Amazon Layoffs: ಅಮೇಜಾನ್​ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ

Amazon Latest Job Cuts: ವಿಶ್ವದ ನಂಬರ್ ಒನ್ ಇ-ಕಾಮರ್ಸ್ ಕಂಪನಿ ಅಮೇಜಾನ್ ಇದೀಗ ಇನ್ನಷ್ಟು 9 ಸಾವಿರ ಮಂದಿಯನ್ನು ಕೆಲಸದಿಂದ ತೆಗೆಯಲು ಯೋಜಿಸುತ್ತಿದೆ. ಕೆಲ ತಿಂಗಳ ಹಿಂದೆ ಒಟ್ಟು 18 ಸಾವಿರ ಮಂದಿಯನ್ನು ಲೇ ಆಫ್ ಮಾಡಲಾಗಿತ್ತು.

Amazon Layoffs: ಅಮೇಜಾನ್​ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ
ಅಮೇಜಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Mar 21, 2023 | 11:21 AM

ನವದೆಹಲಿ: ಅಮೇಜಾನ್​ನಿಂದ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ (Amazon Job Cuts) ಭರಾಟೆ ಮುಂದುವರಿಯುತ್ತಿದೆ. ಈಗಾಗಲೇ 18 ಸಾವಿರ ಉದ್ಯೋಗಿಗಳನ್ನು ಲೇ ಆಫ್ ಮಾಡುವುದಾಗಿ ಜನವರಿ ತಿಂಗಳಲ್ಲಿ ಅಮೇಜಾನ್ ಹೇಳಿತ್ತು. ಅದರಂತೆ ಈಗಾಗಲೇ ಬಹಳಷ್ಟು ಮಂದಿ ಪಿಂಕ್ ಸ್ಲಿಪ್ ಪಡೆದು ಮನೆಗೆ ಹೋಗಿದ್ದಾರೆ. ಈಗ ಇದು ಸಾಕಾಗದು ಎಂದು ಇನ್ನೂ 9,000 ಮಂದಿಯನ್ನು ಕೆಲಸದಿಂದ ತೆಗೆಯಲು ಅಮೇಜಾನ್ ಯೋಜಿಸಿದೆ. ಇದರೊಂದಿಗೆ 2023, ಈ ವರ್ಷ ಅಮೇಜಾನ್ ಒಟ್ಟು 27,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದಂತಾಗುತ್ತದೆ. ಮುಂದಿನ ಕೆಲ ವಾರಗಳಲ್ಲಿ ಈ 9 ಸಾವಿರ ಮಂದಿಗೆ ನೋಟೀಸ್ ಜಾರಿ ಮಾಡುವ ಸಾಧ್ಯತೆ ಇದೆ.

ಅಮೇಜಾನ್​ನಲ್ಲಿ ಸದ್ಯ ವಾರ್ಷಿಕ ಪ್ಲಾನಿಂಗ್ ಪ್ರಕ್ರಿಯೆ ನಡೆಯುತ್ತಿದೆ. ಎರಡನೇ ಹಂತದ ಈ ಪ್ರಕ್ರಿಯೆಯಲ್ಲಿ ಅಮೇಜಾನ್​ನ ವ್ಯವಹಾರ ಇರುವ ಯಾವ ಕ್ಷೇತ್ರದಲ್ಲಿ ಉದ್ಯೋಗಕಡಿತ ಮಾಡಬಹುದು ಎಂದು ನಿರ್ಧರಿಸಲಾಗಿದೆ. ಈ ಆಯ್ದ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಕಡಿತ ಮಾಡಲಾಗಿದೆ.

ಉದ್ಯೋಗ ಕಡಿತದ ಜೊತೆಗೆ ಅಮೇಜಾನ್ ಸಂಸ್ಥೆ ತನ್ನ ಇತರ ಕೆಲ ಖರ್ಚು ವೆಚ್ಚಗಳನ್ನು ತಗ್ಗಿಸಲು ಆಲೋಚಿಸಿದೆ. ಅಮೆರಿಕದ ನಾರ್ಥ್ ವರ್ಜೀನಿಯಾದಲ್ಲಿ ಅದರ ಮುಖ್ಯಕಚೇರಿ ನಿರ್ಮಾಣದ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.

ಇದನ್ನೂ ಓದಿಫಾಕ್ಸ್‌ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಸಿಎಂ ಬೊಮ್ಮಾಯಿ ನೇತೃತ್ವದ ಸಭೆ ಅನುಮೋದನೆ

ಅದರ ಗೇಮಿಂಗ್ ಪ್ಲಾಟ್​ಫಾರ್ಮ್ ಟ್ವಿಚ್ ವಿಭಾಗದಲ್ಲೂ ಲೇ ಆಫ್ ಆಗುತ್ತಿದೆ. ಕಂಪನಿಯ ಸ್ಟೋರ್ ವಿಭಾಗವಾದ ಪಿಎಕ್ಸ್​ಟಿಯಲ್ಲೂ ಉದ್ಯೋಗನಷ್ಟ ಆಗಿದೆ.

ಅಮೇಜಾನ್ ದೊಡ್ಡ ಮಟ್ಟದಲ್ಲಿ ಲೇ ಆಫ್ ಮಾಡುತ್ತಿದೆಯಾದರೂ ಹೊಸ ನೇಮಕಾತಿಗಳನ್ನೂ ಜೊತೆಜೊತೆಗೇ ನಡೆಸುತ್ತಿದೆ. ಹೀಗಾಗಿ, ಸದ್ಯ ಅಮೇಜಾನ್​ನಲ್ಲಿ ನಡೆಯುತ್ತಿರುವುದು ಕಂಪನಿಯ ಖರ್ಚುವೆಚ್ಚ ತಗ್ಗಿಸುವುದರ ಜೊತೆಗೆ ವ್ಯವಹಾರ ಬಲಪಡಿಸುವ ಕಾರ್ಯವಾಗಿದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Tue, 21 March 23

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು