
Gratuity Calculator: ನೀವು ಉದ್ಯೋಗಿಯೇ? ನಿಮಗೆ ಪಿಎಫ್ ಖಾತೆ ಇದೆಯೇ? ನೀವು ಇಪಿಎಫ್‌ನಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಉದ್ಯೋಗ ಸೇವೆಯ ಸಮಯದಲ್ಲಿ, ನಿಮ್ಮ ಸಂಬಳವನ್ನು ಪ್ರತಿ ತಿಂಗಳು ಕಡಿತಗೊಳಿಸಿ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಇದರಿಂದ ಹಣವನ್ನು ಭಾಗಶಃ ಹಿಂಪಡೆಯಬಹುದು. ನಿವೃತ್ತಿಯ ನಂತರ ನೀವು ಅದನ್ನು ಸಂಪೂರ್ಣವಾಗಿ ತೆಗೆದುಕೊಳ್ಳಬಹುದು. ಪಿಎಫ್ ಖಾತೆಯನ್ನು ಹೊಂದಿರುವವರು ತಮ್ಮ ಸೇವೆಯನ್ನು ಅವಲಂಬಿಸಿ ನಿವೃತ್ತಿಯ ನಂತರ ಇಪಿಎಸ್ ಪಿಂಚಣಿಯನ್ನು ಸಹ ಪಡೆಯುತ್ತಾರೆ. ಉದ್ಯೋಗಿಗಳಿಗೆ ಇಪಿಎಫ್, ಇಪಿಎಸ್ ಅಲ್ಲದೆ ಇನ್ನೂ ಒಂದು ಸ್ಕೀಮ್ನ ಲಾಭ ಇದೆ. ಇದು ಸ್ಯಾಲರಿ ಸ್ಲಿಪ್ನಲ್ಲಿ ಕಾಣುವುದಿಲ್ಲ. ಹೀಗಾಗಿ, ಬಹಳ ಮಂದಿಗೆ ಇದು ನೆನಪೇ ಇರೋದಿಲ್ಲ. ಇದು ಗ್ರಾಚ್ಯುಟಿ ಸ್ಕೀಮ್ (Gratuity). ಒಂದು ಕಂಪನಿಯಲ್ಲಿ ನೀವು ಕನಿಷ್ಠ 5 ವರ್ಷ ಕೆಲಸ ಮಾಡಿದ್ದರೆ ಗ್ರಾಚ್ಯುಟಿಗೆ ಅರ್ಹರಾಗಿರುತ್ತೀರಿ. ನೀವು ಐದು ಅಥವಾ ಇನ್ನೂ ಹೆಚ್ಚಿನ ವರ್ಷ ಕೆಲಸ ಮಾಡಿ ಕಂಪನಿ ತೊರೆದಾಗ ಅಥವಾ ನಿವೃತ್ತರಾದಾಗ ಗ್ರಾಚುಟಿ ಕೊಡಲಾಗುತ್ತದೆ.
ಗ್ರಾಚ್ಯುಟಿ ಎಂದರೆ ಒಂದು ಕಂಪನಿಯು ತನ್ನ ಉದ್ಯೋಗಿಯ ಸೇವೆಗೆ ಪ್ರತಿಯಾಗಿ ನೀಡುವ ಗೌರವಧನವಾಗಿದೆ. ಇದು ಸಂಬಳ ಅಲ್ಲದೆ ನೀಡುವ ಹಣ. ಉದ್ಯೋಗಿಯ ಸೇವೆಗೆ ಕೃತಜ್ಞತೆಯಾಗಿ ಗ್ರಾಚುಟಿ ಕೊಡಲಾಗುತ್ತದೆ. ಈಗಿರುವ 1972ರ ಗ್ರಾಚ್ಯುಟಿ ಕಾಯ್ದೆ ಪ್ರಕಾರ ಉದ್ಯೋಗಿಯು ಒಂದು ಕಂಪನಿಯಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿದ್ದರೆ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಉದ್ಯೋಗಿಯು ನಿವೃತ್ತಿಯಾದಾಗ ಇದನ್ನು ಕೊಡಲಾಗುತ್ತದೆ. ಅಕಸ್ಮಾತ್ 5 ಅಥವಾ ಇನ್ನೂ ಹೆಚ್ಚು ವರ್ಷ ಕೆಲಸ ಮಾಡಿ ಉದ್ಯೋಗ ತೊರೆದಾಗಲೂ ಗ್ರಾಚ್ಯುಟಿ ಕೊಡಲಾಗುತ್ತದೆ. ಅಪಘಾತ ಅಥವಾ ಅನಾರೋಗ್ಯದಿಂದ ಉದ್ಯೋಗಿಗೆ ದೈಹಿಕ ಊನವಾದಾಗಲೂ ಗ್ರಾಚುಟಿಯನ್ನು ಪಡೆಯಲು ಅವಕಾಶ ಇರುತ್ತದೆ.
ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್ಗಳ ನಡುವೆ ಏನು ವ್ಯತ್ಯಾಸ?
ನಿಮಗೆ ಎಷ್ಟು ಗ್ರಾಚ್ಯುಟಿ ಸಿಗುತ್ತೆ? ಇಲ್ಲಿದೆ ಕ್ಯಾಲ್ಕುಲೇಟರ್
ನಿಮ್ಮ ಸೇವಾವಧಿಯ ವರ್ಷಗಳು ಹಾಗೂ ನಿಮ್ಮ ಕೊನೆಯ ವೇತನದ ಬೇಸಿಕ್ ಸ್ಯಾಲರಿ ಎಷ್ಟಿದೆ ಎನ್ನುವುದರ ಮೇಲೆ ಗ್ರಾಚ್ಯುಟಿಯನ್ನು ಎಣಿಸಲಾಗುತ್ತದೆ. ಅದಕ್ಕೆಂದೇ ಒಂದು ಸೂತ್ರ ಇದೆ.
ಗ್ರಾಚುಟಿ = ಮೂಲವೇತನ x 15/26 x ಸೇವೆ ವರ್ಷಗಳು
ಇಲ್ಲಿ ಮೂಲವೇತನ ಎಂದರೆ ಬೇಸಿಕ್ ಸ್ಯಾಲರಿ ಹಾಗೂ ಡಿಎ ಇತ್ಯಾದಿ ಸೇರಿದ್ದಾಗಿದೆ. 15/26 ಎಂದರೆ ಒಂದು ತಿಂಗಳ 26 ಕೆಲಸದ ದಿನಗಳಲ್ಲಿ 15 ದಿನಗಳ ವೇತನ ಪರಿಗಣಿಸಲಾಗುತ್ತದೆ. ಸೇವೆ ವರ್ಷಗಳ ವಿಚಾರಕ್ಕೆ ಬಂದರೆ ನೀವು 5 ವರ್ಷ 6 ತಿಂಗಳು ಕೆಲಸ ಮಾಡಿದರೆ ಅದನ್ನು 6 ವರ್ಷಕ್ಕೆ ರೌಂಡಾಫ್ ಮಾಡಲಾಗುತ್ತದೆ.
ಈಗ 30,000 ರೂ. ಮೂಲ ವೇತನದಲ್ಲಿ 5 ವರ್ಷಗಳು, 10 ವರ್ಷಗಳು ಮತ್ತು 7 ವರ್ಷಗಳವರೆಗೆ ಎಷ್ಟು ಗ್ರಾಚ್ಯುಟಿ ಸಿಗುತ್ತದೆ ಎಂಬುದನ್ನು ಹೀಗೆ ಗಣಿಸಬಹುದು.
ಇದನ್ನೂ ಓದಿ: 1 ಲಕ್ಷ ರೂನಿಂದ 2.71 ಕೋಟಿ ರೂ; ಭಾರತದ ಅತ್ಯಂತ ಹಳೆಯ ಫಂಡ್ನಿಂದ ಭರ್ಜರಿ ಆದಾಯ
ಮೊದಲನೆಯದಾಗಿ, 5 ವರ್ಷಗಳ ಗ್ರಾಚ್ಯುಟಿ ಲೆಕ್ಕ ಹಾಕೋಣ. ಮೂಲ ವೇತನ ರೂ. 30 ಸಾವಿರ ರೂ. 30000x(15/26)x5) = 86,538.46 ರೂ ಆಗುತ್ತದೆ.
7 ವರ್ಷಗಳ ಸೇವೆಗೆ, ಗ್ರಾಚ್ಯುಟಿ ರೂ. 1,21,153.84 ಆಗುತ್ತದೆ. ನೀವು 15 ವರ್ಷಗಳ ಕಾಲ ಕೆಲಸ ಮಾಡಿ ಕೊನೆಯ ಸಂಬಳ ರೂ. 30,000 ಆಗಿದ್ದರೆ, ಗ್ರಾಚ್ಯುಟಿ ಈ ಕೆಳಗಿನಂತಿರುತ್ತದೆ: ಗ್ರಾಚ್ಯುಟಿ = (15 x 30,000 x 15) / 26 = ರೂ. 2,59,615
ಗರಿಷ್ಠ ಗ್ರಾಚ್ಯುಟಿ ಮೊತ್ತ 20 ಲಕ್ಷ ರೂಗಿಂತ ಹೆಚ್ಚು ಇದ್ದರೆ ಅದನ್ನು ಎಕ್ಸ್-ಗ್ರೇಷಿಯಾ ಎಂದು ಪರಿಗಣಿಸಲಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ