SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?

|

Updated on: Jan 04, 2024 | 4:04 PM

Mutual Fund SIP: ಎಸ್​ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್. ಇದು ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಇರುವ ಒಂದು ಆಯ್ಕೆ. ಮ್ಯುಚುವಲ್ ಫಂಡ್​ನ ಎಸ್​ಐಪಿಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡಬಹುದು. ಹೂಡಿಕೆ ಅವಧಿ ಹೆಚ್ಚಾದಷ್ಟೂ ರಿಟರ್ನ್ಸ್ ಹೆಚ್ಚುತ್ತದೆ. ದಿನಕ್ಕೆ 200 ರೂನಂತೆ 25 ವರ್ಷ ಹೂಡಿಕೆ ಮಾಡಿ, ಎಸ್​ಐಪಿ ಶೇ. 12ರ ದರದಲ್ಲಿ ಬೆಳೆದರೆ ಕೋಟಿ ರೂ ಮೊತ್ತವಾಗುತ್ತದೆ.

SIP Magic: ದಿನಕ್ಕೆ 200 ರೂನಂತೆ ಎಸ್​ಐಪಿಯಲ್ಲಿ ಹೂಡಿಕೆ ಮಾಡಿದರೆ 25 ವರ್ಷಕ್ಕೆ ಎಷ್ಟು ಸಂಪಾದನೆ ಆಗಬಹುದು?
ಹೂಡಿಕೆ
Follow us on

ಎಸ್​ಐಪಿ ಸೌಲಭ್ಯದಿಂದಾಗಿ ಮ್ಯುಚುವಲ್ ಫಂಡ್ ಜನಪ್ರಿಯತೆ ಇನ್ನಷ್ಟು ಹೆಚ್ಚಿದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ಗಳು (SIP- Systematic Investment Plan) ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಮಂದಿಯಿಂದ ಹೂಡಿಕೆಗಳನ್ನು ಮ್ಯುಚುವಲ್ ಫಂಡ್​ಗಳತ್ತ ಆಕರ್ಷಿಸುತ್ತಿವೆ. ಬ್ಯಾಂಕ್​ನ ಆರ್​​ಡಿ ರೀತಿಯಲ್ಲಿ ಎಸ್​ಐಪಿಯಲ್ಲಿ ತಿಂಗಳಿಗೆ ನಿರ್ದಿಷ್ಟ ಮೊತ್ತವನ್ನು ಕಟ್ಟುತ್ತಾ ಹೋಗಬಹುದು. ಹೂಡಿಕೆ ಅವಧಿ ದೀರ್ಘವಾದಷ್ಟೂ ಹಣ ಡಬಲ್ ಆಗುವ ಅವಧಿ ಕಡಿಮೆಗೊಳ್ಳುತ್ತಾ ಹೋಗುತ್ತದೆ. 25 ವರ್ಷಗಳ ಕಾಲ ಎಸ್​ಐಪಿಯಲ್ಲಿ ನಿರಂತರ ಹೂಡಿಕೆ ಮಾಡಿದರೆ ಅಗಾಧ ರಿಟರ್ನ್ಸ್ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಎಸ್​ಐಪಿಯಿಂದ ಏನು ಲಾಭ?

ಕಳೆದ ಕೆಲ ವರ್ಷಗಳಿಂದ ಮ್ಯುಚುವಲ್ ಫಂಡ್​ಗಳು ಸರಾಸರಿಯಾಗಿ ವಾರ್ಷಿಕವಾಗಿ ಶೇ 12ರಷ್ಟು ಬೆಳವಣಿಗೆ ತೋರಿವೆ.

ಒಮ್ಮೆಗೇ ಹಣ ತೊಡಗಿಸುವ ಬದಲು ಎಸ್​ಐಪಿಯಲ್ಲಿ ನಿಯಮಿತವಾಗಿ ಹೂಡಿಕೆ ಮಾಡಬಹುದು. ಇದರಿಂದ ಸಂಬಳದ ಹಣವನ್ನು ಉಳಿಸಲು ಪ್ರೇರಣೆಯೂ ಸಿಗುತ್ತದೆ.

ಇದನ್ನೂ ಓದಿ: FD Rates: ಪೋಸ್ಟ್ ಆಫೀಸ್ vs ಎಸ್​ಬಿಐ; ಎಲ್ಲಿ ಠೇವಣಿ ಇಟ್ಟರೆ ಹೆಚ್ಚು ಬಡ್ಡಿ ಸಿಗುತ್ತದೆ? ಇಲ್ಲಿದೆ ಒಂದು ಹೋಲಿಕೆ

ಹೂಡಿಕೆ ನಿಯಮಿತವಾಗಿ ಜಮೆಗೊಳ್ಳುತ್ತಾ ಹೋಗುತ್ತಿರುವಂತೆಯೇ ಮತ್ತು ಹೂಡಿಕೆ ಅವಧಿ ಹೆಚ್ಚುತ್ತಿರುವಂತೆಯೇ ಹಣದ ಕಾಂಪೌಂಡಿಂಗ್ ಗುಣದ ಪರಿಣಾಮವಾಗಿ ಹೂಡಿಕೆ ಮೊತ್ತ ಬೇಗಬೇಗನೇ ದ್ವಿಗುಣಗೊಳ್ಳುತ್ತಾ ಹೋಗುತ್ತದೆ.

ದಿನಕ್ಕೆ 200 ರೂನಂತೆ ಹೂಡಿಕೆ ಮಾಡಿದರೆ ಎಷ್ಟಾಗುತ್ತೆ ರಿಟರ್ನ್?

ನೀವು ದಿನಕ್ಕೆ 200 ರೂ ಹಣವನ್ನು ಉಳಿಸಿ ಎಸ್​ಐಪಿಯಲ್ಲಿ ಹೂಡಿಕೆ ಮಾಡಲು ನಿರ್ಧರಿಸುತ್ತೀರಿ. ಅಂದರೆ ತಿಂಗಳಿಗೆ 6,000 ರೂ ಹಣವನ್ನು ಎಸ್​ಐಪಿಯಲ್ಲಿ ತೊಡಗಿಸುತ್ತೀರಿ. ನಿರಂತರವಾಗಿ ನೀವು 25 ವರ್ಷಗಳವರೆಗೆ ಇಷ್ಟೇ ಹಣವನ್ನು ಹೂಡಿಕೆ ಮಾಡುತ್ತಾ ಹೋದರೆ, ನೀವು ಕೋಟ್ಯಾಧೀಶ್ವರ ಆಗಬಹುದು. ಆದರೆ, ಮ್ಯುಚುವಲ್ ಫಂಡ್ ಶೇ. 12ರ ದರದಲ್ಲಿ ಬೆಳೆದರೆ ಇದು ಸಾಧ್ಯವಾಗುತ್ತದೆ. ನಿಮ್ಮ ತಿಂಗಳ 6 ಸಾವಿರ ರೂ ಹಣವು 25 ವರ್ಷದ ಬಳಿಕ 18 ಲಕ್ಷ ರೂ ಅಗಿರುತ್ತದೆ. ಅದಕ್ಕೆ ಹೆಚ್ಚುವರಿಯಾಗಿ 95 ಲಕ್ಷ ಸೇರ್ಪಡೆಯಾಗಿ ನಿಮ್ಮ ಹೂಡಿಕೆ ಮೊತ್ತ 1.13 ಕೋಟಿ ರೂ ಆಗುತ್ತದೆ.

ಇದನ್ನೂ ಓದಿ: ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ

ಇನ್ನೂ 5 ವರ್ಷ ನಿಮ್ಮ ಹೂಡಿಕೆ ಮುಂದುವರಿಸಿದರೆ ಮೊತ್ತವು 2.11 ಕೋಟಿ ರೂ ಆಗುತ್ತದೆ. ಮತ್ತಷ್ಟು 5 ವರ್ಷ ಹೀಗೇ ಮುಂದುವರಿಸಿದರೆ ನಿಮ್ಮ ಹಣ 3.89 ಕೋಟಿ ರೂ ಆಗಿರುತ್ತದೆ. ಐದು ವರ್ಷಕ್ಕೆಲ್ಲಾ ಹಣ ಡಬಲ್ ಆಗುತ್ತಾ ಹೋಗತೊಡಗುತ್ತದೆ. ಇದು ಕಾಂಪೌಂಡಿಂಗ್ ಎಫೆಕ್ಟ್.

ಒಂದು ವೇಳೆ ಮ್ಯುಚುವಲ್ ಫಂಡ್ ಶೇ. 10ರ ದರದಲ್ಲಿ ಬೆಳೆಯಿತು ಎಂದಿಟ್ಟುಕೊಳ್ಳೋಣ. ಆಗ ನಿಮ್ಮ ಮಾಸಿಕ 6,000 ರೂ ಹೂಡಿಕೆಯಿಂದ ಕೋಟಿ ಮೈಲಿಗಲ್ಲು ತಲುಪಲು 28 ವರ್ಷ ಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ