Rule Changes: ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್​ನಲ್ಲಿ 7 ಬದಲಾವಣೆಗಳು; ಯಾವ್ಯಾವುವು, ಇಲ್ಲಿದೆ ವಿವರ

Senior Citizens Saving Scheme: ನಿವೃತ್ತಿ ಬಳಿಕ ಹೂಡಿಕೆಗೆ ಕಾಲಮಿತಿ ಹೆಚ್ಚಳ, ಅಗಲಿದ ಉದ್ಯೋಗಿಯ ಸತಿ ಅಥವಾ ಪತಿಗೆ ಹೂಡಿಕೆಗೆ ಅವಕಾಶ ಸೇರಿದಂತೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಸರ್ಕಾರ 7 ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಅದರ ಬಗ್ಗೆ ವಿವರ ಇಲ್ಲಿದೆ...

Rule Changes: ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್​ನಲ್ಲಿ 7 ಬದಲಾವಣೆಗಳು; ಯಾವ್ಯಾವುವು, ಇಲ್ಲಿದೆ ವಿವರ
ಸೀನಿಯರ್ ಸಿಟಿಜನ್ಸ್ ಸೇವಿಂಗ್ ಸ್ಕೀಮ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 13, 2023 | 3:58 PM

ಹಿರಿಯ ನಾಗರಿಕರ ಉಳಿತಾಯ ಯೋಜನೆ ಎಸ್​ಸಿಎಸ್​ಎಸ್​ನಲ್ಲಿ (SCSS- senior citizens Saving Scheme) ಸರ್ಕಾರ ಕೆಲ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಕಳೆದ ವಾರ, ನವೆಂಬರ್ 7ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ, ಹೂಡಿಕೆಗೆ ಹೆಚ್ಚಿನ ಕಾಲಮಿತಿ, ಅವಧಿಗೆ ಮುಂಚೆ ಹಣ ಹಿಂಪಡೆದರೆ ಮಾಡಲಾಗುವ ಕಡಿತ, ಅವಧಿ ವಿಸ್ತರಣೆ ಇತ್ಯಾದಿ ಏಳು ನಿಯಮ ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳ ವಿವರ ಈ ಕೆಳಕಂಡಂತಿದೆ:

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ನಿವೃತ್ತಿ ಸ್ಕೀಮ್​ಗೆ ಹೂಡಿಕೆ ಮಾಡಲು ಹೆಚ್ಚಿನ ಕಾಲಮಿತಿ

55 ವರ್ಷ ಮೇಲ್ಪಟ್ಟು ಮತ್ತು 60 ವರ್ಷ ಮೀರದ ವಯಸ್ಸಿನಲ್ಲಿ ನಿವೃತ್ತರಾದವರು ತಮ್ಮ ರಿಟೈರ್ಮೆಂಟ್ ಹಣವನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಈ ಮುಂಚೆ ಒಂದು ತಿಂಗಳವರೆಗೆ ಕಾಲಾವಕಾಶ ಇತ್ತು. ಈಗ ರಿಟೈರ್ಮೆಂಟ್ ಫಂಡ್ ಬಂದು 3 ತಿಂಗಳವರೆಗೂ ಹೂಡಿಕೆಗೆ ಕಾಲಾವಕಾಶ ಕೊಡಲಾಗಿದೆ.

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ಗಂಡ ಅಥವಾ ಹೆಂಡತಿಗೆ ಹೂಡಿಕೆಗೆ ಅವಕಾಶ

ಸರ್ಕಾರಿ ಉದ್ಯೋಗಿ ವಯಸ್ಸು 50 ದಾಟಿದ್ದು, ನಿವೃತ್ತಿಗೆ ಮುನ್ನವೇ ಮೃತಪಟ್ಟಲ್ಲಿ ಪರಿಹಾರ ಹಣವನ್ನು ಅವರ ಗಂಡ ಅಥವಾ ಹೆಂಡತಿ ಎಸ್​ಸಿಎಸ್​ಎಸ್ ಸ್ಕೀಮ್​ನಲ್ಲಿ ಹೂಡಿಕೆ ಮಾಡಲು ಅವಕಾಶ ಕೊಡಲಾಗಿದೆ. ಇದು ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: Government Scheme: ಎಸ್​ಸಿಎಸ್​ಎಸ್ ಸ್ಕೀಮ್​ನಿಂದ ಏನೇನು ಲಾಭ? ಈ ಯೋಜನೆಗಿರುವ ಬಡ್ಡಿ, ತೆರಿಗೆ ರಿಯಾಯಿತಿ ಇತ್ಯಾದಿ ವಿವರ ತಿಳಿಯಿರಿ

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ರಿಟೈರ್ಮೆಂಟ್ ಬೆನಿಫಿಟ್ ಎಂದರೇನು?

ಉದ್ಯೋಗಿಯ ರಿಟೈರ್ಮೆಂಟ್ ಬೆನಿಫಿಟ್ ಏನು ಎಂದು ಹೊಸ ವ್ಯಾಖ್ಯಾನ ನೀಡಲಾಗಿದೆ. ಪಿಎಫ್, ಗ್ರಾಚುಟಿ, ಪಿಂಚಣಿ, ರಜೆ ನಗದೀಕರಣ, ಸಂಸ್ಥೆಯ ಗ್ರೂಪ್ ಇನ್ಷೂರೆನ್ಸ್ ಲಾಭ, ಇಪಿಎಸ್, ವಿಆರ್​ಎಸ್ ಹಣ ಇತ್ಯಾದಿ ಉದ್ಯೋಗಸ್ಥಳದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಉದ್ಯೋಗಿಗೆ ಅವರ ನಿವೃತ್ತಿ ಬಳಿಕ ಸಿಕ್ಕರೆ ಅವನ್ನು ರಿಟೈರ್ಮೆಂಟ್ ಬೆನಿಫಿಟ್ ಎಂದು ಪರಿಗಣಿಸಲಾಗುತ್ತದೆ.

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ಅವಧಿಗೆ ಮುಂಚೆ ವಿತ್​ಡ್ರಾ ಮಾಡಿದರೆ?

ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಪ್ರೀಮೆಚ್ಯೂರ್ ವಿತ್​ಡ್ರಾಯಲ್ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಈ ಮುಂಚೆ ಸ್ಕೀಮ್ ಆರಂಭವಾಗಿ ಒಂದು ವರ್ಷದೊಳಗೆ ಹಿಂಪಡೆದರೆ ಪೂರ್ಣ ಬಡ್ಡಿಹಣವನ್ನು ಕಡಿತ ಮಾಡಲಾಗಿ, ಉಳಿದ ಅಸಲಿ ಹಣ ಕೊಡಲಾಗುತ್ತಿತ್ತು. ಈಗ ಹೊಸ ನಿಯಮದ ಪ್ರಕಾರ ಸ್ಕೀಮ್​ನಲ್ಲಿ ತೊಡಗಿಸಲಾದ ಹಣದಲ್ಲಿ ಶೇ. 1ರಷ್ಟು ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ.

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ಎಷ್ಟು ಬೇಕಾದರೂ ವಿಸ್ತರಣೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ 5 ವರ್ಷಕ್ಕೆ ಮೆಚ್ಯೂರಿಟಿ ಆಗುತ್ತದೆ. ಅದಾದ ಬಳಿಕ ಸ್ಕೀಮ್ ಅನ್ನು ಮೂರು ವರ್ಷ ಅವಧಿಗೆ ವಿಸ್ತರಿಸಬಹುದು. ಹೀಗೆ ಪ್ರತೀ ಮೂರು ವರ್ಷಕ್ಕೊಮ್ಮೆ ಎಷ್ಟು ಬಾರಿ ಬೇಕಾದರೂ ಸ್ಕೀಮ್ ಅವಧಿ ವಿಸ್ತರಿಸುತ್ತಾ ಹೋಗಬಹುದು. ಪ್ರತೀ ಬಾರಿಯೂ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಹಿಂದಿನ ನಿಯಮದಲ್ಲಿ ಒಮ್ಮೆ ಮಾತ್ರವೇ ಅವಧಿ ವಿಸ್ತರಣೆಗೆ ಅವಕಾಶ ಇತ್ತು.

ಇದನ್ನೂ ಓದಿ: FD Rates: ಹಿರಿಯ ನಾಗರಿಕರ ಉಳಿತಾಯ ಯೋಜನೆ VS ಎಫ್​ಡಿ; ಯಾವುದರಲ್ಲಿ ಹೂಡಿಕೆ ಉತ್ತಮ?

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ಠೇವಣಿ ವಿಸ್ತರಣೆಗೆ ಬಡ್ಡಿ

ಸೀನಿಯರ್ ಸಿಟಜನ್ಸ್ ಸೇವಿಂಗ್ ಸ್ಕೀಮ್​ನಲ್ಲಿ ಮೆಚ್ಯೂರಿಟಿ ಆದ ಬಳಿಕ ಯೋಜನೆಯನ್ನು ವಿಸ್ತರಿಸಿದಾಗ, ಆಗ ಇರುವ ಬಡ್ಡಿದರ ಅನ್ವಯ ಆಗುತ್ತದೆ. ಈ ಹಿಂದೆ ಇದ್ದ ನಿಯಮದಲ್ಲಿ, ಮೆಚ್ಯೂರಿಟಿ ವೇಳೆ ಇದ್ದ ಬಡ್ಡಿದರ ಅನ್ವಯ ಆಗುತ್ತಿತ್ತು.

ಎಸ್​ಸಿಎಸ್​ಎಸ್ ನಿಯಮ ಬದಲಾವಣೆ: ಗರಿಷ್ಠ ಠೇವಣಿ ಮೊತ್ತ

ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ 30,00,000 ರೂವರೆಗೂ ಹೂಡಿಕೆಗೆ ಅವಕಾಶ ಇದೆ. ನೀವು ಎಷ್ಟು ಬಾರಿ ಸ್ಕೀಮ್ ವಿಸ್ತರಿಸಿದರೂ ಠೇವಣಿ ಮೊತ್ತವು ಈ ಅನುಮತಿಸಿದ ಮಿತಿಗಿಂತ ಹೆಚ್ಚಿರಬಾರದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ