- Kannada News Photo gallery Banks that offer the lowest interest rate on a Rupees 5 lakh Personal loan latest business news in Kannada
Personal loan: ಕಡಿಮೆ ಬಡ್ಡಿ ದರಕ್ಕೆ 5 ಲಕ್ಷ ರೂ. ವೈಯಕ್ತಿಕ ಸಾಲ ನೀಡುವ ಬ್ಯಾಂಕ್ಗಳಿವು
ತೀರಾ ಅನಿವಾರ್ಯವಲ್ಲದ ಹೊರತು ಕ್ರೆಡಿಟ್ ಕಾರ್ಡ್ ಸಾಲ ಪಡೆಯುವುದು ಉತ್ತಮ ಆಯ್ಕೆಯಲ್ಲ ಎಂಬುದು ಹಣಕಾಸು ತಜ್ಞರ ಅಭಿಪ್ರಾಯ. ಅತಿಯಾದ ಅನಿವಾರ್ಯತೆ ಸೃಷ್ಟಿಯಾದರೆ, ಬೇರೆ ಆಯ್ಕೆಗಳೇ ಇಲ್ಲವಾದರೆ ವೈಯಕ್ತಿಕ ಸಾಲದ ಮೊರೆ ಹೋಗಬಹುದು. ಬ್ಯಾಂಕ್ ಬಜಾರ್ ಡಾಟ್ ಕಾಂ ಪ್ರಕಾರ, ಶೇಕಡಾ 8.9ರಿಂದ ತೊಡಗಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕ್ಗಳ ಮಾಹಿತಿ ಇಲ್ಲಿದೆ.
Updated on: Nov 16, 2022 | 4:16 PM

Banks that offer the lowest interest rate on a Rupees 5 lakh Personal loan latest business news in Kannada

Banks that offer the lowest interest rate on a Rupees 5 lakh Personal loan latest business news in Kannada

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ಶೇಕಡಾ 9.75ರ ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ 5 ಲಕ್ಷ ರೂ. ವೈಯಕ್ತಿಕ ಸಾಲ ನೀಡುತ್ತದೆ.

ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶೇಕಡಾ 9.8ರ ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ 5 ಲಕ್ಷ ರೂ. ವೈಯಕ್ತಿಕ ಸಾಲ ನೀಡುತ್ತದೆ.

ಖಾಸಗಿ ಕ್ಷೇತ್ರದ ಯೆಸ್ ಬ್ಯಾಂಕ್ ಶೇಕಡಾ 10ರ ಬಡ್ಡಿ ದರದಲ್ಲಿ 5 ವರ್ಷಗಳ ಅವಧಿಗೆ 5 ಲಕ್ಷ ರೂ. ವೈಯಕ್ತಿಕ ಸಾಲ ನೀಡುತ್ತದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ ಶೇಕಡಾ 10.2ರ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುತ್ತಿದೆ.

ಶೇಕಡಾ 10.25ರ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುವ ಮೂಲಕ ಕೋಟಕ್ ಮಹೀಂದ್ರಾ ಬ್ಯಾಂಕ್, ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕ್ಗಳ ಪೈಕಿ ಆರನೇ ಸ್ಥಾನದಲ್ಲಿದೆ.
























