Updated on:Nov 16, 2022 | 5:50 PM
ಇಂದು ಉಗುರುಗಳನ್ನು ಕ್ರಿಯೇಟಿವ್ ಆಗಿ ವಿನ್ಯಾಸಗೊಳಿಸುವುದು ಉದ್ಯಮವಾಗಿ ಬೆಳೆದು ಬಿಟ್ಟಿದೆ. ಸ್ವಲ್ಪ ಹೊಳಪು ಮತ್ತು ಕ್ರಿಯೇಟಿವ್ ಆಲೋಚನೆಯೊಂದಿಗೆ, ನಿಮ್ಮ ಉಗುರುಗಳನ್ನು ಅತ್ಯಂತ ಅದ್ಭುತವಾಗಿ ಮತ್ತು ಗಮನ ಸೆಳೆಯುವಂತೆ ಮಾಡಬಹುದು.
ಬಣ್ಣದ ಚುಕ್ಕೆಗಳು:ಸಮಾನ್ಯವಾಗಿ ನಿಮ್ಮ ಉಗುರುಗಳಿಗೆ ಬಣ್ಣಗಳನ್ನು ಹಚ್ಚುವ ಬದಲಾಗಿ ಇದನೊಮ್ಮೆ ಪ್ರಯತ್ನಿಸಿ. ಇದು ನಿಮ್ಮ ಉಗುರುಗಳಿಗೆ, ನೀವು ಧರಿಸುವ ಬಟ್ಟೆ, ಶೂಗಳಿಗೆ ಕೂಡ ಗ್ರ್ಯಾಂಡ್ ಲುಕ್ ನೀಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದಾಗ , ಅದು ಒಣಗಿದ ಮೇಲೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚುಕ್ಕಿ ಬಿಡಿಸಿ.
ಚೆರಿ ನೈಲ್ಸ್: ಇದು ನಿಮ್ಮ ಉಗುರುಗಳಿಗೆ ಕ್ಯೂಟ್ ಲುಕ್ ನೀಡುತ್ತದೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ , ಅದು ಒಣಗಿದ ಮೇಲೆ ಕೆಂಪು ಮತ್ತು ಹಸಿರು ಬಣ್ಣದ ನೈಲ್ ಪಾಲಿಶ್ ಬಳಸಿ ಅದರ ಮೇಲೆ ಚೆರಿ ಹಣ್ಣಿನ ಚಿತ್ರವನ್ನು ಬಿಡಿಸಿ.
ಬುಡಕಟ್ಟುಗಳ ಸಂಸ್ಕ್ರತಿಯ ವಿನ್ಯಾಸ: ಇದು ವಿಭಿನ್ನವಾದ ವಿನ್ಯಾಸವಾಗಿದ್ದು, ಇದರಲ್ಲಿ ಬುಡಕಟ್ಟುಗಳ ಸಂಪ್ರಾದಾಯದಲ್ಲಿ ಬಿಡಿಸಲಾಗುತ್ತಿದ್ದ ಚಿತ್ರಗಳನ್ನು ಕಾಣಬಹುದು. ಇದು ನಿಮ್ಮ ಡೈಲಿವೇರ್ ಬಟ್ಟೆಗಳಿಗೆ ಉತ್ತಮವಾಗಿ ಹೋಲುತ್ತದೆ.
ಮಾರ್ಬಲ್ ಎಫೆಕ್ಟ್: ಇದು ಸಾಮಾನ್ಯವಾದ ಉಗುರುಗಳ ವಿನಾಸ್ಯಗಳಿಂದ ವಿಭಿನ್ನವಾಗಿದ್ದು, ನೀವು ಧರಿಸುವ ಯಾವುದೇ ಬಟ್ಟೆಗೂ ಕೂಡ ವಿಭಿನ್ನ ಲುಕ್ ನೀಡಲು ಸಹಾಯ ಮಾಡುತ್ತದೆ. ಪ್ರಾರಂಭದಲ್ಲಿ ಸ್ವಲ್ಪ ಟ್ರಿಕಿ ಆದರೂ ಸಹ ಅಭ್ಯಾಸದೊಂದಿಗೆ ಅದ್ಭುತವಾದ ಮಾರ್ಬಲ್ಡ್ ಉಗುರು ಪರಿಣಾಮವನ್ನು ಕರಗತ ಮಾಡಿಕೊಳ್ಳಬಹುದು.
ಕ್ಲಾಸಿಕ್ ಸ್ಟ್ರೀಪ್ಸ್: ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಮಾನ್ಯವಾಗಿ ಉಗುರುಗಳಿಗೆ ಬಣ್ಣ ಹಚ್ಚಿದ್ದ ಬಳಿಕ , ಅದು ಒಣಗಿದ ಮೇಲೆ ಬೇರೆ ಬೇರೆ ಬಣ್ಣಗಳ ನೈಲ್ ಪಾಲಿಶ್ ಉಪಯೋಗಿಸಿ ಕ್ರಿಯೇಟಿವ್ ಗೆರೆಗಳನ್ನು ಎಳೆಯಿರಿ.
ಟು ಟೋನ್ ನೈಲ್ ಆರ್ಟ್:ನಿಮ್ಮ ಒಂದು ಉಗುರಿನ ಮೇಲೆ ಎರಡು ವಿಭಿನ್ನ ರೀತಿಯ ಬಣ್ಣಗಳನ್ನು ಅಂದರೆ ನೈಲ್ ಪಾಲಿಶ್ ಅನ್ನು ಉಪಯೋಗಿಸಿ ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವುದಾಗಿದೆ. ವಿಶೇಷವಾಗಿ ಇದು ನೀವು ಹಾಕುವ ಬಟ್ಟೆಗಳಿಗೆ ಹೋಲುವಂತೆಯೂ ನೈಲ್ ಪಾಲಿಶ್ ಗಳನ್ನು ಬಳಸಿಕೊಂಡು ವಿನ್ಯಾಸಗೊಳಿಸಬಹುದಾಗಿದೆ. ಇದು ವಿಶೇಷವಾಗಿ ನಿಮ್ಮ ಉಗುರುಗಳಿಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.
Published On - 2:14 pm, Wed, 16 November 22