ULIP, ಇದು ವಿಮೆಯಾ, ಹೂಡಿಕೆಯಾ? ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಬಗ್ಗೆ ತಿಳಿಯಿರಿ

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Aug 20, 2023 | 6:54 PM

Unit Linked Insurance Plan: ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಯನ್ನು ಮಧ್ಯದಲ್ಲೇ ನಿಲ್ಲಿಸಲು ಸಾಧ್ಯವಾ? ಲಾಕ್ ಇನ್ ಪೀರಿಯಡ್​ಗೆ ಮುನ್ನವೇ ಪ್ಲಾನ್ ಹಿಂಪಡೆದರೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ, ಇಲ್ಲಿದೆ ವಿವರ...

ULIP, ಇದು ವಿಮೆಯಾ, ಹೂಡಿಕೆಯಾ? ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪ್ಲಾನ್ ಬಗ್ಗೆ ತಿಳಿಯಿರಿ
ಹೂಡಿಕೆ
Follow us on

ಯೂನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲಾನ್ ಅಥವಾ ULIP ಒಂದು ಇನ್ಶುರೆನ್ಸ್ ಕಮ್ ಇನ್ವೆಸ್ಟ್​ಮೆಂಟ್​ನ ಒಂದು ಭಾಗವಾಗಿದೆ. ಅಂದ್ರೆ ಇದರಲ್ಲಿ ವಿಮೆ ಹಾಗೂ ಹೂಡಿಕೆ ಎರಡೂ ಸೇರಿಕೊಂಡಿವೆ. ವಿಮಾ ಕಂಪನಿಗಳು ವಿಮೆ ನೀಡುವ ಜೊತೆಗೆ ಹೂಡಿಕೆದಾರನಿಗೆ ಹೂಡಿಕೆ ಮಾಡಲು ಅವಕಾಶ ನೀಡುತ್ತೆ. ಪ್ರೀಮಿಯಮ್​ನ ಒಂದು ಭಾಗ ಲೈಫ್ ಕವರ್​ಗೆ ಪಾವತಿಯಾದರೆ, ಉಳಿದ ಭಾಗ ಡೆಟ್ ಅಥವಾ ಈಕ್ವಿಟಿ ಅಸೆಟ್​ನಲ್ಲಿ ಹೂಡಿಕೆ ಮಾಡುವ ಮೂಲಕ ರಿಟರ್ನ್ಸ್ ಸೃಷ್ಟಿಸುತ್ತದೆ.

IRDAI ಪ್ರಕಾರ ಪ್ರತಿ ULIPಗೆ ಲಾಕ್ ಇನ್ ಅವಧಿ 5 ವರ್ಷಗಳು. ಇದು ಎಷ್ಟು ರಿಟರ್ನ್ಸ್ ಸೃಷ್ಟಿಸುತ್ತದೆ ಎಂಬುದು ಮಾರುಕಟ್ಟೆಯ ಏರಿಳಿತಗಳ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ, 5 ವರ್ಷ ಲಾಕ್ ಇನ್ ಅವಧಿಗೆ ಮೊದಲೇ ULIP ಕ್ಲೋಸ್ ಮಾಡಿದ್ರೆ ಆಗ ಹೂಡಿಕೆದಾರ 5 ವರ್ಷ ಲಾಕ್​ಇನ್ ಅವಧಿ ಮುಗಿದ ನಂತರವಷ್ಟೇ ಹಣ ಮರು ಪಾವತಿ ಪಡೆಯುತ್ತಾರೆ. ಪ್ರೀಮಿಯಮ್ ಪಾವತಿ ನಿಲ್ಲಿಸಿದ ಕೂಡಲೇ ಕಂಪನಿ ಡಿಸ್​ಕಂಟಿನ್ಯೂಟಿ ಶುಲ್ಕ ವಿಧಿಸುತ್ತದೆ. ಜೊತೆಗೆ ಕಂಪನಿ ಮಾರ್ಟಾಲಿಟಿ ಫೀಸ್ ಕೂಡ ಹಾಕುತ್ತೆ. ಹಾಗೂ ಉಳಿದ ಮೊತ್ತವನ್ನು ಡಿಸ್​ಕಂಟಿನ್ಯೂಡ್ ಪಾಲಿಸಿ ಫಂಡ್​ನಲ್ಲಿ ಠೇವಣಿ ಇಡುತ್ತೆ. ಈ ಠೇವಣಿಯ ಮೇಲೆ ಫಂಡ್ ಮ್ಯಾನೇಜ್​ಮೆಂಟ್ ಶುಲ್ಕ ವಿಧಿಸಲಾಗುತ್ತದೆ. ಅಂತಿಮವಾಗಿ ಕಂಪನಿ ಸುಮಾರು ಶೇಕಡಾ 4ರಷ್ಟು ಕನಿಷ್ಠ ಖಾತರಿ ರಿಟರ್ನ್ಸ್ ನೀಡುತ್ತದೆ.

ಉದಾಹರಣೆಗೆ, ಒಬ್ಬ ವ್ಯಕ್ತಿ ಹಣಕಾಸು ಸಂಕಷ್ಟ ಅಥವಾ ಮತ್ಯಾವುದೋ ಕಾರಣಕ್ಕೆ ULIP ಮುಂದುವರಿಸಲು ಸಾಧ್ಯವಾಗುವುದಿಲ್ಲ. ಕೇವಲ 3 ವರ್ಷ ಮಾತ್ರ ಪಾವತಿಸಿರುತ್ತಾರೆ. 10 ವರ್ಷಗಳವರೆಗೆ ಕಟ್ಟಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಮಧ್ಯದಲ್ಲೇ ನಿಲ್ಲಿಸಲು ನಿರ್ಧರಿಸುತ್ತಾರೆ. ಆದರೆ, ULIPನಲ್ಲಿ ಲಾಕಿನ್ ಪೀರಿಯಡ್ 5 ವರ್ಷ ಇದೆ. ಅಂದರೆ ಐದು ವರ್ಷದವರೆಗೆ ಪಾಲಿಸಿ ಹಿಂಪಡೆಯಲು ಸಾಧ್ಯವಿಲ್ಲ. ಆದರೆ, ಈ ವ್ಯಕ್ತಿ ಒಂದು ವೇಳೆ ULIPನಿಂದ ಹೊರಬರುವುದಾದರೆ ಎಷ್ಟು ದಂಡ ಕಟ್ಟಬೇಕಾಗಬಹುದು?

ಇದನ್ನೂ ಓದಿ: No Cost EMI ಬೋರ್ಡ್ ನೋಡಿ ಮಾರುಹೋಗದಿರಿ; ಅದರ ಅಸಲಿ ಸತ್ಯ ತಿಳಿಯಿರಿ

ULIP ಪ್ರೀಮಿಯಮ್, 3 ಭಾಗಗಳನ್ನು ಒಳಗೊಂಡಿದೆ. ಮಾರ್ಟಾಲಿಟಿ ಚಾರ್ಜಸ್, ಜನರಲ್ ಎಕ್ಸ್​ಪೆನ್ಸಸ್ ಹಾಗೂ ಇನ್ವೆಸ್ಟ್​ಮೆಂಟ್. ಮಾರ್ಟಾಲಿಟಿ ಚಾರ್ಜಸ್ ವಿಮೆಗೆ ಸೇರುತ್ತದೆ. ಕಂಪನಿ ಹೂಡಿಕೆಯ ವೆಚ್ಚ ಜನರಲ್ ಎಕ್ಸ್​ಪೆನ್ಸಸ್ ಭಾಗಕ್ಕೆ ಸೇರುತ್ತದೆ. ಉಳಿದ ಮೊತ್ತ ಇನ್ವೆಸ್ಟ್​ಮೆಂಟ್​ಗೆ ಸೇರುತ್ತೆ. ಆ ವ್ಯಕ್ತಿ ಬಳಿ, 10 ವರ್ಷದ ULIP ಇತ್ತು. ಆತ, ಪ್ರತಿ ವರ್ಷ 25 ಸಾವಿರ ರೂಪಾಯಿ ಪ್ರೀಮಿಯಮ್ ಪಾವತಿಸುತ್ತಿದ್ದ. ಈ 25 ಸಾವಿರ ಪ್ರೀಮಿಯಮ್​ನಲ್ಲಿ ಮಾರ್ಟಾಲಿಟಿ ಚಾರ್ಜಸ್ 2,000 ದಿಂದ 2,500 ರೂಪಾಯಿ ಆರಂಭಿಕ ವರ್ಷದಲ್ಲಿತ್ತು. ಇದರಲ್ಲಿ ಸುಮಾರು 1,800 ರೂಪಾಯಿ ಎಕ್ಸ್​ಪೆನ್ಸಸ್ ಭಾಗಕ್ಕೆ ಮತ್ತು ಉಳಿದದ್ದು ಹೂಡಿಕೆಯಾಗುತ್ತಿತ್ತು. ಈಕ್ವಿಟಿ ಅಥವಾ ಡೆಟ್​ನಲ್ಲಿ ಯೂನಿಟ್​ಗಳು ಆತನ ಖಾತೆಗೆ ಸೇರ್ಪಡೆಯಾಗುತ್ತಿತ್ತು. ಮಾರ್ಟಾಲಿಟಿ ಚಾರ್ಜಸ್ ಒಂದೊಂದು ವರ್ಷ ಕಳೆದಂತೆ ಇಳಿಕೆಯಾಗುತ್ತದೆ.

ಇನ್ನು ಯೋಜನೆಯಲ್ಲಿ ಜೀವವಿಮೆ, ಪ್ರೀಮಿಯಮ್ ಮೊತ್ತದ 10 ಪಟ್ಟು ಸೇರಿರುತ್ತದೆ. ಪ್ರೀಮಿಯಮ್ ಮೊತ್ತ 25 ಸಾವಿರ ರೂಪಾಯಿ ಇದ್ದಲ್ಲಿ, ಜೀವವಿಮೆ 2.5 ಲಕ್ಷ ರೂಪಾಯಿಗಳಾಗಿರುತ್ತೆ. 10 ವರ್ಷಗಳ ಅವಧಿಯ ಅಂತ್ಯದಲ್ಲಿ ಸಂಗ್ರಹವಾಗಿರುವ ಎಲ್ಲ ಹಣವನ್ನು ಕೂಡಿ ಆ ವ್ಯಕ್ತಿ, 5 ರಿಂದ 6 ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುತ್ತಾರೆ. ನೀವು ಕೇವಲ 3 ಪ್ರೀಮಿಯಮ್​ಗಳು ಅಂದರೆ, 75 ಸಾವಿರ ರೂಪಾಯಿ ಪಾವತಿಸಿದ ನಂತರ ಯೋಜನೆ ಸ್ಥಗಿತಗೊಳಿಸಿದ್ರೆ ಮಾರ್ಟಾಲಿಟಿ ಚಾರ್ಜಸ್ , ಫಂಡ್ ಮ್ಯಾನೇಜ್ ಮೆಂಟ್ ಕಾಸ್ಟ್ ಮತ್ತು ಡಿಸ್​ಕಂಟಿನ್ಯೂಟಿ ಚಾರ್ಜಸ್ ಅನ್ನು ಕಡಿತಗೊಳಿಸಿ, ಸುಮಾರು 62 ರಿಂದ 63 ಸಾವಿರ ರೂಪಾಯಿಗಳನ್ನು ಡಿಸ್​ಕಂಟಿನ್ಯೂಡ್ ಪಾಲಿಸಿ ಫಂಡ್​ನಲ್ಲಿ ಜಮೆ ಮಾಡಲಾಗುತ್ತೆ. ಹೀಗಾಗಿ ಲಾಕ್​ಇನ್ ಅವಧಿ ಕೊನೆಗೊಂಡ ನಂತರ ನೀವು ಇಷ್ಟು ಮೊತ್ತವನ್ನ ಮಾತ್ರ ಹಿಂಪಡೆಯಲು ಸಾಧ್ಯವಿರುತ್ತೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ನೇರವಾಗಿ ಹೂಡಿಕೆ ಮಾಡಲು ಭಯವಾ? ನಿಮಗಾಗಿ ಇಗೋ ಇದೆ ಈಕ್ವಿಟ್ ಸೇವಿಂಗ್ಸ್ ಫಂಡ್

ಸಿಎಫ್​ಪಿ ಸಂಸ್ಥೆಯ ನಾರಾಯಣ ಕೃಷ್ಣಮೂರ್ತಿ ಅವರ ಪ್ರಕಾರ, ಒಂದು ವೇಳೆ ನೀವು ULIP ಸ್ಥಗಿತಗೊಳಿಸಲು ಇಚ್ಛಿಸಿದರೆ ಆಗ ಲಾಕ್ ಇನ್ ನಂತರವೋ ಅಥವಾ ಯೋಜನೆಯ ಆರಂಭದ ದಿನಗಳಲ್ಲೋ ನಿಲ್ಲಿಸಿ. ಏಕೆಂದರೆ ನೀವು ಲಾಕ್ ಇನ್​ಗೆ ಮೊದಲೇ ULIP ರಿಟರ್ನ್ ಮಾಡಿದರೆ ನೀವು ಪಡೆದಿರುವ ತೆರಿಗೆ ವಿನಾಯಿತಿಗಳನ್ನು ಸಹ ಹಿಂತಿರುಗಿಸಬೇಕಾಗುತ್ತದೆ.

ULIP ನಂತಹ ಪ್ಲಾನ್ ನಲ್ಲಿ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಸಂಶೋಧನೆ ಮಾಡಿ. ನೀವು ಇಂತಹ ಯೋಜನೆಗಳನ್ನು ಯಾವುದೇ ಸಂದರ್ಭದಲ್ಲಿ ಕೆಲವೊಂದು ಶುಲ್ಕವನ್ನು ಪಾವತಿಸಿದ ನಂತರ ನಿಲ್ಲಿಸಬಹುದು. ಅನಗತ್ಯವಾಗಿ ಕ್ಯಾನ್ಸಲೇಶನ್ ಶುಲ್ಕ ಕಟ್ಟಿದಂತಾಗುತ್ತದೆ. ಇದರ ಬದಲು ಇದೇ ಹಣವನ್ನು ಬೇರೆಡೆ ಹೂಡಿಕೆ ಮಾಡಿ ಹೆಚ್ಚಿನ ರಿಟರ್ನ್ಸ್ ಪಡೆಯಬಹುದಿತ್ತು. ಇಂಥ ಪ್ಲಾನ್​ಗಳನ್ನು ಪಡೆಯುವ ಮುನ್ನ ನಿಮ್ಮ ಈಗಿನ ಹಣಕಾಸು ಸ್ಥಿತಿ, ಭವಿಷ್ಯದ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು.

(ಕೃಪೆ: ಮನಿ9)

ಇನ್ನಷ್ಟು ಮನಿ9 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ