ನವದೆಹಲಿ: ಆದಾಯ ತೆರಿಗೆ ಇಲಾಖೆ ಇದೀಗ ಎಐಎಸ್ ಎಂಬ ಹೊಸ ಹಾಗೂ ಉಚಿತ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ತೆರಿಗೆದಾರರ ಅನುಕೂಲಕ್ಕೆಂದು ರೂಪಿಸಲಾದ ಆ್ಯಪ್ ಆಗಿದೆ. ವಾರ್ಷಿಕ ಮಾಹಿತಿ ವರದಿ (AIS- Annual Information Statement) ಮತ್ತು ಸಂಕ್ಷಿಪ್ತ ತೆರಿಗೆಪಾವತಿದಾರ ಮಾಹಿತಿ (TIS- Taxpayer Information Summary) ಇವುಗಳಲ್ಲಿರುವ ಮಾಹಿತಿಯನ್ನು ಎಐಎಸ್ ಮೊಬೈಲ್ ಅಪ್ಲಿಕೇಶನ್ನಲ್ಲೇ ವೀಕ್ಷಿಸಬಹುದು. ಟಿಡಿಎಸ್, ಬಡ್ಡಿ, ಷೇರು ವಹಿವಾಟು, ತೆರಿಗೆ ಪಾವತಿ, ಐಟಿ ರೀಫಂಡ್, ಜಿಎಸ್ಟಿ ಡೇಟಾ ಮೊದಲಾದವಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯನ್ನೂ ಈ ಆ್ಯಪ್ನಲ್ಲಿ ಕಾಣಬಹುದು. ಅಲ್ಲದೇ ತೆರಿಗೆ ಪಾವತಿದಾರರು ಈ ಆ್ಯಪ್ನಲ್ಲಿ ಫೀಡ್ಬ್ಯಾಕ್ ಕೂಡ ನೀಡಬಹುದಾದ ವ್ಯವಸ್ಥೆ ಇದೆ.
26AS ಫಾರ್ಮ್ನಲ್ಲಿರುವ ಸಮಗ್ರ ಮಾಹಿತಿ ದರ್ಶನವೇ ಎಐಎಸ್. ಈ ಸ್ಟೇಟ್ಮೆಂಟ್ನಲ್ಲಿ ನೀಡಲಾಗಿರುವ ಮಾಹಿತಿ ಬಗ್ಗೆ ತೆರಿಗೆ ಪಾವತಿದಾರರು ಫೀಡ್ಬ್ಯಾಕ್ ನೀಡುವ ಅವಕಾಶ ಇರುತ್ತದೆ. ಈ ಫೀಡ್ಬ್ಯಾಕ್ ನಂತರದ ರಿಪೋರ್ಟೆಡ್ ವ್ಯಾಲ್ಯೂ ಮತ್ತು ಮಾಡಿಫೈಡ್ ವ್ಯಾಲ್ಯೂ ಎರಡೂ ಕೂಡ ಎಐಎಸ್ನಲ್ಲಿ ಇರುತ್ತದೆ.
ತೆರಿಗೆ ಪಾವತಿದಾರರಿಗೆ ಆನ್ಲೈನ್ ಫೀಡ್ಬ್ಯಾಕ್ ಸಮೇತ ತೆರಿಗೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಒಂದು ವ್ಯವಸ್ಥೆ ಎಐಎಸ್. ಐಟಿ ರಿಟರ್ನ್ ಪ್ರಕ್ರಿಯೆಯನ್ನು ಇನ್ನಷ್ಟು ಸುಗಮಗೊಳಿಸಲು ಈ ವ್ಯವಸ್ಥೆ ಅನುಕೂಲ ಮಾಡಿಕೊಡುತ್ತದೆ.
ಇದನ್ನೂ ಓದಿ: Income Tax: ಸೆಲ್ಫ್ ಅಸೆಸ್ಮೆಂಟ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವುದು ಹೇಗೆ? ಇಲ್ಲಿದೆ ವಿವರ
ಇನ್ಕಮ್ ಟ್ಯಾಕ್ಸ್ ಪೋರ್ಟಲ್ https://www.incometax.gov.in ಇಲ್ಲಿಗೆ ಹೋಗಿ ಲಾಗಿನ್ ಆದ ಬಳಿಕ ಸರ್ವಿಸಸ್ ಟ್ಯಾಬ್ ಅಡಿಯಲ್ಲಿರುವ ಆನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ (ಎಐಎಸ್) ಮೇಲೆ ಕ್ಲಿಕ್ ಮಾಡಬೇಕು. ಪೋರ್ಟಲ್ಗೆ ಲಾಗಿನ್ ಆಗಿದ್ದರೆ ಮಾತ್ರ ಈ ಸೇವೆ ಲಭ್ಯ ಇರುತ್ತದೆ. ಇಲ್ಲಿದಿದ್ದರೆ ಕಾಣುವುದಿಲ್ಲ.
ಲಾಗಿನ್ ಆದಾಗ ಇರುವ ಮುಖ್ಯಪುಟದಲ್ಲಿ ಎಎಸ್ಐ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾದ ಹಣಕಾಸು ವರ್ಷವನ್ನು ಆಯ್ದುಕೊಂಡು ಎಐಎಸ್ ಟೈಲ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾರ್ಷಿಕ ಇನ್ಫಾರ್ಮೇಶನ್ ಸ್ಟೇಟ್ಮೆಂಟ್ ವೀಕ್ಷಿಸಬಹುದು.
ಇದನ್ನೂ ಓದಿ: EPFO: ಜನವರಿಯಲ್ಲಿ ಇಪಿಎಫ್ಒಗೆ ನಿವ್ವಳ 14.86 ಲಕ್ಷ ಖಾತೆಗಳ ಸೇರ್ಪಡೆ; ಹೊಸ ಉದ್ಯೋಗಸೃಷ್ಟಿ ಕುಸಿದಿದೆಯೇ?
ಎಐಎಸ್ನಲ್ಲಿ ಕಾಣುವ ಮಾಹಿತಿಯನ್ನು ಎರಡು ಭಾಗವಾಗಿ ವರ್ಗೀಕರಿಸಬಹುದು. ಸಾಮಾನ್ಯ ಮಾಹಿತಿ ಮತ್ತು ಟಿಡಿಎಸ್/ಟಿಸಿಎಸ್ ಮಾಹಿತಿ ಇರುತ್ತದೆ. ಜನರನ್ ಇನ್ಫಾರ್ಮೇಶನ್ ಅಥವಾ ಸಾಮಾನ್ಯ ಮಾಹಿತಿಯಲ್ಲಿ ತೆರಿಗೆ ಪಾವತಿದಾರರ ಸಾಮಾನ್ಯ ಮಾಹಿತಿ ಇರುತ್ತದೆ. ಪ್ಯಾನ್ ನಂಬರ್, ಆಧಾರ್ ನಂಬರ್, ತೆರಿಗೆಪಾವತಿದಾರನ ಹೆಸರು, ಜನ್ಮ ದಿನಾಂಕ, ಸಂಸ್ಥೆಯಾದರೆ ಅದರ ಸ್ಥಾಪನಾ ದಿನಾಂಕ, ಮೊಬೈಲ್ ನಂಬರ್, ಇಮೇಲ್ ವಿಳಾಸ, ಭೌತಿಕ ವಿಳಾಸ ಇತ್ಯಾದಿ ಮಾಹಿತಿ ಒಂದು ಭಾಗದಲ್ಲಿರುತ್ತದೆ.
ಎರಡನೇ ಭಾಗದಲ್ಲಿ ಟಿಡಿಎಸ್ ಅಥವಾ ಟಿಸಿಎಸ್ ಮಾಹಿತಿ ಇರುತ್ತದೆ. ಎಸ್ಎಫ್ಟಿ ಮಾಹಿತಿ, ತೆರಿಗೆ ಪಾವತಿ, ಡಿಮ್ಯಾಂಡ್ ಮತ್ತು ರೀಫಂಡ್ ಹಾಗೂ ಇತರೆ ಮಾಹಿತಿ ಇದರಲ್ಲಿ ಇರುತ್ತದೆ. ಇತರ ಮಾಹಿತಿಯಲ್ಲಿ ರೀಫಂಡ್ ಮೇಲಿನ ಬಡ್ಡಿ, ವಿದೇಶೀ ಕರೆನ್ಸಿ ಖರೀದಿ, ವಿದೇಶಗಳಿಗೆ ಹಣ ಕಳುಹಿಸಿರುವುದು ಇತ್ಯಾದಿ ಮಾಹಿತಿ ಇದರಲ್ಲಿರುತ್ತದೆ.
Published On - 12:42 pm, Thu, 23 March 23