EPFO: ಜನವರಿಯಲ್ಲಿ ಇಪಿಎಫ್ಒಗೆ ನಿವ್ವಳ 14.86 ಲಕ್ಷ ಖಾತೆಗಳ ಸೇರ್ಪಡೆ; ಹೊಸ ಉದ್ಯೋಗಸೃಷ್ಟಿ ಕುಸಿದಿದೆಯೇ?
Ministry of Labour and Employment Ministry Data: 2023 ಜನವರಿಯಲ್ಲಿ ಒಟ್ಟು 14.86 ಲಕ್ಷ ಜನವರು ಇಪಿಎಫ್ಒನಲ್ಲಿ ಖಾತೆ ತೆರೆದಿದ್ದಾರೆ. ಹಿಂದಿನ ತಿಂಗಳಿಗಿಂತ ಇದು ಶೇ. 16.6ರಷ್ಟು ಹೆಚ್ಚಿದೆ. ಈ ಅವಧಿಯಲ್ಲಿ 10.6 ಲಕ್ಷ ಮಂದಿಯ ಪಿಎಫ್ ಖಾತೆ ಬದಲಾಗಿದೆ. ಅಂದರೆ ಇಷ್ಟು ಜನರು ತಮ್ಮ ಹಿಂದಿನ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿಕೊಂಡಿರುವುದನ್ನು ಇದು ತೋರಿಸುತ್ತದೆ.
ನವದೆಹಲಿ: ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಇದೇ ಜನವರಿಯಲ್ಲಿ ನಿವ್ವಳ 14.86 ಲಕ್ಷ ಸದಸ್ಯರನ್ನು ಸೇರಿಸಿಕೊಂಡಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (Union Labour and Employment Ministry) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮೊದಲ ಬಾರಿಗೆ ಸದಸ್ಯರಾಗುತ್ತಿರುವ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ. 7.7 ಲಕ್ಷ ಜನರು ಜನವರಿ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಪಿಎಫ್ ಖಾತೆ ತೆರೆದಿದ್ದಾರೆ. ಅಂದರೆ ಹೊಸ ಉದ್ಯೋಗಸೃಷ್ಟಿ 7.7 ಲಕ್ಷ ಎಂಬುದನ್ನು ಇದು ತೋರಿಸುತ್ತದೆ.
ಅಂದಹಾಗೆ, ಮೊದಲ ಬಾರಿಗೆ ಪಿಎಫ್ ಸದಸ್ಯತ್ವ (EPF Subscription) ಪಡೆಯುತ್ತಿರುವ ಉದ್ಯೋಗಿಗಳ ಸಂಖ್ಯೆ ಈ ಹಣಕಾಸು ವರ್ಷದಲ್ಲಿ ಸರಾಸರಿಯಾಗಿ 10 ಲಕ್ಷಕ್ಕಿಂತ ಹೆಚ್ಚು ಇತ್ತು. ಕಳೆದ ನಾಲ್ಕು ತಿಂಗಳಿಂದ, ಅಂದರೆ ಅಕ್ಟೋಬರ್, ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಹೊಸ ಸದಸ್ಯರ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇದೆ. 2022 ಅಕ್ಟೋಬರ್ ತಿಂಗಳಲ್ಲಿ 7.8 ಲಕ್ಷ ಉದ್ಯೋಗಿಗಳು ಮೊದಲ ಬಾರಿಗೆ ಪಿಎಫ್ ಸಬ್ಸ್ಕ್ರೈಬರ್ಸ್ ಆಗಿದ್ದರು. ಅದೇ ಅತಿ ಕಡಿಮೆ ಎನಿಸಿತ್ತು. ಆದರೆ, ಜನವರಿ ತಿಂಗಳಲ್ಲಿ ಅದಕ್ಕಿಂತಲೂ ಕಡಿಮೆ ಸಂಖ್ಯೆ ದಾಖಲಾಗಿದೆ.
ಇದನ್ನೂ ಓದಿ: Sri Lanka: ಐಎಂಎಫ್ನಿಂದ ಶ್ರೀಲಂಕಾಗೆ ಮತ್ತೆ ನೆರವು; 25,000 ಕೋಟಿ ರೂ ಸಾಲಕ್ಕೆ ಅನುಮೋದನೆ
2023 ಜನವರಿಯಲ್ಲಿ ಒಟ್ಟು 14.86 ಲಕ್ಷ ಜನವರು ಇಪಿಎಫ್ಒನಲ್ಲಿ ಖಾತೆ ತೆರೆದಿದ್ದಾರೆ. ಹಿಂದಿನ ತಿಂಗಳಿಗಿಂತ ಇದು ಶೇ. 16.6ರಷ್ಟು ಹೆಚ್ಚಿದೆ. ಈ ಅವಧಿಯಲ್ಲಿ 10.6 ಲಕ್ಷ ಮಂದಿಯ ಪಿಎಫ್ ಖಾತೆ ಬದಲಾಗಿದೆ. ಅಂದರೆ ಇಷ್ಟು ಜನರು ತಮ್ಮ ಹಿಂದಿನ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿಕೊಂಡಿರುವುದನ್ನು ಇದು ತೋರಿಸುತ್ತದೆ.
ಹೊಸದಾಗಿ ಸೇರಿದ ಸದಸ್ಯರ ಪೈಕಿ 18-21 ವರ್ಷ ವಯೋಮಾನದವರು 2.2 ಲಕ್ಷ ಇದ್ದಾರೆ. 22-25 ವರ್ಷ ವಯೋಮಾನದವರು 2 ಲಕ್ಷ ಇದ್ದಾರೆ. ಜನವರಿಯಲ್ಲಿ ಸೇರ್ಪಡೆಯಾದ ಹೊಸ ಸದಸ್ಯರ ಪೈಕಿ 18-25 ವರ್ಷ ವಯೋಮಾನದವರೇ ಶೇ. 55.52 ಇದ್ದಾರೆ.
ಇದನ್ನೂ ಓದಿ: Amazon Layoffs: ಅಮೇಜಾನ್ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ
ಇನ್ನು, ಇಪಿಎಫ್ಒ ಸದಸ್ಯತ್ವದಿಂದಲೇ ಪೂರ್ಣವಾಗಿ ನಿರ್ಗಮಿಸಿದವರ ಸಂಖ್ಯೆ ಜನವರಿಯಲ್ಲಿ 3.5 ಲಕ್ಷ ಮಂದಿ ಇದ್ದಾರೆ. ಅಂದರೆ ಇವರು ಕೆಲಸ ಬಿಟ್ಟವರು ಇನ್ನೂ ಹೊಸ ಕೆಲಸಕ್ಕೆ ಸೇರಿಲ್ಲದಿರುವುದನ್ನು ಇದು ಸೂಚಿಸುತ್ತದೆ. ಹಿಂದಿನ ಮೂರು ತಿಂಗಳಲ್ಲಿ ಇನ್ನೂ ಹೆಚ್ಚಿನ ಜನರು ಸಂಪೂರ್ಣವಾಗಿ ನಿರ್ಗಮಿಸಿದ್ದು ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Tue, 21 March 23