AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka: ಐಎಂಎಫ್​ನಿಂದ ಶ್ರೀಲಂಕಾಗೆ ಮತ್ತೆ ನೆರವು; 25,000 ಕೋಟಿ ರೂ ಸಾಲಕ್ಕೆ ಅನುಮೋದನೆ

IMF Loan To Sri Lanka: ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿ ಕೊಡಲು 3 ಬಿಲಿಯನ್ ಡಾಲರ್ ಹಣವನ್ನು ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಐಎಂಎಫ್ ಬಿಡುಗಡೆ ಮಾಡಲಿದೆ. ಸದ್ಯ 333 ಮಿಲಿಯನ್ ಡಾಲರ್ ಹಣವನ್ನು ತತ್​ಕ್ಷಣದ ಬಳಕೆಗೆಂದು ಲಂಕಾಗೆ ಕೊಡಲಿದೆ.

Sri Lanka: ಐಎಂಎಫ್​ನಿಂದ ಶ್ರೀಲಂಕಾಗೆ ಮತ್ತೆ ನೆರವು; 25,000 ಕೋಟಿ ರೂ ಸಾಲಕ್ಕೆ ಅನುಮೋದನೆ
ಶ್ರೀಲಂಕಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 21, 2023 | 12:54 PM

Share

ಮುಖ್ಯಾಂಶಗಳು

  • ಶ್ರೀಲಂಕಾಗೆ ಮತ್ತೆ 3 ಬಿಲಿಯನ್ ಡಾಲರ್ ಹಣ ಬಿಡುಗಡೆಗೆ ಐಎಂಎಂಫ್ ಕಾರ್ಯಕಾರಿ ಮಂಡಳಿ ಮಾರ್ಚ್ 20ರಂದು ಅನುಮೋದನೆ ನೀಡಿದೆ.
  • ಐಎಂಎಂಫ್ ಕೊಡುತ್ತಿರುವುದೂ ಸೇರಿ ಮುಂದಿನ ದಿನಗಳಲ್ಲಿ ಶ್ರೀಲಂಕಾಗೆ ವಿವಿಧ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ 7 ಬಿಲಿಯನ್ ಡಾಲರ್ ಬಿಡುಗಡೆ ಆಗುವ ನಿರೀಕ್ಷೆ ಇದೆ.
  • ಐಎಂಎಫ್ ಕೊಡಲಿರುವ 3 ಬಿಲಿಯನ್ ಡಾಲರ್ ಹಣವನ್ನು ಮುಂದಿನ 4 ವರ್ಷದಲ್ಲಿ ಶ್ರೀಲಂಕಾ ಆರ್ಥಿಕ ಪುನಶ್ಚೇತನಕ್ಕೆ ಹಂತ ಹಂತವಾಗಿ ಬಳಕೆಯಾಗಲಿದೆ.

ಕೊಲಂಬೋ: ಹಣಕಾಸು ಮತ್ತು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ಐಎಂಎಫ್ (IMF- International Monetary Fund) ಮತ್ತೊಮ್ಮೆ ನೆರವಿನ ಹಸ್ತ ಚಾಚಿದೆ. ಶ್ರೀಲಂಕಾಗೆ 3 ಬಿಲಿಯನ್ ಡಾಲರ್ (ಸುಮಾರು 25 ಸಾವಿರ ಕೋಟಿ ರುಪಾಯಿ) ಸಹಾಯದನವನ್ನು ಬಿಡುಗಡೆ ಮಾಡಲು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯಕಾರಿ ಮಂಡಳಿ (IMF Executive Board) ಮಾರ್ಚ್ 20ರಂದು ಅನುಮೋದನೆ ನೀಡಿದೆ. ಶ್ರೀಲಂಕಾದ ಆರ್ಥಿಕತೆಗೆ ಪುಷ್ಟಿ ಕೊಡಲು ಈ ಹಣವನ್ನು ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಐಎಂಎಫ್ ಬಿಡುಗಡೆ ಮಾಡಲಿದೆ. ಸದ್ಯ 333 ಮಿಲಿಯನ್ ಡಾಲರ್ (ಸುಮಾರು 2,750 ಕೋಟಿ ರುಪಾಯಿ) ಹಣವನ್ನು ತತ್​ಕ್ಷಣದ ಬಳಕೆಗೆಂದು ಲಂಕಾಗೆ ಕೊಡಲಿದೆ.

ಶ್ರೀಲಂಕಾ ಕೆಲವಾರು ವರ್ಷಗಳಿಂದ ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದೆ. ವಿಪರೀತ ಹಣದುಬ್ಬರ, ದೊಡ್ಡ ಪ್ರಮಾಣದಲ್ಲಿ ಸಾಲ, ಫಾರೆಕ್ಸ್ ರಿಸರ್ವ್ ನಿಧಿಯಲ್ಲಿ ಭಾರೀ ಕುಸಿತಗೊಂಡು ಶ್ರೀಲಂಕಾ ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಭಾರೀ ಸಮಸ್ಯೆಗೆ ಸಿಲುಕಿದೆ. ಲಂಕಾದ ಆಡಳಿತ ಸಂಸ್ಥೆಗಳಲ್ಲಿ ಬಹಳ ಹೆಚ್ಚು ಸುಧಾರಣೆ ಆಗಬೇಕಿದೆ ಎಂದು ಐಎಂಎಫ್​ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಾಲಿನಾ ಜಾರ್ಜಿಯೆವಾ ಹೇಳಿದ್ದಾರೆ.

ಐಎಂಎಫ್​ನಿಂದ ಈಗ 3 ಬಿಲಿಯನ್ ಡಾಲರ್ ನೆರವಿನ ಯೋಜನೆ ಬಿಡುಗಡೆ ಆಗಿರುವುದು ಶ್ರೀಲಂಕಾಗೆ ಇನ್ನಷ್ಟು ಅಂತಾರಾಷ್ಟ್ರೀಯ ನೆರವು ಸಿಗಲು ಕಾರಣವಾಗಲಿದೆ. ಇತರ ಜಾಗತಿಕ ಹಣಕಾಸು ಸಂಸ್ಥೆಗಳೂ ಶ್ರೀಲಂಕಾಗೆ ಸಾಲ ಒದಗಿಸುವ ಸಾಧ್ಯತೆ ಇದೆ. ಐಎಂಎಫ್​ನದ್ದೂ ಸೇರಿ ಲಂಕಾಗೆ ಒಟ್ಟು 7 ಬಿಲಿಯನ್ ಡಾಲರ್ (ಸುಮಾರು 57,000 ಕೋಟಿ ರುಪಾಯಿ) ಮೊತ್ತದಷ್ಟು ನೆರವು ಹರಿದುಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: Amazon Layoffs: ಅಮೇಜಾನ್​ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ

ಐಎಂಎಫ್ ಸಾಲ ಸಿಗಬೇಕೆಂದರೆ ಶ್ರೀಲಂಕಾ ತನ್ನ ನೀತಿಯಲ್ಲಿ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡುವುದು ಅಗತ್ಯ ಇತ್ತು. ತೆರಿಗೆ ಹೆಚ್ಚಳ, ಸಬ್ಸಿಡಿ ಕಡಿತ ಇತ್ಯಾದಿ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕೆಂಬುದು ಐಎಂಎಫ್ ವಿಧಿಸುವ ಪ್ರಮುಖ ಷರತ್ತುಗಳಲ್ಲಿದೆ. ಅಂತೆಯೇ, ರಾನಿಲ್ ವಿಕ್ರಮಸಿಂಘೆ ಪ್ರಧಾನಿಯಾದ ಬಳಿಕ ಶ್ರೀಲಕಾದಲ್ಲಿ ಆದಾಯ ತೆರಿಗೆಗಳನ್ನು ಗಮನಾರ್ಹ ಮಟ್ಟಕ್ಕೆ ಏರಿಸಲಾಗಿದೆ. ವಿದ್ಯುತ್ ಮತ್ತು ಪೆಟ್ರೋಲ್ ಮೇಲಿನ ಸಬ್ಸಿಡಿಗಳನ್ನು ಹಿಂಪಡೆಯಲಾಗಿದೆ. ಹೀಗಾಗಿ, ಶ್ರೀಲಂಕಾಗೆ ಐಎಂಎಫ್ ಸಾಲ ಬೇಗ ಸಿಕ್ಕಲು ಸಾಧ್ಯವಾಗಿದೆ.

ಇದು ಶ್ರೀಲಂಕಾಗೆ ಐಎಂಎಫ್ ನೀಡಿದ 17ನೇ ಸಾಲ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಾಲದ ಹಣ ಬಳಸಿ ಹೇಗೆ ಆರ್ಥಿಕತೆಗೆ ಚೇತರಿಕೆ ತರುವುದು ಎಂಬುದು ಶ್ರೀಲಂಕಾ ಮುಂದಿರುವ ಸವಾಲಾಗಿದೆ. ಹಾಗೆಯೇ, ಈ ಅಂತಾರಾಷ್ಟ್ರೀಯ ಸಾಲವನ್ನು ಶ್ರೀಲಂಕಾಗೆ ಹೇಗೆ ಮರುಪಾವತಿ ಮಾಡುತ್ತದೆ ಎಂಬುದೂ ಪ್ರಶ್ನೆ.

ಇದನ್ನೂ ಓದಿ: Aadhaar: ವ್ಯಕ್ತಿ ಸತ್ತ ಬಳಿಕ ಆತನ ಆಧಾರ್ ಕಾರ್ಡ್ ಏನಾಗುತ್ತದೆ? ಸ್ವಯಂ ಆಗಿ ನಿಷ್ಕ್ರಿಯಗೊಳ್ಳುವ ವ್ಯವಸ್ಥೆ ಬರುತ್ತಿದೆಯಾ?

ಇನ್ನೊಂದೆಡೆ ಪಾಕಿಸ್ತಾನ ಕೂಡ ಶ್ರೀಲಂಕಾ ರೀತಿಯಲ್ಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಐಎಂಎಫ್​ನಿಂದ ಸಾಲ ಮಂಜೂರಾತಿಯಾದರೂ ಹಣ ಬಿಡುಗಡೆ ಆಗುತ್ತಿಲ್ಲ. ಪಾಕಿಸ್ತಾನಕ್ಕೆ ಒಂದು ರೀತಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ ಎನ್ನುವಂತಾಗಿದೆ. ಐಎಂಎಫ್ ನಿರೀಕ್ಷಿಸಿದ ರೀತಿಯಲ್ಲಿ ಪಾಕಿಸ್ತಾನದಲ್ಲಿ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವುದು ವಿಳಂಬವಾಗಿ. ಹೀಗಾಗಿ, ಪಾಕಿಸ್ತಾನಕ್ಕೆ ಐಎಂಎಫ್ ಹಣ ಬಿಡುಗಡೆ ಮಾಡುತ್ತಿಲ್ಲ. ಇತ್ತೀಚಿನ ಕೆಲ ದಿನಗಳಿಂದ ಪಾಕಿಸ್ತಾನದ ಆರ್ಥಿಕ ಕ್ರಮಗಳು ಐಎಂಎಫ್​ಎ ಸಮಾಧಾನ ತಂದಿದೆ. ಸದ್ಯದಲ್ಲೇ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!