IPL 2025: ತವರಿನಲ್ಲಿ ಗೆದ್ದು 14 ವರ್ಷಗಳ ವನವಾಸ ಅಂತ್ಯಗೊಳಿಸಿದ ಆರ್‌ಸಿಬಿ
RCB Ends 14-Year Win Drought: ರ್‌ಸಿಬಿ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 11 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ 14 ವರ್ಷಗಳ ಬರವನ್ನು ಕೊನೆಗೊಳಿಸಿತು. ಈ ಪಂದ್ಯದಲ್ಲಿ 205 ರನ್‌ಗಳನ್ನು ಗಳಿಸಿದ ಆರ್‌ಸಿಬಿ ತನ್ನ ಇತಿಹಾಸದಲ್ಲಿ 205 ರನ್‌ಗಳನ್ನು ಗಳಿಸಿದ ಆರು ಪಂದ್ಯಗಳಲ್ಲಿ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ ಎಂಬುದು ಗಮನಾರ್ಹ.
ಆರ್‌ಸಿಬಿ ಇದುವರೆಗೆ ಐಪಿಎಲ್ ಚಾಂಪಿಯನ್ ಆಗಿಲ್ಲದಿರಬಹುದು. ಆದರೆ ಈ ಸೀಸನ್ನಲ್ಲಿ ತಂಡ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ಬಾರಿ ಟ್ರೋಫಿ ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಏಪ್ರಿಲ್ 24 ರಂದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿ ಆರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿತು.
1 / 6
ಆದರೆ, ರಾಜಸ್ಥಾನ ವಿರುದ್ಧ ಆರ್‌ಸಿಬಿ ಗೆಲುವು ಈ ಕಾರಣಕ್ಕಾಗಿ ಮಾತ್ರ ವಿಶೇಷವಾಗಿರಲಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ರಾಜಸ್ಥಾನವನ್ನು ಸೋಲಿಸುವ ಮೂಲಕ ಆರ್‌ಸಿಬಿ ತನ್ನ ವನವಾಸವನ್ನು ಕೊನೆಗೊಳಿಸಿತು. ಕಳೆದ 14 ವರ್ಷಗಳಿಂದ ಕಾಯುತ್ತಿದ್ದ ಆ ಸ್ಮರಣೀಯ ಗೆಲುವು ಕೊನೆಗೂ ಆರ್‌ಸಿಬಿ ಪಾಲಾಯಿತು.
2 / 6
ಐಪಿಎಲ್ 2025 ರಲ್ಲಿ ತಮ್ಮ ತವರಿನಲ್ಲಿ ಮೊದಲ ಗೆಲುವು ದಾಖಲಿಸಿದ ಆರ್‌ಸಿಬಿ, ಈ ಗೆಲುವಿನ ಮೂಲಕ ತನ್ನ ವನವಾಸವನ್ನು ಕೊನೆಗೊಳಿಸಿತು. ಬರೋಬ್ಬರಿ 14 ವರ್ಷಗಳ ಹಿಂದೆ ಅಂದರೆ 2011 ರಲ್ಲಿ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಅಂತಹದೊಂದು ಗೆಲುವು ದಾಖಲಿಸಿದ್ದ ಆರ್‌ಸಿಬಿ ಇದೀಗ ಮತ್ತೊಮ್ಮೆ ಅಂತಹದ್ದೇ ಗೆಲುವು ಸಂಪಾದಿಸಿದೆ.
3 / 6
ವಾಸ್ತವವಾಗಿ 14 ವರ್ಷಗಳ ಹಿಂದೆ ಅಂದರೆ 2011 ರ ಐಪಿಎಲ್‌ನಲ್ಲಿ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ, 205 ರನ್ ಕಲೆಹಾಕುವ ಮೂಲಕ ಆ ಪಂದ್ಯವನ್ನು ಗೆದ್ದುಕೊಂಡಿತ್ತು. ಐಪಿಎಲ್ ಇತಿಹಾಸದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೆ 6 ಬಾರಿ ಮೊದಲು ಬ್ಯಾಟಿಂಗ್ ಮಾಡಿ ಒಟ್ಟು 205 ರನ್ ಗಳಿಸಿದೆ. ಆದರೆ ಈ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಕೇವಲ ಎರಡು ಬಾರಿ ಮಾತ್ರ.
4 / 6
2011 ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 205 ರನ್ ಕಲೆಹಾಕಿದ್ದ ಆರ್‌ಸಿಬಿ, ಆ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಏಪ್ರಿಲ್ 24 ರಂದು ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 205 ರನ್ ಕಲೆಹಾಕಿದ್ದ ಆರ್‌ಸಿಬಿ ಅಂತಿಮವಾಗಿ ಈ ಪಂದ್ಯವನ್ನು 11 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
5 / 6
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 205 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 194 ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಈ ಆರನೇ ಜಯದೊಂದಿಗೆ ಆರ್‌ಸಿಬಿ 3ನೇ ಸ್ಥಾನಕ್ಕೇರಿದರೆ, ರಾಜಸ್ಥಾನಕ್ಕೆ ಪ್ಲೇಆಫ್‌ನ ಹಾದಿ ಈಗ ಬಹುತೇಕ ಮುಚ್ಚಿದಂತಿದೆ.