Insurance Bonus: ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್​ನಿಂದ ದಾಖಲೆ ಬೋನಸ್: 3,660 ಕೋಟಿ ರೂ ಘೋಷಣೆ; ಯಾರಿಗೆಲ್ಲಾ ಸಿಗುತ್ತೆ ಈ ಬೋನಸ್?

|

Updated on: May 18, 2023 | 3:43 PM

HDFC Life Insurance Releases Bonus: ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ ತನ್ನ ಪಾರ್ಟಿಸಿಪೇಟಿಂಗ್ ಪ್ಲಾನ್​ಗಳಿಗೆ 3,660 ಕೋಟಿ ರೂ ಮೊತ್ತದಷ್ಟು ಬೋನಸ್ ಅನ್ನು ಬಿಡುಗಡೆ ಮಾಡಿದೆ. 23 ಲಕ್ಷಕ್ಕೂ ಹೆಚ್ಚು ಪಾಲಿಸಿದಾರರಿಗೆ ಬೋನಸ್ ಸಿಗಲಿದೆ.

Insurance Bonus: ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್​ನಿಂದ ದಾಖಲೆ ಬೋನಸ್: 3,660 ಕೋಟಿ ರೂ ಘೋಷಣೆ; ಯಾರಿಗೆಲ್ಲಾ ಸಿಗುತ್ತೆ ಈ ಬೋನಸ್?
ಲೈಫ್ ಇನ್ಷೂರೆನ್ಸ್
Follow us on

ಬೆಂಗಳೂರು: ಖಾಸಗಿ ವಿಮಾ ಸಂಸ್ಥೆ ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ (HDFC Life Insurance Company) ತನ್ನ ಪಾರ್ಟಿಸಿಪೇಟಿಂಗ್ ಪ್ಲಾನ್​ಗಳಿಗೆ 3,660 ಕೋಟಿ ರೂ ಮೊತ್ತದಷ್ಟು ಬೋನಸ್ ಅನ್ನು ಬಿಡುಗಡೆ ಮಾಡಿದೆ. 2023 ಏಪ್ರಿಲ್ ತಿಂಗಳಲ್ಲಿ ನಡೆದ ಎಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ ಸಂಸ್ಥೆಯ ಬೋರ್ಡ್ ಮೀಟಿಂಗ್​ನಲ್ಲಿ ಈ ನಿರ್ಧಾರ ಕೈಗೊಂಡಿದ್ದು ತಿಳಿದುಬಂದಿದೆ. ಈ ಖಾಸಗಿ ಇನ್ಷೂರೆನ್ಸ್ ಕಂಪನಿ ಇದೂವರೆಗೆ ಬಿಡುಗಡೆ ಮಾಡಿದ ಅತಿ ಹೆಚ್ಚು ಬೋನಸ್ ಮೊತ್ತ ಇದಾಗಿದೆ. ಇದರೊಂದಿಗೆ 23 ಲಕ್ಷಕ್ಕೂ ಹೆಚ್ಚು ಪಾಲಿಸಿದಾರರಿಗೆ ಬೋನಸ್ ಸಿಗಲಿದೆ.

ಹೆಚ್​ಡಿಎಫ್​ಸಿ ಲೈಫ್ ಇನ್ಷೂರೆನ್ಸ್ ಕಂಪನಿ ಹೊರಡಿಸಿರುವ ಪ್ರಕಟಣೆ ಪ್ರಕಾರ, ಬಿಡುಗಡೆಯಾಗಿರುವ 3,660 ಕೋಟಿ ರೂ ಪೈಕಿ ಈ ಹಣಕಾಸು ವರ್ಷದಲ್ಲಿ 2,696 ಕೋಟಿ ರೂ ನೀಡಲಾಗುತ್ತದೆ. ಈ ವರ್ಷ ಮೆಚ್ಯೂರ್ ಆಗುವ ಅದರ ಪಾಲಿಸಿಗಳಿಗೆ ಬೋನಸ್ ಸೇರಿಸಲಾಗುತ್ತದೆ. ಜೊತೆಗೆ, ಇತರ ಪಾರ್ಟಿಸಿಪೇಟಿಂಗ್ ಪ್ಲಾನ್​ಗಳಿಗೆ ವರ್ಷದ ಕ್ಯಾಷ್ ಬೋನಸ್​ಗಳೂ ಇದರಲ್ಲಿ ಒಳಗೊಂಡಿರುತ್ತವೆ. ಉಳಿದ ಬೋನಸ್ ಮೊತ್ತವನ್ನು ಆಕಸ್ಮಿಕ ಡೆತ್ ಕ್ಲೈಮ್, ಸರೆಂಡರ್ ಪೇ ಔಟ್ ಇತ್ಯಾದಿಗೆ ಕೊಡಲಾಗುತ್ತದೆ.

ಇದನ್ನೂ ಓದಿSuper Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್

ಪಾರ್ಟಿಸಿಪೇಟಿಂಗ್ ಪ್ಲಾನ್​ಗಳಿಗೆ ಮಾತ್ರವಾ ಬೋನಸ್? ಏನಿವು ಪ್ಲಾನ್​ಗಳು?

ಲೈಫ್ ಇನ್ಷೂರೆನ್ಸ್ ಪಾಲಿಸಿಗಳಲ್ಲಿ ಎರಡು ಪ್ರಮುಖ ವಿಧಗಳಿವೆ. ಒಂದು, ನಿರ್ದಿಷ್ಟ ಪೂರ್ವನಿಗದಿತ ಬಡ್ಡಿ ಲೆಕ್ಕದಲ್ಲಿ ನಿಶ್ಚಿತ ರಿಟರ್ನ್ಸ್ ಕೊಡುವ ಇನ್ಷೂರೆನ್ಸ್ ಪಾಲಿಸಿ. ಇನ್ನೊಂದು, ಇನ್ಷೂರೆನ್ಸ್ ಕಂಪನಿ ಮಾಡುವ ಹೂಡಿಕೆಗಳಿಂದ ಸೃಷ್ಟಿಯಾಗುವ ಆದಾಯ ಅಥವಾ ನಷ್ಟದಲ್ಲಿ ಪಾಲು ಹೊಂದುವುದು. ಈ ಎರಡನೆಯದೇ ಪಾರ್ಟಿಸಿಪೇಟಿಂಗ್ ಪ್ಲಾನ್.

ಇದನ್ನೂ ಓದಿEducation Loan: ಕೋರ್ಸ್ ಫೀಸ್ ಮೊತ್ತವಷ್ಟೇ ಸಾಲ ಸಿಗುತ್ತಾ? ಎಜುಕೇಶನ್ ಲೋನ್ ಪಡೆಯುವ ಮುನ್ನ ಈ ವಿಚಾರಗಳು ತಿಳಿದಿರಲಿ

ಈ ಪಾರ್ಟಿಸಿಪೇಟಿಂಗ್ ಪ್ಲಾನ್​ನಲ್ಲಿ ಪ್ರತೀ ವರ್ಷವೂ ನಿರ್ದಿಷ್ಟ ಬೋನಸ್ ನೀಡಲಾಗುತ್ತದೆ. ಕೆಲವೊಮ್ಮೆ ಈ ಬೋನಸ್ ಪಾಲಿಸಿ ಪೂರ್ವದಲ್ಲಿ ನಿಗದಿತವಾಗಿರಬಹುದು. ಕೆಲವೊಮ್ಮೆ ಬೋನಸ್ ಅನ್ನು ನೀಡದೇ ಹೋಗಬಹುದು. ಇನ್ಷೂರೆನ್ಸ್ ಕಂಪನಿ ತನ್ನ ಹೂಡಿಕೆಯಿಂದ ಗಳಿಸುವ ಲಾಭಕ್ಕೆ ಅನುಗುಣವಾಗಿ ಬೋನಸ್ ಹಂಚಿಕೆ ಮಾಡಬಹುದು. ಆದರೆ, ಪ್ರತೀ ವರ್ಷವೂ ಬೋನಸ್ ನೀಡಲಾಗುತ್ತದೆ ಎಂಬುದು ಖಾತ್ರಿ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ