ತಿಂಗಳಿಗೆ 10,000 ರೂ ಹೂಡಿಕೆಯಲ್ಲಿ 10 ವರ್ಷದಲ್ಲಿ ಒಂದು ಕೋಟಿ ಸಾಧ್ಯವಾ?

Earning 1 crore through SIP: ಕೇವಲ ಹಣ ಉಳಿಸುವುದರಿಂದ ಒಂದು ಕೋಟಿ ರೂ ಕೂಡಿಡಲು ಆಗೋದಿಲ್ಲ ಎಂಬುದು ತಿಳಿದಿರಲಿ. ನೀವು 25 ವರ್ಷ ನಿಮ್ಮ ಶೇ. 30 ಸಂಬಳ ಕೂಡಿಡುತ್ತಾ ಹೋದರೂ ಒಂದು ಕೋಟಿ ರೂ ಆಗಲ್ಲ. ವಾರ್ಷಿಕವಾಗಿ ಕನಿಷ್ಠ ಶೇ. 10ರಷ್ಟು ರಿಟರ್ನ್ ಕೊಡಬಲ್ಲಂತಹ ಮ್ಯೂಚುವಲ್ ಫಂಡ್ ಇತ್ಯಾದಿಗೆ ಹಣ ಹಾಕಿದರೆ ಗುರಿ ಈಡೇರಬಹುದು.

ತಿಂಗಳಿಗೆ 10,000 ರೂ ಹೂಡಿಕೆಯಲ್ಲಿ 10 ವರ್ಷದಲ್ಲಿ ಒಂದು ಕೋಟಿ ಸಾಧ್ಯವಾ?
ಹೂಡಿಕೆ

Updated on: Oct 07, 2025 | 4:37 PM

ಕೋಟಿ ರೂ ಸಂಪಾದಿಸಲು ಎಷ್ಟು ವರ್ಷ ಬೇಕು? ಸಂಬಳದಲ್ಲಿ ಹಣ ಉಳಿಸಿ (money savings) ಅದನ್ನು ಕೂಡಿಡುತ್ತಾ ಹೋದರೆ ಇಡೀ ಜೀವಮಾನವೇ ಬೇಕಾದೀತು. ನಿಮ್ಮ ಸಂಬಳ ಈಗ 40,000 ರೂ ಇದ್ದು ಇನ್ನು 25 ವರ್ಷದಲ್ಲಿ ನಿಮ್ಮ ನಿವೃತ್ತಿಯ ವೇಳೆಗೆ ಸಂಬಳ 1.50 ಲಕ್ಷ ರೂ ಆಗಬಹುದು ಎಂದಿಟ್ಟುಕೊಳ್ಳಿ. ಇದರಲ್ಲಿ ನೀವು ಶೇ. 30ರಷ್ಟು ಹಣವನ್ನು ಉಳಿಸುತ್ತಾ ಹೋದಲ್ಲಿ ನಿವೃತ್ತಿ ವೇಳೆಗೆ ನಿಮ್ಮ ಬಳಿ ಇರುವ ಹಣ ಅಂದಾಜು 71 ಲಕ್ಷ ರೂ.

ಈ 25 ವರ್ಷ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ?

ಒಂದು ವೇಳೆ ನೀವು ಈ 25 ವರ್ಷದಲ್ಲಿ ಸತತವಾಗಿ ಉಳಿಸಿದ ಹಣವನ್ನು ಎಸ್​ಐಪಿ ರೂಪದಲ್ಲಿ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಿದ್ದರೆ ಎಷ್ಟು ರಿಟರ್ನ್ ಸಿಗುತ್ತಿತ್ತು ಗೊತ್ತಾ?

ಇದನ್ನೂ ಓದಿ: ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ತಂದಿದೆ ಸರ್ಕಾರದ ಎನ್​ಪಿಎಸ್ ಸ್ಕೀಮ್

ಒಂದು ವೇಳೆ ಮ್ಯೂಚುವಲ್ ಫಂಡ್ 25 ವರ್ಷದಲ್ಲಿ ಶೇ. 8ರ ಸಿಎಜಿಆರ್​ನಲ್ಲಿ ಬೆಳೆದರೆ 1.82 ಕೋಟಿ ರೂ ಆಗುತ್ತದೆ. ಈಗಿನ ಹೆಚ್ಚಿನ ಮ್ಯೂಚುವಲ್ ಫಂಡ್​ಗಳು ದೀರ್ಘಾವಧಿಯಲ್ಲಿ ಕನಿಷ್ಠ ಶೇ. 8ರಷ್ಟಾದರೂ ಬೆಳೆಯುತ್ತದೆ.

ಮ್ಯೂಚುವಲ್ ಫಂಡ್ ಶೇ. 10ರಷ್ಟು ಬೆಳೆಯುತ್ತಾ ಹೋದಲ್ಲಿ 25 ವರ್ಷದಲ್ಲಿ ನಿಮ್ಮ ಹೂಡಿಕೆ 2.33 ಕೋಟಿ ರೂ ಆಗುತ್ತದೆ.

10,000 ರೂ ಎಸ್​ಐಪಿಯಿಂದ 10 ವರ್ಷದಲ್ಲಿ ಒಂದು ಕೋಟಿ ರೂ ಸಾಧ್ಯವಾ?

ಹತ್ತು ಸಾವಿರ ರೂನ ಎಸ್​ಐಪಿಯಿಂದ 10 ವರ್ಷದಲ್ಲಿ ಒಂದು ಕೋಟಿ ರೂ ಗಳಿಸಲು ಅಸಾಧ್ಯ. ನಿಮ್ಮ ಹೂಡಿಕೆ ವರ್ಷಕ್ಕೆ ಶೇ. 30ರಷ್ಟು ಬೆಳೆದರೂ ಒಂದು ಕೋಟಿ ರೂ ಆಗೋದಿಲ್ಲ.

ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?

ಹತ್ತು ವರ್ಷದಲ್ಲಿ ಒಂದು ಕೋಟಿ ರೂ ಆಗಬೇಕೆಂದರೆ ನೀವು ತಿಂಗಳಿಗೆ 40,000 ರೂನಿಂದ 60,000 ರೂವರೆಗೆ ಹೂಡಿಕೆ ಮಾಡಬೇಕಾಗಬಹುದು. ಹೂಡಿಕೆ ವಾರ್ಷಿಕ ಶೇ. 12ರಷ್ಟು ಬೆಳೆದರೆ ತಿಂಗಳಿಗೆ 44,700 ರೂ ಎಸ್​ಐಪಿಯಿಂದ 10 ವರ್ಷದಲ್ಲಿ ಒಂದು ಕೋಟಿ ರೂ ಪಡೆಯಬಹುದು.

ಹೂಡಿಕೆ ಶೇ. 10ರಷ್ಟು ಹೆಚ್ಚುತ್ತಾ ಹೋದಲ್ಲಿ 10 ವರ್ಷದಲ್ಲಿ ಒಂದು ಕೋಟಿ ರೂ ಪಡೆಯಲು ತಿಂಗಳಿಗೆ 49,700 ರೂ ಹೂಡಿಕೆ ಮಾಡಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ