೊಡಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ