FD Rates: ಎಚ್​ಡಿಎಫ್​ಸಿ, ಎಸ್​ಬಿಐ, ಐಸಿಐಸಿಐ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಬಡ್ಡಿದರ ಎಷ್ಟಿದೆ? ಇಲ್ಲಿದೆ ತುಲನೆ

|

Updated on: Jan 08, 2024 | 11:08 AM

HDFC, SBI, ICICI Bank Fixed Deposit Rates: ಎಚ್​ಡಿಎಫ್​ಸಿ ಬ್ಯಾಂಕಿನಲ್ಲಿ ಸಾಮಾನ್ಯ ಗ್ರಾಹಕರ ಠೇವಣಿಗಳಿಗೆ ಬಡ್ಡಿ ದರ ಶೇ. 3ರಿಂದ ಆರಂಭವಾಗಿ ಶೇ. 7.20ರವರೆಗೂ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿ ದರ ಶೇ. 3.50ರಿಂದ ಶೇ. 7ರವರೆಗೂ ಇದೆ. ಐಸಿಐಸಿಐ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 3ರಿಂದ ಶೇ. 7.10ರವರೆಗೂ ಬಡ್ಡಿ ನೀಡಲಾಗುತ್ತದೆ.

FD Rates: ಎಚ್​ಡಿಎಫ್​ಸಿ, ಎಸ್​ಬಿಐ, ಐಸಿಐಸಿಐ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಬಡ್ಡಿದರ ಎಷ್ಟಿದೆ? ಇಲ್ಲಿದೆ ತುಲನೆ
ಎಚ್​ಡಿಎಫ್​ಸಿ ಬ್ಯಾಂಕ್
Follow us on

ಸುರಕ್ಷಿತ ಮತ್ತು ನಿಶ್ಚಿತ ರಿಟರ್ನ್ ತರುವ ಹೂಡಿಕೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (FD- Fixed Deposit) ಒಂದು. ಎಲ್ಲಾ ಬ್ಯಾಂಕುಗಳಲ್ಲಿ ಠೇವಣಿ ಇಡಬಹುದು. ಒಂದು ವರ್ಷ ಹಾಗೂ ಅದಕ್ಕೂ ಮೇಲಿನ ಅವಧಿಯ ಠೇವಣಿಗಳಿಗೆ ಶೇ. 6.50ಕ್ಕಿಂತ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳಲ್ಲಿ ಹೆಚ್ಚಿನ ಬಡ್ಡಿ ಸಿಗಬಹುದು. ಕೆಲ ಪ್ರಮುಖ ಬ್ಯಾಂಕುಗಳಲ್ಲಿ ಎಫ್​ಡಿ ದರ ಎಷ್ಟಿದೆ ಎನ್ನುವ ವಿವರ ಈ ಸುದ್ದಿಯಲ್ಲಿದೆ. ಎಚ್​ಡಿಎಫ್​ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕುಗಳಲ್ಲಿ ಇರುವ ವಿವಿಧ ಅವಧಿಯ ನಿಶ್ಚಿತ ಠೇವಣಿಗಳ ದರಗಳ ತುಲನೆ ಇಲ್ಲಿದೆ:

ಎಚ್​ಡಿಎಫ್​ಸಿ ಬ್ಯಾಂಕ್​ನ ಪರಿಷ್ಕೃತ ಬಡ್ಡಿದರ (2 ಕೋಟಿ ರೂ ಒಳಗಿನ ಠೇವಣಿ)

  • 7ರಿಂದ 29 ದಿನ: ಶೇ. 3
  • 30ರಿಂದ 45 ದಿನ: ಶೇ. 3.5
  • 46ರಿಂದ 89 ದಿನ: ಶೇ. 4.5
  • 90 ದಿನದಿಂದ 6 ತಿಂಗಳು: ಶೇ. 4.5
  • 6 ತಿಂಗಳು ಒಂದು ದಿನದಿಂದ 9 ತಿಂಗಳ ಒಳಗೆ: ಶೇ. 5.75
  • 9 ತಿಂಗಳಿಂದ 1 ವರ್ಷದ ಒಳಗೆ: ಶೇ. 6
  • 1 ವರ್ಷದಿಂದ 15 ತಿಂಗಳ ಒಳಗೆ: ಶೇ. 6.6
  • 15 ತಿಂಗಳಿಂದ 18 ತಿಂಗಳ ಒಳಗೆ: ಶೇ. 7.10
  • 18 ತಿಂಗಳು 1 ದಿನದಿಂದ 2 ವರ್ಷ 11 ತಿಂಗಳ ಒಳಗೆ: ಶೇ. 7
  • 2 ವರ್ಷ 11 ತಿಂಗಳಿಂದ 35 ತಿಂಗಳ ಒಳಗೆ: ಶೇ. 7.15
  • 2 ವರ್ಷ 11ತಿಂಗಳು 1 ದಿನದಿಂದ 4 ವರ್ಷ 7 ತಿಂಗಳ ಒಳಗೆ: ಶೇ. 7
  • 4 ವರ್ಷ 7 ತಿಂಗಳಿಂದ 55 ತಿಂಗಳ ಒಳಗೆ: ಶೇ. 7.20
  • 4 ವರ್ಷ 7 ತಿಂಗಳು 1 ದಿನದಿಂದ 5 ವರ್ಷದ ಒಳಗೆ: ಶೇ. 7
  • 5 ವರ್ಷದಿಂದ 10 ವರ್ಷದವರಗೆ: ಶೇ. 7ರಷ್ಟು ಬಡ್ಡಿ

ಇದನ್ನೂ ಓದಿ: SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

ಈ ಮೇಲಿನವು ಸಾಮಾನ್ಯ ಗ್ರಾಹಕರ ಠೇವಣಿಗಳಿಗೆ ನೀಡಲಾಗುವ ಬಡ್ಡಿಯಾಗಿದೆ. ಹಿರಿಯ ನಾಗರಿಕರ ಎಲ್ಲ ಠೇವಣಿಗಳಿಗೆ 50 ಬೇಸಿಸ್ ಅಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರ 5ರಿಂದ 10 ವರ್ಷದ ಠೇವಣಿಗಳಿಗೆ 75 ಬೆಸಿಸ್ ಅಂಕ, ಅಂದರೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತುಐಸಿಐಸಿಐ ಬ್ಯಾಂಕುಗಳಲ್ಲಿ ಕೆಲ ಪ್ರಮುಖ ಠೇವಣಿಗಳಿಗೆ ಸಿಗುವ ಬಡ್ಡಿದರ ಎಷ್ಟು ಎಂಬ ವಿವರ ಈ ಕೆಳಕಾಣಿಸಿದಂತಿದೆ:

ಎಸ್​ಬಿಐನಲ್ಲಿ ಇರುವ ಎಫ್​ಡಿ ದರಗಳು

  • ಒಂದು ವರ್ಷಕ್ಕಿಂತ ಒಳಗಿನ ಠೇವಣಿಗಳಿಗೆ: ಶೇ. 3.50ರಿಂದ ಶೇ. 6.00ರವರೆಗೆ
  • 1 ವರ್ಷದಿಂದ 2 ವರ್ಷದ ಒಳಗೆ: ಶೇ. 6.80
  • 2 ವರ್ಷದಿಂದ 3 ವರ್ಷದ ಒಳಗೆ: ಶೇ. 7
  • 3 ವರ್ಷದಿಂದ 10 ವರ್ಷದವರೆಗೆ: ಶೇ. 6.50ರಷ್ಟು ಬಡ್ಡಿ

ಹಿರಿಯ ನಾಗರಿಕರಿಗೆ 50 ಬೇಸಿಸ್ ಅಂಕಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಆದರೆ, 5ರಿಂದ 10 ವರ್ಷದವರೆಗಿನ ಠೇವಣಿಗಳಿಗೆ ಹಿರಿಯ ನಾಗರಿಕರಿಗೆ ಶೇ. 7.50ರಷ್ಟು ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: FD Rates: ಪೋಸ್ಟ್ ಆಫೀಸ್ vs ಎಸ್​ಬಿಐ; ಎಲ್ಲಿ ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಒಂದು ಹೋಲಿಕೆ

ಐಸಿಐಸಿಐ ಬ್ಯಾಂಕ್​ನ ಎಫ್​ಡಿ ದರ

  • ಒಂದು ವರ್ಷದ ಒಳಗಿನ ಠೇವಣಿಗಳಿಗೆ: ಶೇ. 3ರಿಂದ ಶೇ. 6ರವರೆಗೆ ಬಡ್ಡಿ
  • 15 ತಿಂಗಳಿಂದ 2 ವರ್ಷದವರೆಗೆ: ಶೇ. 7.10
  • 5 ವರ್ಷ 1 ದಿನದಿಂದ 10 ವರ್ಷದವರೆಗೆ: ಶೇ. 6.90ರಷ್ಟು ಬಡ್ಡಿ

ಇಲ್ಲಿಯೂ ಹಿರಿಯ ನಾಗರಿಕರ ಠೇವಣಿಗಳಿಗೆ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ನೀಡಲಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ