AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ತಂದಿದೆ ಸರ್ಕಾರದ ಎನ್​ಪಿಎಸ್ ಸ್ಕೀಮ್

National Pension Scheme gives great returns: ನ್ಯಾಷನಲ್ ಪೆನ್ಷನ್ ಸ್ಕೀಮ್ ಆರಂಭವಾದಾಗಿನಿಂದ ಹೂಡಿಕೆದಾರರಿಗೆ ಶೇ. 13ರಷ್ಟು ಸರಾಸರಿ ವಾರ್ಷಿಕ ರಿಟರ್ನ್ಸ್ ಕೊಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಎನ್​ಪಿಎಸ್ ಮಾತ್ರವಲ್ಲ, ಸರ್ಕಾರಿ ಬಾಂಡ್ ಮತ್ತು ಕಾರ್ಪೊರೇಟ್ ಬಾಂಡ್, ಡೆಟ್ ಬಾಂಡ್​ಗಳೂ ಕೂಡ ಶೇ. 9ರಷ್ಟು ರಿಟರ್ನ್ ಕೊಟ್ಟಿವೆ.

ಮ್ಯೂಚುವಲ್ ಫಂಡ್​ಗಿಂತಲೂ ಹೆಚ್ಚು ಲಾಭ ತಂದಿದೆ ಸರ್ಕಾರದ ಎನ್​ಪಿಎಸ್ ಸ್ಕೀಮ್
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 03, 2025 | 6:24 PM

Share

ನವದೆಹಲಿ, ಅಕ್ಟೋಬರ್ 3: ಕೆಲ ವರ್ಷಗಳ ಹಿಂದೆ ಸರ್ಕಾರ ಎನ್​ಪಿಎಸ್ (NPS – National Pension System) ಆರಂಭಿಸಿದಾಗ ಕೊಟ್ಟಿದ್ದ ಭರವಸೆ ನೆರವೇರಿದೆ. ನ್ಯಾಷನಲ್ ಪೆನ್ಷನ್ ಸ್ಕೀಮ್​ನಿಂದ ಪ್ರಯೋಜನ ಇಲ್ಲ ಎಂದು ಕೆಲವರು ಮಾಡಿದ್ದ ಎಣಿಕೆ ತಪ್ಪಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಎನ್​ಪಿಎಸ್​ನಿಂದ ಶೇ. 13ರಷ್ಟು ವಾರ್ಷಿಕ ರಿಟರ್ನ್ ಬಂದಿರುವ ವಿಚಾರವನ್ನು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಎನ್​ಪಿಎಸ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ನಿರ್ಮಲಾ ಸೀತಾರಾಮನ್, ಎನ್​ಪಿಎಸ್ ಅನ್ನು ಜಾಗತಿಕ ಹೂಡಿಕೆ ಉತ್ಪನ್ನಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಎನ್​ಪಿಎಸ್ ಮಾತ್ರವಲ್ಲ, ಸರ್ಕಾರಿ ಸೆಕ್ಯೂರಿಟೀಸ್ ಮತ್ತು ಡೆಟ್ ಬಾಂಡ್​ಗಳೂ ಕೂಡ ಶೇ 9ರಷ್ಟು ವಾರ್ಷಿಕ ರಿಟರ್ಸ್ ತಂದಿವೆ ಎಂಬುದನ್ನು ನಿರ್ಮಲಾ ಸೀತಾರಾಮನ್ ಎತ್ತಿ ತೋರಿಸಿದ್ದಾರೆ.

ನ್ಯಾಷನಲ್ ಪೆನ್ಷನ್ ಸ್ಕೀಮ್ ಮೊದಲು ಜಾರಿಗೆ ಬಂದಿದ್ದು 2004ರಲ್ಲಿ. ಆರಂಭದಲ್ಲಿ ಇದನ್ನು ರೈಲ್ವೆ ಉದ್ಯೋಗಿಗಳಿಗೆಂದು ತರಲಾಯಿತು. ಬಳಿಕ 2009ರಿಂದ ಇದನ್ನು ಎಲ್ಲರಿಗೂ ವಿಸ್ತರಿಸಲಾಯಿತು. ಈಗ ಉದ್ಯೋಗಿಗಳು ಮಾತ್ರವಲ್ಲ, ಯಾರು ಬೇಕಾದರೂ ಇದರಲ್ಲಿ ಹೂಡಿಕೆ ಮಾಡಬಹುದು. ಹತ್ತರಿಂದ ಹದಿನೈದು ವರ್ಷಗಳು ಶೇ. 13ರಷ್ಟು ವಾರ್ಷಿಕ ರಿಟರ್ನ್ ನೀಡುವುದು ಸಾಮಾನ್ಯ ಸಂಗತಿಯಲ್ಲ.

ಇದನ್ನೂ ಓದಿ: Education Expense: ಮಕ್ಕಳ ಶಿಕ್ಷಣಕ್ಕೆ ಸಾಲ ಮಾಡುವ ಬದಲು ಈ ತಂತ್ರ ಅನುಸರಿಸಿ

ಮ್ಯೂಚುವಲ್ ಫಂಡ್​ಗಳಿಗಿಂತಲೂ ಎನ್​ಪಿಎಸ್ ಹೆಚ್ಚು ಲಾಭ ಕೊಟ್ಟಿದೆಯಾ?

ಭಾರತದ ಷೇರು ಮಾರುಕಟ್ಟೆ ಒಟ್ಟಾರೆಯಾಗಿ ಕಳೆದ 10 ವರ್ಷದಲ್ಲಿ ಶೇ. 11.76 ಸಿಎಜಿಆರ್​ನಲ್ಲಿ ರಿಟರ್ನ್ಸ್ ಕೊಟ್ಟಿದೆ. ನಿಫ್ಟಿ 50 ಇಂಡೆಕ್ಸ್ 2015ರ ಅಕ್ಟೋಬರ್ ಮೊದಲ ವಾರದಲ್ಲಿ 8,189 ಅಂಕಗಳಲ್ಲಿತ್ತು. ಇವತ್ತು (ಅ. 3) 24,894 ಅಂಕಗಳಲ್ಲಿದೆ. ಇದು ಶೇ. 11.76 ವಾರ್ಷಿಕ ದರದಲ್ಲಿ ಏರಿದೆ.

ಮ್ಯೂಚುವಲ್ ಫಂಡ್​ಗಳು ಕಳೆದ 10 ವರ್ಷದಲ್ಲಿ ಸರಾಸರಿಯಾಗಿ ಶೇ. 10ರಿಂದ 12ರಷ್ಟು ರಿಟರ್ನ್ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಎನ್​ಪಿಎಸ್ ಸ್ಕೀಮ್ ಶೇ. 13ರ ವಾರ್ಷಿಕ ರಿಟರ್ನ್ಸ್ ನೀಡಿರುವುದು ನಿಜಕ್ಕೂ ಗಮನಾರ್ಹ ಸಂಗತಿ.

ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?

ಏನಿದು ಎನ್​ಪಿಎಸ್ ಸ್ಕೀಮ್?

ಎನ್​ಪಿಎಸ್ ಅಥವಾ ನ್ಯಾಷನಲ್ ಪೆನ್ಷನ್ ಸ್ಕೀಮ್, ಇದು ಕೇಂದ್ರ ಸರ್ಕಾರದ ಕಣ್ಗಾವಲಿನಲ್ಲಿ ನಡೆಯುವ ಪಿಂಚಣಿ ಯೋಜನೆ. 18 ವರ್ಷ ಮೇಲ್ಪಟ್ಟ ವಯಸ್ಸಿನ ಯಾರು ಬೇಕಾದರೂ ಎನ್​ಪಿಎಸ್ ಅಕೌಂಟ್ ತೆರೆಯಬಹುದು. ನಿವೃತ್ತಿಯವರೆಗೆ ಇದರಲ್ಲಿ ಮಾಸಿಕವಾಗಿ ಹೂಡಿಕೆ ಮಾಡಬಹುದು. ಇದರ ಫಂಡ್​ನಲ್ಲಿರುವ ಹಣವನ್ನು ಮಾರುಕಟ್​ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆಗೆ ವಿವಿಧ ಆಯ್ಕೆಗಳೂ ಇರುತ್ತವೆ. ನಿವೃತ್ತಿ ನಂತರ, ಎನ್​ಪಿಎಸ್ ಕಾರ್ಪಸ್​ನಲ್ಲಿರುವ ಶೇ. 40ರಷ್ಟು ಹಣವನ್ನು ಆ್ಯನುಟಿ ಪ್ಲಾನ್ ಖರೀದಿಗೆ ಬಳಸಬೇಕು. ಉಳಿದವನ್ನು ವಿತ್​ಡ್ರಾ ಮಾಡಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ