ಹಣ ಉಳಿತಾಯ ಮತ್ತು ಹೂಡಿಕೆಗೆ ಸಾಮಾನ್ಯವಾಗಿ ಬಳಕೆಯಾಗುವ ಹಣಕಾಸು ಸಾಧನವೆಂದರೆ ಅದು ಠೇವಣಿ. ಈ ಠೇವಣಿಯಲ್ಲಿ ಎರಡು ಪ್ರಮುಖ ವಿಧದ್ದಿವೆ. ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ ಮತ್ತು ಆವರ್ತಿತ ಠೇವಣಿ (RD- recurring deposit) ಅಥವಾ ರೆಕರಿಂಗ್ ಡೆಪಾಸಿಟ್. ಎರಡೂ ಕೂಡ ಬಹಳ ಸಾಮಾನ್ಯವಾಗಿ ಬಳಕೆಯಾಗುವ ಠೇವಣಿಗಳೇ. ಹಣ ಉಳಿಸಿ ಅದನ್ನು ಬೆಳೆಸಲು ಇವು ಸಹಕಾರಿ. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ಗಳಲ್ಲಿ ಇವೆರಡೂ ರೀತಿಯ ಠೇವಣಿಗಳನ್ನು ಪಡೆಯಬಹುದು. ಆನ್ಲೈನ್ನಲ್ಲಿ ಬ್ಯಾಂಕ್ ಆ್ಯಪ್ ಮೂಲಕ ಸುಲಭವಾಗಿ ಯಾವಾಗ ಬೇಕಾದರೂ ಠೇವಣಿ ಪ್ಲಾನ್ಗಳನ್ನು ತೆರೆಯಬಹುದು. ಅಷ್ಟಕ್ಕೂ ಎಫ್ಡಿ ಮತ್ತು ಆರ್ಡಿಯಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ಮೂಡಬಹುದು.
ನಿಶ್ಚಿತ ಠೇವಣಿ ಒಮ್ಮೆ ಕಟ್ಟುವ ಹಣವಾಗಿರುತ್ತದೆ. ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಎಫ್ಡಿ ತೆರೆಯಬಹುದು. ಎಷ್ಟು ಮೊತ್ತಕ್ಕಾದರೂ ಎಫ್ಡಿ ಹಾಕಬಹುದು. ಮೂರು ತಿಂಗಳಿಂದ ಹಿಡಿದು 10 ವರ್ಷದವರೆಗೆ ಠೇವಣಿ ಇರಿಸುವ ಅವಕಾಶ ಇರುತ್ತದೆ. ಬಡ್ಡಿದರ ಕೂಡ ನಿಶ್ಚಿತವಾಗಿರುತ್ತದೆ.
ಇದನ್ನೂ ಓದಿ: ಮಹಿಳಾ ಸಮ್ಮಾನ್ vs ಸುಕನ್ಯಾ ಸಮೃದ್ಧಿ: ಯಾವ ಯೋಜನೆ ನಿಮಗೆ ಸೂಕ್ತ? ಇಲ್ಲಿದೆ ಹೋಲಿಕೆ
ಎಫ್ಡಿ ತೆರೆಯುವಾಗಲೇ ಬಡ್ಡಿದರ ನಿರ್ಧರಿಸಲಾಗುತ್ತದೆ. ಕೊನೆಯವರೆಗೂ ಅದೇ ಬಡ್ಡಿ ಅನ್ವಯ ಆಗುತ್ತದೆ. ಕೆಲವೊಮ್ಮೆ ಫ್ಲೋಟಿಂಗ್ ರೇಟ್ ಮೇಲೆ ಎಫ್ಡಿ ಸ್ವೀಕರಿಸಲಾಗುತ್ತದೆ. ಅಂದರೆ ಬ್ಯಾಂಕ್ ತನ್ನ ಬಡ್ಡಿದರವನ್ನು ಬದಲಿಸಿದಾಗ ಅದಕ್ಕೆ ಅನುಗುಣವಾಗಿ ಎಫ್ಡಿ ದರವೂ ಬದಲಾಗುತ್ತದೆ. ಮೆಚ್ಯೂರಿಟಿಗಿಂತ ಮುಂಚೆ ನೀವು ಹಣ ಹಿಂಪಡೆಯಬೇಕೆಂದರೆ ಅದಕ್ಕೆ ನಿರ್ದಿಷ್ಟ ದಂಡ ಪಾವತಿಸಬೇಕಾಗುತ್ತದೆ.
ಇದು ಆವರ್ತಿತ ನಿಧಿ. ಅಂದರೆ, ನಿಯಮಿತವಾಗಿ ನೀವು ನಿಗದಿತ ಹಣವನ್ನು ಜಮೆ ಮಾಡುತ್ತಿರಬೇಕು. ಸಾಮಾನ್ಯವಾಗಿ ಪ್ರತೀ ತಿಂಗಳು ಪೂರ್ವನಿಗದಿತವಾದ ಹಣವನ್ನು ಆವರ್ತಿತ ನಿಧಿಗೆ ಡೆಪಾಸಿಟ್ ಇಡಬೇಕು. ಇಲ್ಲಿ ಬಡ್ಡಿದರ ಹೆಚ್ಚೂ ಕಡಿಮೆ ಎಫ್ಡಿ ದರದಷ್ಟೇ ಇರುತ್ತದೆ. ಆರ್ಡಿ ಅನ್ನು ಮಧ್ಯದಲ್ಲಿ ನಿಲ್ಲಿಸಿದರೆ ಒಂದಷ್ಟು ದಂಡ ತೆರಬೇಕಾಗುತ್ತದೆ.
ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ
ನಿಮ್ಮಲ್ಲಿ ಲಂಪ್ಸಮ್ ಹಣ ಇದ್ದರೆ ಫಿಕ್ಸೆಡ್ ಡೆಪಾಸಿಟ್ ಇಡುವುದು ಸೂಕ್ತ. ನೀವು ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಉಳಿಸುತ್ತಿದ್ದರೆ ಆ ಮೊತ್ತಕ್ಕೆ ಆರ್ಡಿ ತೆರೆಯಬಹುದು. ಹಣ ಉಳಿತಾಯಕ್ಕೆ ಆರ್ಡಿ ಬೆಸ್ಟ್.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ