Digital Personal Loan: ಸುಲಭವಾಗಿ ಸಾಲ ಪಡೆಯವುದು ಹೇಗೆ? ಇಲ್ಲಿದೆ ಮಾಹಿತಿ

ಅನೇಕ ಫಿನ್​ಟೆಕ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಸಾಲ ಮಂಜೂರು ಮಾಡುತ್ತಿವೆ. ಸ್ಮಾರ್ಟ್​ಫೋನ್​ಗಳಲ್ಲಿ ಆ್ಯಪ್ ಡೌನ್​ಲೋಡ್ ಮಾಡುವ ಮೂಲಕ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಅಲೆಯದೇ, ಬ್ಯಾಂಕ್ ಸಿಬ್ಬಂದಿಯನ್ನು ಭೇಟಿಯಾಗದೆ ಸುಲಭವಾಗಿ ಸಾಲ ಪಡೆಯಬಹುದಾಗಿದೆ.

Digital Personal Loan: ಸುಲಭವಾಗಿ ಸಾಲ ಪಡೆಯವುದು ಹೇಗೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Dec 22, 2022 | 4:35 PM

ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದಾಗಿ (Fintech) ಇಂದು ಹಣಕಾಸು ಕ್ಷೇತ್ರದ ಸೇವೆಗಳು (Financial Services) ಬಹಳ ಸರಳ, ಸುಲಭವಾಗಿಬಿಟ್ಟಿವೆ. ಬ್ಯಾಂಕಿಂಗ್ ಸೇರಿದಂತೆ ಬಹುತೇಕ ಎಲ್ಲ ಹಣಕಾಸು ಸೇವೆಗಳನ್ನು ಸ್ಮಾರ್ಟ್​​ಫೋನ್ ಮೂಲಕವೇ ಪಡೆಯಬಹುದಾಗಿದೆ. ಡಿಜಿಟಲ್ ವೈಯಕ್ತಿಕ ಸಾಲ (Digital Personal Loan) ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ದೇಶದಲ್ಲಿ ನೀಡಲಾಗುವ ಶೇಕಡಾ 70ರಷ್ಟು ಸಾಲದ ಪೈಕಿ ಹೆಚ್ಚಿನದ್ದರ ಪ್ರಯೋಜನ ಶ್ರೀಮಂತ ವರ್ಗಕ್ಕೆ ದೊರೆಯುತ್ತಿದ್ದರೆ, 5 ಲಕ್ಷ ರೂ.ಗಿಂತ ಕಡಿಮೆ ವಾರ್ಷಿಕ ವೇತನ ಹೊಂದಿರುವವರಿಗೆ, ಮಧ್ಯಮ ವರ್ಗದ ಜನರಿಗೆ ಸಾಲ ಪಡೆಯುವ ಪ್ರಕ್ರಿಯೆ ತುಸು ಕಷ್ಟಕರವಾಗಿದೆ. ಕಠಿಣ ನಿಯಮಗಳು, ಆದಾಯ, ಕ್ರೆಡಿಟ್ ಸ್ಕೋರ್, ಪೇಪರ್​ವರ್ಕ್​ ಇತ್ಯಾದಿಗಳು ಸಾಲ ಪಡೆಯುವ ಪ್ರಕ್ರಿಯೆಯನ್ನು ಕಷ್ಟಕರಗೊಳಿಸಿವೆ. ತುರ್ತು ಸಂದರ್ಭಗಳಲ್ಲಂತೂ ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಆದರೆ, ಇದೀಗ ಸುಲಭವಾಗಿ ಅನುಮೋದನೆ ಪಡೆಯಬಹುದಾಗಿದೆ. ಹೇಗೆಂಬ ಮಾಹಿತಿ ಇಲ್ಲಿದೆ.

ಅನೇಕ ಫಿನ್​ಟೆಕ್ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಸಾಲ ಮಂಜೂರು ಮಾಡುತ್ತಿವೆ. ಸ್ಮಾರ್ಟ್​ಫೋನ್​ಗಳಲ್ಲಿ ಆ್ಯಪ್ ಡೌನ್​ಲೋಡ್ ಮಾಡುವ ಮೂಲಕ ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ಅಲೆಯದೇ, ಬ್ಯಾಂಕ್ ಸಿಬ್ಬಂದಿಯನ್ನು ಭೇಟಿಯಾಗದೆ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ತಂತ್ರಜ್ಞಾನದ ಸಹಾಯದಿಂದ ಸಾಲದ ಮೌಲ್ಯಮಾಪನ, ದಾಖಲೆ ದೃಢೀಕರಣ, ಮರುಪಾವತಿ ವಿಧಾನ ಎಲ್ಲವನ್ನೂ ಆನ್​ಲೈನ್​ನಲ್ಲೇ ಸುಲಭವಾಗಿ, ತ್ವರಿತವಾಗಿ ಮಾಡಬಹುದಾಗಿದೆ. ಬ್ಯಾಂಕಿಂಗ್, ಹೂಡಿಕೆ, ವಿಮೆ ಸೇರಿದಂತೆ ಹಲವು ಸೇವೆಗಳನ್ನು ಫಿನ್​ಟೆಕ್​ಗಳು ನೀಡುತ್ತಿವೆ.

ಎಷ್ಟು ಮೊತ್ತದ ಸಾಲ ಸಿಗುತ್ತದೆ?

ಸಾಲದ ಅವಶ್ಯಕತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಡಿಜಿಟಲ್ ವೇದಿಕೆಗಳ ಮೂಲಕ 5,000 ರೂ.ನಿಂದ 5 ಲಕ್ಷ ರೂ. ವರೆಗೆ ಸಾಲ ದೊರೆಯಬಹುದು ಎಂದು ಮನಿವಿವ್ ಸಿಎಂಒ ಎಸ್​.ವಿ. ಪ್ರಶಾಂತ್ ನಾಯ್ಡು ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ತ್ವರಿತವಾಗಿ ಅರ್ಹತೆ ಪರಿಶೀಲನೆ, ಸಾಲ ಮಂಜೂರಾತಿ

ಸಾಲ ಪಡೆಯಲು ವ್ಯಕ್ತಿ ಅರ್ಹನೇ ಎಂಬುದನ್ನು ಪರಿಶೀಲಿಸುವ ಪ್ರಕ್ರಿಯೆ ಡಿಜಿಟಲ್​ ತಾಣಗಳಲ್ಲಿ ಬಹು ಬೇಗನೆ ಮುಗಿದುಬಿಡುತ್ತದೆ. ಅರ್ಜಿ ಸಲ್ಲಿಸಿದ ವ್ಯಕ್ತಿಯು ಸಾಲ ಪಡೆಯಲು ಅರ್ಹನೇ ಎಂಬುದನ್ನು ಮಷಿನ್ ಆಧಾರಿತ ರಿಸ್ಕ್ ಅಸೆಸ್​ಮೆಂಟ್ ಮಾದರಿಗಳ ಸಹಾಯದಿಂದ ಕೇವಲ 2 ನಿಮಿಷಗಳಲ್ಲಿ ಖಾತರಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಇಕೆವೈಸಿ, ಡಿಜಿಲಾಕರ್​ಗಳಂಥ ತಾಣಗಳ ಸಹಾಯದಿಂದ ದಾಖಲೆಗಳ ದೃಢೀಕರಣ ಸಹ ಕೆಲವೇ ಸೆಕೆಂಡುಗಳಲ್ಲಿ ಮುಗಿದುಹೋಗುತ್ತದೆ. ಎಪಿಐ ಆಧಾರಿತ ಸೊಲ್ಯೂಷನ್​ಗಳು ರಿಯಲ್ ಟೈಮ್ ಫೋಟೊ, ಆದಾಯದ ವಿವರಗಳನ್ನು ದೃಢೀಕರಿಸಲು ನೆರವಾಗುತ್ತವೆ. ದಾಖಲೆಗಳ ಪರಿಶೀಲನೆ, ದೃಢೀಕರಣ ಮುಗಿದ ಬೆನ್ನಲ್ಲೇ ತ್ವರಿತವಾಗಿ ಸಾಲ ಮಂಜೂರಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Thu, 22 December 22