ನೀವು ದೈಹಿಕ ಶಕ್ತಿ ಇದ್ದಷ್ಟು ದಿನ ದುಡಿಯಬಹುದು. ನಿರ್ದಿಷ್ಟ ವಯಸ್ಸು ದಾಟಿದ ಬಳಿಕ ದುಡಿಯಲು ಆಗುವುದಿಲ್ಲ. ಅಥವಾ ನಿರ್ದಿಷ್ಟ ವಯಸ್ಸಿಗೆ ನೀವು ನಿವೃತ್ತರಾಗಬಹುದು. ದುಡಿಮೆಯಿಂದ ಬರುತ್ತಿದ್ದ ಆದಾಯ ನಿಲ್ಲಬಹುದು. ಅಲ್ಲಿಯವರೆಗೆ ನೀವು ಸಂಪಾದಿಸಿದ ಆಸ್ತಿಯೇ ನಿಮಗೆ ಕೊನೆಯವರೆಗೂ ಆಸರೆ ಆಗಬೇಕು. ಹೀಗಾಗಿ, ನೀವು ದುಡಿಯುವಾಗಲೇ ನಿವೃತ್ತಿಗೆ ಹಣ ಎತ್ತಿ ಇಡುವುದು ಬಹಳ ಅಗತ್ಯ. ರಿಟೈರ್ಮೆಂಟ್ ಬಳಿಕ ನಿಮ್ಮಲ್ಲಿ ಹೆಚ್ಚು ಹಣ ಇಲ್ಲದಿದ್ದರೆ ಕಷ್ಟವಾದೀತು. ಹಣ ಇದ್ದರೂ ಸರಿಯಾದ ಪ್ಲಾನಿಂಗ್ (retirement planning) ಇಲ್ಲದಿದ್ದರೆ ಅವೆಲ್ಲವೂ ನೀರಿನಂತೆ ಕರಗಿಹೋದೀತು. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಹಣಕಾಸು ತಜ್ಞರು ರಿಟೈರ್ಮೆಂಟ್ ಹೇಗಿರಬೇಕು ಎಂಬುದಕ್ಕೆ ತ್ರಿವಳಿ ಸೂತ್ರ (3 buckets strategy) ಮುಂದಿಡುತ್ತಾರೆ.
ಈ ಮೂರರ ಜೊತೆಗೆ ಆರೋಗ್ಯ ವಿಮೆ ಕೂಡ ಇರಬೇಕು. ಈ ಮೂರು ರೀತಿಯ ಹೂಡಿಕೆಗಳಲ್ಲಿ ನಿಮ್ಮ ಹಣದ ಹಂಚಿಕೆ ಇರಲಿ.
ಇದನ್ನೂ ಓದಿ: ಮಹಿಳಾ ಸಮ್ಮಾನ್ vs ಸುಕನ್ಯಾ ಸಮೃದ್ಧಿ: ಯಾವ ಯೋಜನೆ ನಿಮಗೆ ಸೂಕ್ತ? ಇಲ್ಲಿದೆ ಹೋಲಿಕೆ
ಆರೋಗ್ಯ ವೆಚ್ಚ ಸೇರಿದಂತೆ ತಿಂಗಳ ವೆಚ್ಚಕ್ಕೆ ಅಗತ್ಯ ಬೀಳಬಹುದಾದ ಹಣ ಈ ವಿಭಾಗದಲ್ಲಿರಲಿ. ಬ್ಯಾಂಕ್ ಅಕೌಂಟ್ನಲ್ಲಿ ಹಣವನ್ನು ಮೈಂಟೇನ್ ಮಾಡಬಹುದು. ತುರ್ತು ವೆಚ್ಚಕ್ಕೆಂದು ನಿರ್ದಿಷ್ಟ ಮೊತ್ತವನ್ನು ಅಲ್ಪಾವಧಿ ಎಫ್ಡಿಗಳಲ್ಲಿ ಇರಿಸಬಹುದು. ಬಾಡಿಗೆ ಇತ್ಯಾದಿ ಯಾವುದಾದರೂ ಆದಾಯ ಬರುತ್ತಿದ್ದರೆ ಆ ಹಣವನ್ನು ಇಲ್ಲಿ ಇರಿಸಬಹುದು. ಸರ್ಕಾರದಿಂದ ಸಿಗುವ ವೃದ್ಧಾಪ್ಯ ಪಿಂಚಣಿ ಅಥವಾ ನಿಮ್ಮ ಕೆಲಸದಿಂದ ಸಿಗುವ ಪಿಂಚಣಿಯ ಆದಾಯ ಕೂಡ ಇರಬುದು. ಮೂರು ವರ್ಷಗಳವರೆಗೆ ಯಾವ ಸಮಸ್ಯೆ ಆಗದ ರೀತಿಯಲ್ಲಿ ನಿಯಮಿತ ವೆಚ್ಚಕ್ಕೆ ಹಣದ ಪ್ಲಾನಿಂಗ್ ಮಾಡಿರಿ.
ಐದಾರು ವರ್ಷಗಳವರೆಗೆ ನಿಮ್ಮ ಹೂಡಿಕೆಯನ್ನು ಯೋಜಿಸಬೇಕು. ಫಿಕ್ಸೆಡ್ ಡೆಪಾಸಿಟ್, ಬಾಂಡ್, ಸಣ್ಣ ಉಳಿತಾಯ ಯೋಜನೆ ಇತ್ಯಾದಿ ಸ್ಕೀಮ್ಗಳಲ್ಲಿ ನಿಮ್ಮ ಹಣವನ್ನು ತೊಡಗಿಸಿಕೊಳ್ಳಬಹುದು. ಡೆಟ್ ಯಂತ್ರಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ನಲ್ಲೂ ನೀವು ಹೂಡಿಕೆ ಮಾಡಬಹುದು. ಇಂಥ ಹೂಡಿಕೆಗಳಿಂದ ಶೇ. 7ರಿಂದ 9ರಷ್ಟು ವಾರ್ಷಿಕ ಲಾಭ ಪಡೆಯಬಹುದು.
ನಿಮ್ಮ ಹಣವನ್ನು ವೇಗವಾಗಿ ಬೆಳೆಸುವ ಯಂತ್ರಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ ಇದಕ್ಕೆ ಉದಾಹರಣೆ. ರಿಯಲ್ ಎಸ್ಟೇಟ್, ಚಿನ್ನ ಇತ್ಯಾದಿಯಲ್ಲೂ ಹೂಡಿಕೆ ಮಾಡಬಹುದು. ವಾರ್ಷಿಕವಾಗಿ ಶೇ. 10ಕ್ಕಿಂತಲೂ ಹೆಚ್ಚು ಲಾಭವನ್ನು ನಿರೀಕ್ಷಿಸಬಹುದು. ಇಂಥ ಹೂಡಿಕೆಗಳು ದೀರ್ಘಾವಧಿ ಇರಲಿ.
ಇದನ್ನೂ ಓದಿ: ಎಸ್ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನಿಮ್ಮ ನಿಯಮಿತ ಖರ್ಚಿಗೆ ಹಣ ಸಾಕಾಗದಾಗ ಎರಡನೇ ವಿಭಾಗದಿಂದ ಹಣ ಭರಿಸಬೇಕಾಗುತ್ತದೆ. ಎರಡನೇ ವಿಭಾಗದಲ್ಲಿ ಹಣದ ಕೊರತೆ ಎದುರಾದರೆ ಮೂರನೇ ವಿಭಾಗದಿಂದ ಬರುವ ಒಂದಷ್ಟು ಆದಾಯವನ್ನು ಎರಡನೆಯದ್ದಕ್ಕೆ ವರ್ಗಾಯಿಸಬೇಕಾಗುತ್ತದೆ.
ಈ ರೀತಿಯಾಗಿ ನಿಮ್ಮ ನಿವೃತ್ತಿ ಜೀವನವನ್ನು ಪ್ಲಾನ್ ಮಾಡಬೇಕಾಗುತ್ತದೆ. ಇಲ್ಲಿ ಆರೋಗ್ಯ ವಿಮೆ ಪಾಲಿಸಿ ಹೊಂದಿರುವುದು ಬಹಳ ಮುಖ್ಯ. ಸರ್ಕಾರದ ಆರೋಗ್ಯ ಯೋಜನೆಗಳನ್ನೂ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ