AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ

toyotetsu's new unit in Bidadi: ಬೆಂಗಳೂರು ಸಮೀಪದ ಬಿಡದಿಯಲ್ಲಿ ಟೊಯೋಟೆಟ್ಸು ಇಂಡಿಯಾ ಕಂಪನಿಯ ನಾಲ್ಕನೇ ಘಟಕ ಸ್ಥಾಪನೆ ಸೇರಿದಂತೆ 20 ಯೋಜನೆಗಳಿಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ. ಈ 20 ಯೋಜನೆಗಳಿಂದ 2,280 ಕೋಟಿ ರೂ ಹೂಡಿಕೆಯಾಗಲಿದ್ದು, ಮೂರೂವರೆ ಸಾವಿರದಷ್ಟು ಉದ್ಯೋಗಗಳ ಸೃಷ್ಟಿಯಾಗಲಿದೆ. ಜೂನ್ ತಿಂಗಳಲ್ಲಿ ಸರ್ಕಾರ 64 ಯೋಜನೆಗಳಿಗೆ ಅನುಮೋದನೆ ನೀಡಿತ್ತು.

ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ
ಸಚಿವ ಎಂಬಿ ಪಾಟೀಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2024 | 12:06 PM

Share

ಬೆಂಗಳೂರು, ಆಗಸ್ಟ್ 18: ಬೆಂಗಳೂರು ರಾಮನಗರ ಗಡಿಭಾಗದಲ್ಲಿರುವ ಬಿಡದಿಯಲ್ಲಿ ಟೊಯೋಟೆಟ್ಸು ಇಂಡಿಯಾ ಆಟೊ ಪಾರ್ಟ್ಸ್ ಸಂಸ್ಥೆ ಹೊಸ ಘಟಕವೊಂದನ್ನು ಸ್ಥಾಪನೆ ಮಾಡಲಿದೆ. ಇದಕ್ಕೆ 450 ಕೋಟಿ ರೂ ಹೂಡಿಕೆ ಆಗಲಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ವರದಿ ಪ್ರಕಾರ ಸರ್ಕಾರ ಟೊಯೋಟೆಟ್ಸು ಘಟಕವೂ ಸೇರಿದಂತೆ 20 ಯೋಜನೆಗಳಿಗೆ ಅನುಮೋದನೆ ನೀಡಿದೆ. ನಿನ್ನೆ ಶನಿವಾರ ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ರಾಜ್ಯ ಏಕ ಗವಾಕ್ಷಿ ಅನುಮೋದನಾ ಸಮಿತಿ (ಎಸ್​ಎಲ್​ಎಸ್​ಡಬ್ಲ್ಯುಸಿಸಿ) ಸಭೆ ನಡೆಯಿತು. 2,280 ಕೋಟಿ ರೂ ಮೊತ್ತದ 20 ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಈ ಯೋಜನೆಗಳು ಜಾರಿಯಾದರೆ 3,457 ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಐಎಲ್​ವಿ ಸೌತ್ ವೇರ್​ಹೌಸಿಂಗ್ ಪಾರ್ಕ್ಸ್ ಪ್ರೈ ಲಿಯಿಂದ 423 ಕೋಟಿ ರೂ ಹೂಡಿಕೆಯಲ್ಲಿ ಒಂದು ಘಟಕ ನಿರ್ಮಾಣವಾಗಲಿದೆ. ವಸಂತನರಸಾಪುರದಲ್ಲಿ ಯೋಯಾಮ ಸೇಸಾಕುಶೋ ಸಂಸ್ಥೆಯಿಂದ 210 ಕೋಟಿ ರೂ ವೆಚ್ಚದಲ್ಲಿ ಆಟೊಮೋಟಿವ್ ಫಾಸ್ಟ್​ನರ್ಸ್ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ. ಟೊಯೋಟೆಟ್ಸು ಕಂಪನಿ ಬಿಡದಿಯಲ್ಲಿ ಈಗಾಗಲೇ ಘಟಕಗಳನ್ನು ಹೊಂದಿದೆ. ಈಗ ಹೊಸ ಘಟಕ ನಿರ್ಮಾಣವಾಗಲಿದೆ. ಒಟ್ಟಾರೆ ಇದು ನಾಲ್ಕನೇ ಯೂನಿಟ್ ಆಗಿದೆ. ಇದು ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಬಿಡಿಭಾಗಗಳನ್ನು ಈ ಹೊಸ ಘಟಕದಲ್ಲಿ ತಯಾರಿಕೆ ಆಗಬಹುದು.

ರಾಜ್ಯ ಸರ್ಕಾರದ 2024ರ ಬಜೆಟ್​ನಲ್ಲಿ 52,903 ಕೋಟಿ ರೂನಷ್ಟು ಮೊತ್ತವನ್ನು ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿದೆ. ಎರಡು ತಿಂಗಳ ಹಿಂದೆ, ಅಂದರೆ ಜೂನ್ ತಿಂಗಳಲ್ಲಿ ರಾಜ್ಯ ಸರ್ಕಾರ 64 ಯೋಜನೆಗಳಿಗೆ ಅನುಮೋದನೆ ನೀಡಿತ್ತು. ಇವುಗಳಿಂದ 3,587.67 ಕೋಟಿ ರೂ ಹೂಡಿಕೆ ಅಗಲಿದ್ದು, 13,896 ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ. ಇಂಟರ್​ನ್ಯಾಷನಲ್ ಬ್ಯಾಟರಿ ಕಂಪನಿ, ರಿವರ್ ಮೊಬಿಲಿಟಿ ಮೊದಲಾದ ಸಂಸ್ಥೆಗಳ ಯೋಜನೆಗಳೂ ಇದರಲ್ಲಿ ಒಳಗೊಂಡಿವೆ.

ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 670 ಬಿಲಿಯನ್ ಡಾಲರ್​ಗೆ ಇಳಿಕೆ; ಜಾಗತಿಕ ತುಮುಲಗಳ ನಡುವೆಯೂ ಉತ್ತಮ ಸಂಗ್ರಹ

ಫಾಕ್ಸ್​ಕಾನ್ ಮುಖ್ಯಸ್ಥರ ಭೇಟಿ

ಆಗಸ್ಟ್ 16, ಶುಕ್ರವಾರದಂದು ಫಾಕ್ಸ್​ಕಾನ್ ಮುಖ್ಯಸ್ಥ ಯಂಗ್ ಲಿಯು ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ದೊಡ್ಡಬಳ್ಳಾಪುರದಲ್ಲಿ ಫಾಕ್ಸ್​ಕಾನ್ ಘಟಕ ಸ್ಥಾಪನೆಯಾಗುತ್ತಿದೆ. ಇದು ಆ ಸಂಸ್ಥೆ ಭಾರತದಲ್ಲಿ ಹೊಂದಿರುವ ಎರಡನೇ ಅತಿದೊಡ್ಡ ಘಟಕವಾಗಿರಲಿದೆ. ಇದು ಸುಮಾರು 40,000 ಉದ್ಯೋಗಗಳನ್ನು ಸೃಷ್ಟಿಸಬಲ್ಲುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ