ಇನ್​ಸ್ಟಾ ರೀಲ್ಸ್… ಇದು ಸುಮ್ಮನೆ ಟೈಮ್ ಪಾಸ್ ಅಲ್ಲ, ಹಣ ಹೋಗೋದೇ ಗೊತ್ತಾಗಲ್ಲ

How Instagram reels can make you spend money: ಇನ್​ಸ್ಟಾ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಇತ್ಯಾದಿ ಕಿರು ವಿಡಿಯೋ ಪ್ಲಾಟ್​​ಫಾರ್ಮ್​ಗಳಿಗೆ ಜನರು ಅಡಿಕ್ಟ್ ಆಗುತ್ತಾರೆ. ಡೋಪಮೈನ್ ಪರಿಣಾಮ ಇದು. ಅದೇನೇ ಇರಲಿ, ಅಮೇಜಾನ್​ನಂತಹ ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಿಗೆ ಅಡಿಕ್ಟ್ ಆದವರು ಶಾಪಿಂಗ್ ಮೇಲೆ ಶಾಪಿಂಗ್ ಮಾಡುವುದುಂಟು. ಇನ್​ಸ್ಟಾ ವಿಡಿಯೋಗಳಿಗೆ ದಾಸರಾದವರೂ ಕೂಡ ತಮಗೆ ಅರಿವಿಲ್ಲದೇ ಶಾಪಿಂಗ್ ಮಾಡುತ್ತಿರುತ್ತಾರೆ.

ಇನ್​ಸ್ಟಾ ರೀಲ್ಸ್... ಇದು ಸುಮ್ಮನೆ ಟೈಮ್ ಪಾಸ್ ಅಲ್ಲ, ಹಣ ಹೋಗೋದೇ ಗೊತ್ತಾಗಲ್ಲ
ಇನ್​ಸ್ಟಾಗ್ರಾಮ್

Updated on: Oct 29, 2025 | 6:06 PM

ಮೊಬೈಲ್ ಮತ್ತು ಟೈಮ್ ಎರಡೂ ಇದ್ದುಬಿಟ್ಟರೆ ಹೆಚ್ಚಿನ ಜನರು ಇನ್​ಸ್ಟಾ ರೀಲ್ಸ್​ಗೆ (Instagram reels) ಅಡಿಕ್ಟ್ ಆಗಿಬಿಡುವುದುಂಟು. ಕೆಲವೇ ಕ್ಷಣಗಳ ವಿಡಿಯೋ ತುಣುಕುಗಳನ್ನು ನೋಡುವುದೇ ಆನಂದ. ಆಕರ್ಷಕ ಸೌಂಡ್, ಆಕರ್ಷಕ ಬಣ್ಣ, ಗ್ರಾಫಿಕ್ಸ್ ಇತ್ಯಾದಿ ಇರುವ ರೀಲ್ಸ್ ಅನ್ನು ಒಂದಾದ ಮೇಲೊಂದರಂತೆ ಸ್ಕ್ರೋಲ್ ಮಾಡಿಕೊಂಡು ಹೋಗುತ್ತಿದ್ದರೆ ಹೊತ್ತೇ ಹೋಗುವುದು ಗೊತ್ತಾಗಲ್ಲ. ಇನ್ನೂ ನೀವು ಮೈಮರೆತಿದ್ದರೆ ನಿಮ್ಮ ವ್ಯಾಲಟ್​ನಿಂದ ಹಣ ಹೋಗೋದೂ ಕೂಡ ನಿಮಗೆ ಗೊತ್ತಾಗಲ್ಲ.

ಬಹಳ ಜನರು ಅಮೇಜಾನ್, ಫ್ಲಿಪ್​ಕಾರ್ಟ್ ಇತ್ಯಾದಿ ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳನ್ನು ಹಾಗೇ ಸುಮ್ಮನೆ ಕುತೂಹಲಕ್ಕೆ ಸ್ಕ್ರೋಲ್ ಮಾಡುತ್ತಾರೆ. ಅವರಿಗೇ ಗೊತ್ತಿಲ್ಲದಂತೆ ನಾನಾ ರೀತಿಯ ಉತ್ಪನ್ನಗಳು ಅವರನ್ನು ಆಕರ್ಷಿಸುತ್ತವೆ. ಅದು ಬೇಕು, ಇದು ಬೇಕು ಎಂದೆನಿಸಿ ಒಂದಷ್ಟು ಬೇಡದ ಉತ್ಪನ್ನಗಳನ್ನು ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವುದುಂಟು. ಇಂಥದ್ದೇ ಎಫೆಕ್ಟ್ ಇನ್​ಸ್ಟಾ ರೀಲ್ಸ್​ನದ್ದು…

ಇದನ್ನೂ ಓದಿ: ಪಿಎಫ್​ನ ಪೆನ್ಷನ್ ಸ್ಕೀಮ್​ಗೆ ಅರ್ಹರಾಗಲು 10 ವರ್ಷ ಸರ್ವಿಸ್ ಬೇಕು; ಇಲ್ಲದಿದ್ದರೆ ಹಣ ಏನಾಗುತ್ತೆ?

ನೀವು ಇನ್​ಸ್ಟಾಗ್ರಾಮ್​ನಲ್ಲಿ ಯಾವುದಾದರೂ ಫನ್ನಿ ವಿಡಿಯೋಗಳನ್ನೋ, ಆಕ್ಸಿಡೆಂಟ್ ವಿಡಿಯೋಗಳನ್ನೋ, ಇನ್ನೇನಾದರೂ ವೈರಲ್ ವಿಡಿಯೋಗಳನ್ನು ನೋಡಲು ಹೋಗುತ್ತೀರಿ. ಹಾಗೆ ನೋಡುತ್ತಾ ನೋಡುತ್ತಾ ಇನ್​ಫ್ಲುಯೆನ್ಸರ್​ಗಳೆಂದು ಕರೆಯಲಾಗುವ ವ್ಯಕ್ತಿಗಳ ವಿಡಿಯೋಗಳು ನುಸುಳಲು ಆರಂಭಿಸುತ್ತವೆ. ಇವರು ನಮ್ಮ ನಿಮ್ಮ ಸುತ್ತಲಿನ ಇರುವ ಸಾಮಾನ್ಯರಂತೆಯೇ ಭಾಸವಾಗುತ್ತಾರೆ. ಇವರು ತಾವು ಖರೀದಿಸಿದ ಉತ್ಪನ್ನಗಳ ಬಗ್ಗೆ ರಿವ್ಯೂ ಕೊಡುತ್ತಾ ಹೋಗುತ್ತಾರೆ.

ತಾನು ಈ ಹೊಸ ವಸ್ತು ಖರೀದಿಸಿ ಮನೆಗೆ ತಂದೆ. ಇದನ್ನು ಬಳಸುತ್ತಾ ಇದ್ದೀನಿ. ನೀವೂ ಒಮ್ಮೆ ಪ್ರಯತ್ನಿಸಿ ನೋಡಿ ಎಂದು ಈ ಇನ್​ಫ್ಲುಯನ್ಸರ್​ಗಳು ನಿಧಾನವಾಗಿ ನಿಮ್ಮನ್ನು ಇನ್​ಫ್ಲುಯನ್ಸ್ ಮಾಡಲು ಆರಂಭಿಸುತ್ತಾರೆ. ಆಕೆ ತಾನು ತಂದ ಫೇಸ್​ವಾಶ್ ಅಥವಾ ಆಕ್ನೆ ಕ್ರೀಮ್ (acne) ಅನ್ನು ಹಚ್ಚಿಕೊಂಡು ಮಿರಮಿರ ಮಿಂಚುವುದನ್ನು ನೋಡಿ ನೀವೂ ಕೂಡ ಆ ಹೊಸ ಪ್ರಾಡಕ್ಟ್ ಅನ್ನು ಯಾಕೆ ಪ್ರಯತ್ನಿಸಬಾರದು ಎಂದನಿಸಬಹುದು. ಅಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಆ ಉತ್ಪನ್ನವನ್ನು ಸರವೇಗದಲ್ಲಿ ‘ಕಾರ್ಟ್’ಗೆ ಸೇರಿಸಿಬಿಟ್ಟಿರುತ್ತೀರಿ.

ಇದನ್ನೂ ಓದಿ: ಆಸ್ತಿ ಇದ್ದೂ ಪರದಾಡುತ್ತಿದ್ದೀರಾ? ಮನೆ ಮಾರದೆಯೇ ಮಾಸಿಕ ಆದಾಯ ಸೃಷ್ಟಿಸಿ… ಇದು ರಿವರ್ಸ್ ಮಾರ್ಟ್​ಗೇಜ್ ಸ್ಕೀಮ್

ನೀವು ದಿನವೂ ಇನ್​ಸ್ಟಾ ರೀಲ್ಸ್ ನೋಡುತ್ತಿರುತ್ತೀರಾದರೆ ಈ ರೀತಿ ದಿನಕ್ಕೆ ಅದೆಷ್ಟು ಬಾರಿ ಹೊಸ ಹೊಸ ಉತ್ಪನ್ನಗಳು ನಿಮ್ಮ ಚಿತ್ತಾಕರ್ಷಿಸಿರಬಾರದು? ಅದೆಷ್ಟು ಉತ್ಪನ್ನಗಳನ್ನು ಕಾರ್ಟ್​ಗೆ ಸೇರಿಸಿರುತ್ತೀರಿ. ದಿನಕ್ಕೆ ಒಂದು ಬೇಡ, ವಾರಕ್ಕೆ ಎರಡೋ ಮೂರೋ ನೀವು ಶಾಪಿಂಗ್ ಮಾಡಿದರೆ ಒಂದು ತಿಂಗಳಲ್ಲಿ 8-12 ಸಾವಿರ ರೂ ಖರ್ಚಾಗಿ ಹೋಗಿರುತ್ತದೆ. ರೀಲ್ಸ್ ನೋಡಿ ತಂದ ಸಾಮಾನು ಕೆಲಸ ಮಾಡುತ್ತೋ ಇಲ್ಲವೋ, ಮನಸ್ಸು ಮಾತ್ರ ಇನ್ನಷ್ಟು ರೀಲ್​ಗಳಿಗೆ ತಹಿತಹಿಸುತ್ತಾ ಇರುತ್ತದೆ, ಮತ್ತೆ ಹೊಸ ಹೊಸ ಉತ್ಪನ್ನಗಳು ನಿಮ್ಮ ಕಣ್ಕುಕ್ಕಲು ಸಿದ್ಧವಾಗಿರುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ