ನವದೆಹಲಿ, ಆಗಸ್ಟ್ 18: ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಅತಿದೊಡ್ಡ ಏಜೆಂಟ್ಗಳ ಬಳಗ ಹೊಂದಿದೆ. ಎಲ್ಐಸಿ ಇನ್ಷೂರೆನ್ಸ್ ಏಜೆಂಟ್ಗಳ ಸಂಖ್ಯೆ ದೇಶಾದ್ಯಂತ ಸುಮಾರು 14 ಲಕ್ಷ ಇದೆ. ಉದ್ಯೋಗಿಗಳನ್ನು ಸೇರಿಸಿದರೆ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಸಂಸ್ಥೆಗಳಲ್ಲಿ ಎಲ್ಐಸಿ ಒಂದು. ಇಲ್ಲಿ ಎಲ್ಐಸಿ ಏಜೆಂಟ್ಗಳಿಗೆ ನಿಶ್ಚಿತ ಸಂಬಳ ಎಂಬುದು ಇರುವುದಿಲ್ಲ. ಪ್ರತೀ ಏಜೆಂಟ್ಗಳೂ ಕೂಡ ಕಮಿಷನ್ ಆಧಾರದ ಮೇಲೆ ಆದಾಯ ಗಳಿಸುತ್ತಾರೆ. ಕರ್ನಾಟಕದಲ್ಲಿ ಒಟ್ಟು 81,674 ಎಲ್ಐಸಿ ಏಜೆಂಟ್ಗಳು ಇದ್ದು, ಇವರು ಗಳಿಸುವ ಆದಾಯ ತಿಂಗಳಿಗೆ ಸರಾಸರಿಯಾಗಿ 13,265 ರೂ ಎನ್ನಲಾಗಿದೆ.
ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್ನಲ್ಲಿ ಎಲ್ಐಸಿ ಏಜೆಂಟ್ ತಿಂಗಳಿಗೆ 20,446 ರೂ ಗಳಿಸುತ್ತಾರೆ. ಇದು ದೇಶದಲ್ಲೇ ಗರಿಷ್ಠ. ಹಿಮಾಚಲಪ್ರದೇಶದಲ್ಲಿ ಪ್ರತೀ ಏಜೆಂಟ್ನ ಸರಾಸರಿ ಗಳಿಕೆ 10,328 ರೂ. ಇದು ಕನಿಷ್ಠ.
ಉತ್ತರಪ್ರದೇಶದಲ್ಲಿ ಅತಿಹೆಚ್ಚು ಎಲ್ಐಸಿ ಏಜೆಂಟ್ಗಳಿದ್ದಾರೆ. 1.84 ಎಲ್ಐಸಿ ಏಜೆಂಟ್ಗಳ ಸರಾಸರಿ ಮಾಸಿಕ ಗಳಿಕೆ 11,887 ರೂ. ಇನ್ನು, ಮಹಾರಾಷ್ಟ್ರದಲ್ಲಿ ಇರುವ 1.61 ಲಕ್ಷ ಏಜೆಂಟ್ಗಳು ತಿಂಗಳಿಗೆ 14,931 ರೂ ದುಡಿಯುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇರುವ 1.20 ಲಕ್ಷ ಎಲ್ಐಸಿ ಏಜೆಂಟ್ಗಳ ಸರಾಸರಿ ಗಳಿಕೆ 13,512 ರೂ.
ಇದನ್ನೂ ಓದಿ: ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ
ಎಲ್ಐಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುವವರು ಕನಿಷ್ಠ ದ್ವಿತೀಯ ಪಿಯುಸಿ ಓದಿರಬೇಕು. ಐಆರ್ಡಿಎಐ ಪ್ರತೀ ವರ್ಷ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ನಿಮ್ಮ ಸ್ಥಳದ ಸಮೀಪ ಇರುವ ಎಲ್ಐಸಿ ಕಚೇರಿಯಲ್ಲಿ ಏಜೆಂಟ್ ಆಗಿ ಸೇರಲು ಅಲ್ಲಿನ ಬ್ರ್ಯಾಂಚ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ವಿಚಾರಿಸಬಬಹುದು. ಇಂಟರ್ವ್ಯೂನಲ್ಲಿ ನೀವು ಏಜೆಂಟ್ ಆಗಿ ಆಯ್ಕೆಯಾದ ಬಳಿಕ ನಾಲ್ಕು ದಿನಗಳ ತರಬೇತಿ ಇರುತ್ತದೆ.
ಇದನ್ನೂ ಓದಿ: ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ
ಎಲ್ಐಸಿ ಏಜೆಂಟ್ಗೆ ನಿರ್ದಿಷ್ಟ ಸಂಬಳ ಇರುವುದಿಲ್ಲ. ವರ್ಷಕ್ಕೆ ಇಷ್ಟು ಬಿಸಿನೆಸ್ ತರಬೇಕಾಗುತ್ತದೆ. ನೀವು ಮಾಡಿಸುವ ಎಲ್ಐಸಿ ಪಾಲಿಸಿಗಳ ಪ್ರೀಮಿಯಮ್ಗಳಿಂದ ನಿಮಗೆ ಕಮಿಷನ್ ಸಿಗುತ್ತದೆ. ಎರಡನೇ ಮತ್ತು ಮೂರನೇ ವರ್ಷದ ಪ್ರೀಮಿಯಮ್ಗಳಿಂದ ಶೇ. 7.5ರಷ್ಟು ಕಮಿಷನ್ ಸಿಗುತ್ತದೆ. ನಾಲ್ಕನೇ ವರ್ಷದಿಂದ ಪ್ರತೀ ಪ್ರೀಮಿಯಮ್ ಮೇಲೆ ಶೇ. 5ರಷ್ಟು ಕಮಿಷನ್ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ