ಎಚ್​ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್​ಎಲ್​ಎಲ್​ನತ್ತ

HAL Super Stock: ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್​ಬಸ್​ನ ಎ-320 ವಿಮಾನದ ಎಂಆರ್​ಒ ಘಟಕ ಸ್ಥಾಪನೆಗೆ ಎಚ್​ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್​ಎಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುತ್ತಿರುವ ಕೋಳಿಯಾ? ಸರ್ಕಾರಿ ಷೇರೆಂದರೆ ಮೂಗುಮುರಿಯುತ್ತಿದ್ದವರ ಮುಖ ಈಗ ಎಚ್​ಎಲ್​ಎಲ್​ನತ್ತ
ಎಚ್​ಎಎಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2023 | 11:36 AM

ಷೇರು ಮಾರುಕಟ್ಟೆಯಲ್ಲಿ ಬಹಳಷ್ಟು ಪಳಗಿದ ಹೂಡಿಕೆದಾರರು ಸರ್ಕಾರಿ ಸಂಸ್ಥೆಗಳ ಷೇರೆಂದರೆ (PSU sector stocks) ಮೂಗು ಮುರಿಯುವುದುಂಟು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಇರುವ ಅಸಮಾಧಾನವು ಇದಕ್ಕೆ ಕಾರಣ. ಐದಾರು ವರ್ಷದ ಹಿಂದೆ ಷೇರುಪೇಟೆಗೆ ಅಡಿ ಇಟ್ಟ ಎಚ್​ಎಎಲ್ ಸಂಸ್ಥೆ (HAL- Hindustan Aeronautics Ltd) ಬಗ್ಗೆಯೂ ಹಲವರು ಅನುಮಾನದ ದೃಷ್ಟಿ ನೆಟ್ಟಿದ್ದು ಹೌದು. ಆದರೆ, ಈಗ ಎಲ್ಲರ ನಿರೀಕ್ಷೆಮೀರಿ ಎಚ್​ಎಎಲ್ ಗರಿಗೆದರಿದೆ. 2018ರ ಮಾರ್ಚ್​ನಲ್ಲಿ ಪದಾರ್ಪಣೆಯಾದಂದಿನಿಂದ ಇಲ್ಲಿಯವರೆಗೆ ಐದೂವರೆ ವರ್ಷದಲ್ಲಿ ಎಚ್​ಎಎಲ್ ಷೇರು ಶೇ. 262ರಷ್ಟು ಬೆಳೆದಿದೆ.

ನವೆಂಬರ್ 10ರಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿ ಸಂಸ್ಥೆಯ ಷೇರುಬೆಲೆ 2,110.95 ರೂಗೆ ಮಟ್ಟಕ್ಕೆ ಹೋಗಿತ್ತು. ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಲಾಭ 1,236 ಕೋಟಿ ರೂಗೆ ಏರಿತ್ತು. ಹಾಗೆಯೇ, ವಿಶ್ವದ ಅತಿದೊಡ್ಡ ವಿಮಾನ ತಯಾರಿಕಾ ಸಂಸ್ಥೆ ಏರ್​ಬಸ್​ನ ಎ-320 ವಿಮಾನದ ಎಂಆರ್​ಒ ಘಟಕ ಸ್ಥಾಪನೆಗೆ ಎಚ್​ಎಎಲ್ ಒಪ್ಪಂದ ಮಾಡಿಕೊಂಡಿತು. ಈ ಬೆಳವಣಿಗೆಗಳು ಎಚ್​ಎಲ್ ಷೇರಿಗೆ ಇದ್ದ ಡಿಮ್ಯಾಂಡ್ ಅನ್ನು ಇನ್ನಷ್ಟು ಹೆಚ್ಚಿಸಿವೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

ರಕ್ಷಣಾ ವಲಯಕ್ಕೆ ಸರ್ಕಾರ ಕೊಟ್ಟಿರುವ ಒತ್ತು ಎಚ್​ಎಎಲ್​ಗೆ ವರದಾನ

ರಕ್ಷಣಾ ಕ್ಷೇತ್ರದಲ್ಲಿ ಎಚ್​ಎಎಲ್ ಹಳೆಯ ಹುಲಿ. ಎಚ್​ಎಎಲ್ ಅನ್ನು ಮೂಲೆಗುಂಪು ಮಾಡಿ ಖಾಸಗಿ ವಲಯಕ್ಕೆ ಸರ್ಕಾರ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಕೆಲ ವರ್ಷಗಳ ಹಿಂದೆ ಆರೋಪ ಇತ್ತು. ಆದರೆ, ಇದೀಗ ಎಚ್​ಎಎಲ್ ಸಾಕಷ್ಟು ಒಪ್ಪಂದಗಳನ್ನು ಗಿಟ್ಟಿಸಿದೆ.

ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದು, ಅದರ ಫಲ ಎಚ್​ಎಎಲ್​ಗೆ ಹೆಚ್ಚು ಸಿಗುತ್ತಿದೆ. ಎಚ್​ಎಎಲ್ ನಿರ್ಮಿತ ಯುದ್ಧವಿಮಾನಗಳನ್ನು ವಿದೇಶಗಳಿಗೂ ರಫ್ತು ಮಾಡಲು ಮುಂದಲಾಗಿದೆ. ಈ ಎಲ್ಲಾ ಕಾರಣದಿಂದ ಎಚ್​ಎಎಲ್ ಸಂಸ್ಥೆ ಮುಂದಿನ ಹಲವು ವರ್ಷಗಳ ಕಾಲ ಸಾಕಷ್ಟು ಯೋಜನೆಗಳನ್ನು ನಿರ್ವಹಿಸಲಿರುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

ಎಚ್​ಎಎಲ್ ಚಿನ್ನದ ಮೊಟ್ಟೆ ಇಡುವ ಕೋಳಿ…

ಎಚ್​ಎಎಲ್ ಸಂಸ್ಥೆ ಕಳೆದ ಒಂದು ವರ್ಷದಲ್ಲಿ ಶೇ. 66ರಷ್ಟು ಬೆಳೆದಿದೆ. ಐದೂವರೆ ವರ್ಷದಲ್ಲಿ ಶೇ. 262ರಷ್ಟು ಹೆಚ್ಚಿದೆ. ಈ ಓಟ ಇಲ್ಲಿಗೇ ನಿಲ್ಲುವಂಥದ್ದಲ್ಲ. ಹೂಡಿಕೆ ತಜ್ಞ ಕುಶ್ ಬೋಹ್ರ ಅವರ ಪ್ರಕಾರ ಎಚ್​ಎಎಲ್ ಷೇರಿನ ವೇಗದ ಓಟ ಇನ್ನೂ ಬಹಳ ಕಾಲ ಇರಲಿದೆ. ಸರ್ಕಾರ ಕೂಡ ಡಿಫೆನ್ಸ್ ಸೆಕ್ಟರ್​ಗೆ ಒತ್ತು ಕೊಡುತ್ತಿರುವುದರಿಂದ ಎಚ್​ಎಎಲ್ ದೀರ್ಘಾವಧಿಯಲ್ಲಿ ಬಹಳ ಬೆಳೆಯಲಿರುವ ಸಂಸ್ಥೆಯಾಗಿದೆ. ಸದ್ಯ ಎಚ್​ಎಎಲ್ ಷೇರಿನ ಬೆಲೆ 2,056 ರೂ ಇದೆ. 2020ರ ಡಿಸೆಂಬರ್ ತಿಂಗಳಲ್ಲಿ ಇದರ ಬೆಲೆ ಕೇವಲ 343 ರೂ ಇತ್ತು. ಮೂರು ವರ್ಷದಲ್ಲಿ ಅಗಾಧವಾಗಿ ಬೆಳೆದಿರುವ ಎಚ್​ಎಎಲ್ ಷೇರುಬೆಲೆ ಮುಂದಿನ ದೀಪಾವಳಿಗೆ 2,500 ರೂ ದಾಟುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ