15 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು 9,250 ರೂ. ಗಳಿಸಿ; ಹಿರಿಯ ನಾಗರಿಕರಿಗೆ ಆಫರ್

| Updated By: Ganapathi Sharma

Updated on: Nov 25, 2022 | 2:01 PM

‘ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ಯನ್ನು ಎಲ್​ಐಸಿ ಮೂಲಕ ಸರ್ಕಾರ ಒದಗಿಸಿಕೊಡುತ್ತಿದೆ. ಇದು 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ ಸಂಬಂಧಪಟ್ಟ ಯೋಜನೆ.

15 ಲಕ್ಷ ಹೂಡಿಕೆ ಮಾಡಿ ಪ್ರತಿ ತಿಂಗಳು 9,250 ರೂ. ಗಳಿಸಿ; ಹಿರಿಯ ನಾಗರಿಕರಿಗೆ ಆಫರ್
ಸಾಂದರ್ಭಿಕ ಚಿತ್ರ
Follow us on

ಹಿರಿಯ ನಾಗರಿಕರಿಗೆ (Senior Citizens) ಖಾತರಿಪಡಿಸಿದ ಆದಾಯ ಅಥವಾ ಗ್ಯಾರಂಟೀಡ್ ರಿಟರ್ನ್ಸ್ (Guaranteed Returns) ನೀಡುವ ಹೂಡಿಕೆ ಯೋಜನೆಗಳೆರಡನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪರಿಚಯಿಸಿದೆ. ಇವುಗಳಲ್ಲಿ ಪ್ರಮುಖವಾದದ್ದು ‘ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ ಅಥವಾ ಪಿಎಂವಿವಿವೈ (PMVVY). ಇನ್ನೊಂದು ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ ಅಥವಾ ಎಸ್​ಸಿಎಸ್​ಎಸ್ (SCSS). ಎರಡೂ ಯೋಜನೆಗಳ ವಿವರ ಇಲ್ಲಿದೆ.

ಪಿಎಂವಿವಿವೈಗೆ ಅರ್ಹತೆ, ಹೂಡಿಕೆ, ರಿಟರ್ನ್ಸ್ ವಿವರ ಇಲ್ಲಿದೆ

‘ಪ್ರಧಾನ ಮಂತ್ರಿ ವಯ ವಂದನಾ ಯೋಜನೆ’ಯನ್ನು ಎಲ್​ಐಸಿ ಮೂಲಕ ಸರ್ಕಾರ ಒದಗಿಸಿಕೊಡುತ್ತಿದೆ. ಇದು 60 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ ಸಂಬಂಧಪಟ್ಟ ಯೋಜನೆ.

ಈ ಯೋಜನೆಯಡಿ ಹಿರಿಯ ನಾಗರಿಕರು ಒಂದು ಬಾರಿಗೆ 15 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ತಿಂಗಳ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ (ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು) ಪಡೆಯಲು ಹೂಡಿಕೆದಾರರು ಅರ್ಹರಾಗಿರುತ್ತಾರೆ. ಪಿಎಂವಿವಿವೈ ಖಾತೆದಾರರಿಗೆ 10 ವರ್ಷಗಳ ವರೆಗೆ ಪಿಂಚಣಿ ದೊರೆಯಲಿದೆ. ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿಯನ್ನು ಪಿಂಚಣಿಯಾಗಿ ನೀಡಲಾಗುತ್ತದೆ. 10 ವರ್ಷ ಕಳೆದ ಬಳಿಕ ಹೂಡಿಕೆಯ ಮೊತ್ತ ವಾಪಸ್ ನೀಡಲಾಗುತ್ತದೆ.

ಪಿಎಂವಿವಿವೈ ಯೋಜನೆಯಡಿ ಶೇಕಡಾ 7.4ರ ವಾರ್ಷಿಕ ಬಡ್ಡಿ ದರ ನಿಗದಿಪಡಿಸಲಾಗಿದೆ. ಹೂಡಿಕೆದಾರರು ಆಯ್ಕೆಗೆ (ತಿಂಗಳ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ) ಅನುಗುಣವಾಗಿ ಪಿಂಚಣಿ ನೀಡಲಾಗುತ್ತದೆ. 15 ಲಕ್ಷ ರೂ.ಗಳ ಪಿಎಂವಿವಿವೈ ಹೂಡಿಕೆಗೆ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 9,250 ರೂ. ಪಿಂಚಣಿ ದೊರೆಯಲಿದೆ.

ಗಮನಿಸಿ…

ಪಿಎಂವಿವಿವೈ ಯೋಜನೆಯಡಿ ಹೂಡಿಕೆಗೆ 2023ರ ಮಾರ್ಚ್ 31ರ ವರೆಗೆ ಅವಕಾಶ ನೀಡಲಾಗಿದೆ. ನಂತರ ಈ ಯೋಜನೆ ಲಭ್ಯವಿರುವುದಿಲ್ಲ.

ಎಸ್​ಸಿಎಸ್​ಎಸ್ ಯೋಜನೆ ವಿವರ

ಇದು ಕೂಡ ಹಿರಿಯ ನಾಗರಿಕರಿಗಾಗಿ ಸರ್ಕಾರ ಖಾತರಿಪಡಿಸಿರುವ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಡಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ. ಎಸ್​ಬಿಐ, ಅಂಚೆ ಕಚೇರಿಗಳ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯಡಿ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಿ 5 ವರ್ಷಗಳ ವರೆಗೆ ಪಿಂಚಣಿ ಪಡೆಯಲು ಅವಕಾಶವಿದೆ. ಬಡ್ಡಿಯ ಮೊತ್ತ ಪಿಂಚಣಿಯಾಗಿ ಸಿಗಲಿದ್ದು, ಅವಧಿ ಮುಗಿದ ಬಳಿಕ ಹೂಡಿಕೆ ಮಾಡಿದ ಮೊತ್ತ ವಾಪಸ್ ಸಿಗಲಿದೆ. ಈ ಯೋಜನೆಯಡಿ ಮಾಡುವ ಹೂಡಿಕೆಗೆ ಶೇಕಡಾ 7.6ರ ಬಡ್ಡಿ ದರ ನಿಗದಿಪಡಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ