ಠೇವಣಿ
ಬ್ಯಾಂಕ್ಗಳಲ್ಲಿ ಉಳಿತಾಯ ಹಣವನ್ನು ಠೇವಣಿ ಇಡುವುದು ಮಧ್ಯಮವರ್ಗದ ಫೇವರಿಟ್ ಹೂಡಿಕೆ ಎನಿಸಿದೆ. ಈಕ್ವಿಟಿ ಆಧಾರಿತ ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಹೆಚ್ಚಿದ್ದರೂ ಸಾಂಪ್ರದಾಯಿಕವಾದ ಎಫ್ಡಿ ಸ್ಕೀಮ್ಗಳಿಗೆ (fixed deposit schemes) ಮೊರೆಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲ. ಆರ್ಡಿ ಮತ್ತು ಎಫ್ಡಿ ಬಹಳ ಸರಳಗೊಂಡಿದೆ. ಈಗಂತೂ ಆನ್ಲೈನ್ನಲ್ಲಿ ಬಹಳ ಬೇಗ ಠೇವಣಿ ಇಡಬಹುದು. ದೀರ್ಘಾವಧಿಗಿಂತ ಹೆಚ್ಚಾಗಿ 5 ವರ್ಷದೊಳಗಿನ ಅಲ್ಪಾವಧಿ ಹೂಡಿಕೆಗೆ ಎಫ್ಡಿ ಹೇಳಿ ಮಾಡಿಸಿದ್ದಾಗಿದೆ ಎಂಬುದು ಹಣಕಾಸು ತಜ್ಞರ ಅಭಿಮತ. ಎಸ್ಬಿಐ, ಕೆನರಾ ಬ್ಯಾಂಕ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗಿಂತ ಖಾಸಗಿ ಬ್ಯಾಂಕ್ ಮತ್ತು ಸಣ್ಣ ಬ್ಯಾಂಕುಗಳಲ್ಲಿ ಠೇವಣಿ ದರಗಳು ಹೆಚ್ಚು. ಯಾವ್ಯಾವ ಬ್ಯಾಂಕುಗಳಲ್ಲಿ ಎಫ್ಡಿ ದರಗಳು ಎಷ್ಟು ಎಂಬ ವಿವರ ಇಲ್ಲಿದೆ.
ವಿವಿಧ ಬ್ಯಾಂಕುಗಳಲ್ಲಿ 1 ಕೋಟಿ ರೂ ಒಳಗಿನ 1ರಿಂದ 5 ವರ್ಷದ ಅವಧಿಯ ಠೇವಣಿಗಳಿಗೆ ನೀಡಲಾಗುವ ಬಡ್ಡಿದರಗಳು
- ಡಿಸಿಬಿ ಬ್ಯಾಂಕ್: ಶೇ. 7.15ರಿಂದ ಶೇ. 7.90ರವರೆಗೆ ಬಡ್ಡಿ
- ಎಕ್ಸಿಸ್ ಬ್ಯಾಂಕ್: ಶೇ. 6.75ರಿಂದ ಶೇ. 7.10ರವರೆಗೆ ಬಡ್ಡಿ
- ಎಚ್ಡಿಎಫ್ಸಿ ಬ್ಯಾಂಕ್: ಶೇ. 6.60ರಿಂದ ಶೇ. 7.20ರವರೆಗೆ ಬಡ್ಡಿ
- ಇಂಡಸ್ಇಂಡ್ ಬ್ಯಾಂಕ್: ಶೇ. 7.50ಯಿಂದ ಶೇ. 7.85ರವರೆಗೆ ಬಡ್ಡಿ
ಇದನ್ನೂ ಓದಿ: ಜಂಟಿಯಾಗಿ ಗೃಹಸಾಲ ಪಡೆಯಬಹುದಾ? ಅನುಕೂಲ, ಅನನುಕೂಲಗಳೇನು? ಇಲ್ಲಿದೆ ಡೀಟೇಲ್ಸ್
- ಐಡಿಎಫ್ಸಿ ಫಸ್ಟ್ ಬ್ಯಾಂಕ್: ಶೇ. 6.50ಯಿಂದ ಶೇ. 7.50ರವರೆಗೆ ಬಡ್ಡಿ
- ಆರ್ಬಿಎಲ್ ಬ್ಯಾಂಕ್: ಶೇ. 7ರಿಂದ ಶೇ. 7.80ರವರೆಗೆ ಬಡ್ಡಿ
- ಯೆಸ್ ಬ್ಯಾಂಕ್: ಶೇ. 7.25ರಿಂದ ಶೇ. 7.50ರವರೆಗೆ ಬಡ್ಡಿ
- ಐಸಿಐಸಿಐ ಬ್ಯಾಂಕ್: ಶೇ. 6.70ಯಿಂದ ಶೇ. 7.10ರವರೆಗೆ ಬಡ್ಡಿ
- ಕೆನರಾ ಬ್ಯಾಂಕ್: ಶೇ. 6.85ರಿಂದ ಶೇ. 7.25ರವರೆಗೆ ಬಡ್ಡಿ
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯ: ಶೇ. 6.30ಯಿಂದ ಶೇ. 7 ರವರೆಗೆ ಬಡ್ಡಿ
- ಧನಲಕ್ಷ್ಮಿ ಬ್ಯಾಂಕ್: ಶೇ. 6.75ರಿಂದ ಶೇ. 7.25 ರವರೆಗೆ ಬಡ್ಡಿ
- ಫೆಡರಲ್ ಬ್ಯಾಂಕ್: ಶೇ. 6.75ರಿಂದ ಶೇ. 7.30 ರವರೆಗೆ ಬಡ್ಡಿ
- ಬ್ಯಾಂಕ್ ಆಫ್ ಬರೋಡ: ಶೇ. 6.75ರಿಂದ ಶೇ. 7 ರವರೆಗೆ ಬಡ್ಡಿ
ಇದನ್ನೂ ಓದಿ: ಬ್ಯಾಂಕುಗಳಿಗಿಂತ ಎನ್ಬಿಎಫ್ಸಿಗಳಲ್ಲಿ ಠೇವಣಿ ದರ ಯಾಕೆ ಹೆಚ್ಚು? ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಎಸ್ಬಿ ಖಾತೆ ತೆರೆಯಲು ಯಾಕೆ ಸಾಧ್ಯವಿಲ್ಲ?
- ಇಂಡಿಯನ್ ಓವರ್ಸೀಸ್ ಬ್ಯಾಂಕ್: ಶೇ. 6.50ಯಿಂದ ಶೇ. 7.25 ರವರೆಗೆ ಬಡ್ಡಿ
- ಪಂಜಾಬ್ ನ್ಯಾಷನಲ್ ಬ್ಯಾಂಕ್: ಶೇ. 6.75ರಿಂದ ಶೇ. 7.25 ರವರೆಗೆ ಬಡ್ಡಿ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: ಶೇ. 6.80ಯಿಂದ ಶೇ. 7.10 ರವರೆಗೆ ಬಡ್ಡಿ
- ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್: ಶೇ. 6.50ರಿಂದ ಶೇ. 7.10 ರವರೆಗೆ ಬಡ್ಡಿ
ಮೇಲೆ ತಿಳಿಸಿದ ದರಗಳು 1ರಿಂದ 5 ವರ್ಷದ ವಿವಿಧ ಅವಧಿಗಳ ಠೇವಣಿಗಳದ್ದಾಗಿವೆ. 1 ಕೋಟಿ ರೂ ಒಳಗಿನ ಠೇವಣಿಗಳಿಗೆ ಈ ದರ ಅನ್ವಯ ಆಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ