Aadhaar: ವ್ಯಕ್ತಿ ಸತ್ತ ಬಳಿಕ ಆತನ ಆಧಾರ್ ಕಾರ್ಡ್ ಏನಾಗುತ್ತದೆ? ಸ್ವಯಂ ಆಗಿ ನಿಷ್ಕ್ರಿಯಗೊಳ್ಳುವ ವ್ಯವಸ್ಥೆ ಬರುತ್ತಿದೆಯಾ?
What Happens to Aadhaar After Person's Death: ಡೆತ್ ಸರ್ಟಿಫಿಕೇಟ್ ಕೊಡುವಾಗ ಪಡೆಯಲಾಗುವ ಆಧಾರ್ ನಂಬರ್ ಅನ್ನು ಡೀಆ್ಯಕ್ಟಿವೇಟ್ ಮಾಡುವ ಹೊಸ ವ್ಯವಸ್ಥೆಯನ್ನು ಯುಐಡಿಎಐ ಮತ್ತು ರಿಜಿಸ್ಟ್ರಾರ್ ಜನರಲ್ ಜಾರಿಗೆ ತರುತ್ತಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ....
ಆಧಾರ್ ಕಾರ್ಡ್ ದುರುಪಯೋಗದ ಹಲವು ಪ್ರಕರಣಗಳು (Aadhaar Misuse) ದೇಶಾದ್ಯಂತ ಬೆಳಕಿಗೆ ಬರುತ್ತಿವೆ. ಸತ್ತವರ ಆಧಾರ್ ಕಾರ್ಡ್ ಬಳಕೆಯೂ ಕೆಲ ಪ್ರಕರಣಗಳಲ್ಲಿ ಆಗುತ್ತಿದೆ. ವ್ಯಕ್ತಿ ಸತ್ತ ಬಳಿಕವೂ ಅವರ ಆಧಾರ್ ಕಾರ್ಡ್ ಹಾಗೇ ಉಳಿಯುವುದನ್ನು ನೋಡಿದ್ದೇವೆ. ಈಗ ಇದನ್ನು ತಪ್ಪಿಸಲು ಸರ್ಕಾರ ಹೊಸ ವ್ಯವಸ್ಥೆಯೊಂದನ್ನು (New Mechanism) ಜಾರಿಗೆ ತರಲಿದೆ. ವ್ಯಕ್ತಿ ಸತ್ತ ಬಳಿಕ ಅತನ ಆಧಾರ್ ಕಾರ್ಡನ್ನು ನಿಷ್ಕ್ರಿಯಗೊಳಿಸುವ ಮೆಕ್ಯಾನಿಸಂ ಅನ್ನು ತರಲು ಯುಐಡಿಎಐ (UIDAI) ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (Registrar General of India) ತರುತ್ತಿವೆ. ಈ ಹೊಸ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಮರಣ ಪ್ರಮಾಣ ನೀಡಿದ ಬಳಿಕ ಆತನ ಆಧಾರ್ ಕಾರ್ಡನ್ನೂ ನಿಷ್ಕ್ರಿಯಗೊಳಿವ ಪ್ರಕ್ರಿಯೆ ಆರಂಭವಾಗುತ್ತದೆ.
ಸತ್ತ ವ್ಯಕ್ತಿಯ ಆಧಾರ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಹೇಗೆ ಆಗುತ್ತದೆ?
ಯಾರೇ ನಾಗರಿಕರು ಸತ್ತರೂ ಅದು ಜನನ ಮತ್ತು ಮರಣ ದಾಖಲೆಗಳಲ್ಲಿ ನೊಂದಾಯಿತವಾಗಬೇಕು. ಹೀಗೆ ಮರಣ ದಾಖಲಿಸುವಾಗ ಆ ವ್ಯಕ್ತಿಯ ಆಧಾರ್ ನಂಬರ್ ಅನ್ನೂ ಪಡೆದುಕೊಳ್ಳಲಾಗುತ್ತದೆ. ಮರಣ ಪ್ರಮಾಣ ಪತ್ರ ನೀಡುವಾಗ ಆ ವ್ಯಕ್ತಿಯ ಕುಟುಂಬದ ಅನುಮತಿ ಪಡೆದು ಆಧಾರ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಇದು ಸದ್ಯ ಜಾರಿಗೆ ಬರಲಿರುವ ಹೊಸ ವ್ಯವಸ್ಥೆಯಾಗಿದೆ.
ಇದನ್ನೂ ಓದಿ: Mortgage vs Home Loan: ಮನೆ ಕಟ್ಟಲು ಅಥವಾ ಕೊಳ್ಳಲು ಮಾರ್ಟ್ಗೇಜ್ ಲೋನ್ಗೆ ಅರ್ಜಿ ಸಲ್ಲಿಸುವುದು ಬೇಡ; ಏನು ಕಾರಣ?
ಇಂಥದ್ದೊಂದು ವ್ಯವಸ್ಥೆಗೆ ಮೊದಲು ಪ್ರಸ್ತಾವ ಇಟ್ಟಿದ್ದು ಭಾರತೀಯ ರಿಜಿಸ್ಟ್ರಾರ್ ಜನರಲ್. ಮರಣ ಪ್ರಮಾಣ ಪತ್ರ ನೀಡುವಾಗ ಆಧಾರ್ ದಾಖಲೆಗಳನ್ನು ಪಡೆಯುವ ಬಗ್ಗೆ ಯುಐಡಿಎಐ ಜೊತೆ ಸಮಾಲೋಚನೆ ನಡೆಸಲಾಗಿತ್ತು. ಇದೀಗ ಎರಡೂ ಸಂಸ್ಥೆಗಳು ಸೇರಿ ಸತ್ತ ವ್ಯಕ್ತಿಯ ಆಧಾರ್ ಕಾರ್ಡನ್ನು ಅಳಿಸಿಹಾಕುವ ಹೊಸ ವ್ಯವಸ್ಥೆ ಜಾರಿಗೆ ತರುತ್ತಿವೆ.
ಜೂನ್ 14ರವರೆಗೆ ಉಚಿತವಾಗಿ ಆಧಾರ್ ಅಪ್ಡೇಟ್ಗೆ ಅವಕಾಶ
ಯಾವುದೇ ಶುಲ್ಕವಿಲ್ಲದೇ ಆಧಾರ್ ಕಾರ್ಡ್ಗೆ ದಾಖಲೆಗಳನ್ನು ಸೇರಿಸಲು ಜೂನ್ 14ರವರೆಗೂ ಅವಕಾಶ ಕೊಡಲಾಗಿದೆ. ಈ ಉಚಿತ ಸೇವೆ ಆಧಾರ್ ಪೋರ್ಟಲ್ನಲ್ಲಿ ಇದೆ. ಈ ಮುಂಚೆ ಆಧಾರ್ ಡಾಕ್ಯುಮೆಂಟ್ ಅಪ್ಡೇಶನ್ಗೆ 25 ರುಪಾಯಿ ಶುಲ್ಕ ಪಡೆಯಲಾಗುತ್ತಿತ್ತು.
ಇದನ್ನೂ ಓದಿ: Aadhaar-PAN Linking: ಡೆಡ್ಲೈನ್ಗೆ ಕೆಲವೇ ದಿನ ಬಾಕಿ; ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಆಧಾರ್ ಕಾರ್ಡ್ದಾರರು ಪ್ರತೀ 10 ವರ್ಷಗಳಿಗೊಮ್ಮೆ ತಮ್ಮ ದಾಖಲೆಗಳನ್ನು ನವೀಕರಿಸಬೇಕು ಎಂದು ಕೇಂದ್ರ ಸರ್ಕಾರ ಕೆಲ ವರ್ಷಗಳ ಹಿಂದೆ ಸೂಚಿಸಿತ್ತು. ಇದಕ್ಕಾಗಿ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಸಲ್ಲಿಸಬೇಕು. ಇವುಗಳನ್ನು ಯಾವುದೇ ಶುಲ್ಕ ಇಲ್ಲದೇ ಆಧಾರ್ ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಬಹುದು. ಜೂನ್ 14ರ ನಂತರ ಶುಲ್ಕ ಪಾವತಿಸಿ ಡಾಕ್ಯುಮೆಂಟ್ ಅಪ್ಡೇಟ್ ಮಾಡಬೇಕಾಗುತ್ತದೆ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:33 pm, Mon, 20 March 23