ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಯಾವುದಕ್ಕೂ ಹೂಡಿಕೆ ಆಗದೇ ಹಾಗೇ ಇದ್ದರೆ, ಅಂದರೆ ನಿಮ್ಮ ಎಸ್ಬಿ ಖಾತೆಯಲ್ಲಿ (Savings Bank Account) ಇರುವ ಹಣಕ್ಕೆ ಶೇ. 4 ಆಸುಪಾಸಿನ ವಾರ್ಷಿಕ ಬಡ್ಡಿ ಸಿಗುತ್ತದೆ. ದೊಡ್ಡ ಕಮರ್ಷಿಯಲ್ ಬ್ಯಾಂಕುಗಳು ಇನ್ನೂ ಕಡಿಮೆ ಬಡ್ಡಿ ನೀಡುತ್ತವೆ. 5 ಲಕ್ಷಕ್ಕೂ ಮೇಲ್ಪಟ್ಟ ಹಣಕ್ಕೆ ಶೇ. 7ರವರೆಗೂ ಬಡ್ಡಿ ಕೊಡುವ ಹಲವು ಸಣ್ಣ ಹಣಕಾಸು ಸಂಸ್ಥೆಗಳು, ಕೋ ಆಪರೇಟಿವ್ ಬ್ಯಾಂಕುಗಳು ಇವೆ. ಎಸ್ಬಿ ಅಕೌಂಟ್ಗೆ ಹೆಚ್ಚಿನ ಬಡ್ಡಿ ಕೊಡುವ ಅಂಥ ಬ್ಯಾಂಕುಗಳಲ್ಲಿ ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Fincare Small Finance Bank) ಒಂದು. ಬ್ಯಾಂಕಿಂಗ್ ವಲಯದಲ್ಲಿ ಎಸ್ಬಿ ಅಕೌಂಟ್ಗೆ ಅತಿಹೆಚ್ಚು ಬಡ್ಡಿ ಕೊಡುವ ಸಂಸ್ಥೆ ಇದು. ಸೇವಿಂಗ್ಸ್ ಬ್ಯಾಂಕ್ ಅಕೌಂಟ್ನ ಕೆಲ ಮೊತ್ತಕ್ಕೆ ಇದು ಶೇ. 7.50ರಷ್ಟು ಬಡ್ಡಿ ಕೊಡುತ್ತದೆ. ಪ್ರಮುಖ ಬ್ಯಾಂಕುಗಳು ಫಿಕ್ಸೆಡ್ ಡೆಪಾಸಿಟ್ಗೆ ಕೊಡುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಫಿನ್ಕೇರ್ ಬ್ಯಾಂಕ್ ತನ್ನ ಎಸ್ಬಿ ಅಕೌಂಟ್ಗೆ ಕೊಡುತ್ತದೆ.
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಎಸ್ಬಿ ಖಾತೆಯ ಠೇವಣಿಗಳಿಗೆ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಆಗಸ್ಟ್ 1ರಿಂದು ಈ ದರಗಳು ಅನ್ವಯಕ್ಕೆ ಬಂದಿವೆ. 5 ಲಕ್ಷ ರೂ ಮೇಲ್ಪಟ್ಟ ಠೇವಣಿಗಳಿಗೆ ಶೇ. 7.25ರಷ್ಟು ಬಡ್ಡಿ ಕೊಡುತ್ತದೆ. 2 ರಿಂದ 5 ಲಕ್ಷ ರೂ ಮೊತ್ತದ ಬ್ಯಾಲನ್ಸ್ ಇದ್ದರೂ ಶೇ. 7.11ರಷ್ಟು ಬಡ್ಡಿ ಕೊಡಲಾಗುತ್ತದೆ. ಇದರಿಂದ ಗ್ರಾಹಕರು ಹೆಚ್ಚೆಚ್ಚು ಹಣ ಉಳಿಸಲು ಇದು ನೆರವಾಗುತ್ತದೆ ಎಂಬುದು ಬ್ಯಾಂಕ್ನ ಅನಿಸಿಕೆ.
ಇದನ್ನೂ ಓದಿ: Ancestral Property: ಪಿತ್ರಾರ್ಜಿತವಾಗಿ ಪಡೆಯುವ ಆಸ್ತಿಗೆ ತೆರಿಗೆ ಕಟ್ಟಬೇಕಾ? ಮಾರಿದಾಗ ಎಷ್ಟು ಟ್ಯಾಕ್ಸ್ ಪಾವತಿಸಬೇಕು?
ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಬರುವಂತಾಗಲು ಎಷ್ಟು ವರ್ಷ ಎಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ಐಡಿಯಾ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Thu, 3 August 23