AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಎಲ್​ಐಸಿ ಏಜೆಂಟ್​ಗಳು ತಿಂಗಳಿಗೆ ಎಷ್ಟು ದುಡಿಯುತ್ತಾರೆ? ಏಜೆಂಟ್​ಗಳಾಗುವುದು ಹೇಗೆ?

LIC agents earnings in Karnataka and India: ಭಾರತೀಯ ಜೀವ ವಿಮಾ ನಿಗಮ ದೇಶದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆ. ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯಲ್ಲಿ 14 ಲಕ್ಷ ಇನ್ಷೂರೆನ್ಸ್ ಏಜೆಂಟ್​ಗಳ ಬಳಗ ಇದೆ. ಸರಾಸರಿಯಾಗಿ 13,000 ರೂನಷ್ಟು ದುಡಿಮೆ ಮಾಡುತ್ತಾರೆ ಈ ಏಜೆಂಟ್​ಗಳು. ಕರ್ನಾಟಕದಲ್ಲಿ ಇರುವ 81 ಸಾವಿರ ಏಜೆಂಟ್​ಗಳ ಸರಾಸರಿ ಗಳಿಕೆ 13,265 ರೂ ಎನ್ನಲಾಗಿದೆ.

ಭಾರತದಲ್ಲಿ ಎಲ್​ಐಸಿ ಏಜೆಂಟ್​ಗಳು ತಿಂಗಳಿಗೆ ಎಷ್ಟು ದುಡಿಯುತ್ತಾರೆ? ಏಜೆಂಟ್​ಗಳಾಗುವುದು ಹೇಗೆ?
ಎಲ್​ಐಸಿ ಏಜೆಂಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2024 | 4:28 PM

Share

ನವದೆಹಲಿ, ಆಗಸ್ಟ್ 18: ಭಾರತದ ಅತಿದೊಡ್ಡ ವಿಮಾ ಸಂಸ್ಥೆಯಾದ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಅತಿದೊಡ್ಡ ಏಜೆಂಟ್​ಗಳ ಬಳಗ ಹೊಂದಿದೆ. ಎಲ್​ಐಸಿ ಇನ್ಷೂರೆನ್ಸ್ ಏಜೆಂಟ್​ಗಳ ಸಂಖ್ಯೆ ದೇಶಾದ್ಯಂತ ಸುಮಾರು 14 ಲಕ್ಷ ಇದೆ. ಉದ್ಯೋಗಿಗಳನ್ನು ಸೇರಿಸಿದರೆ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅತಿಹೆಚ್ಚು ಮಂದಿಗೆ ಕೆಲಸ ಕೊಟ್ಟಿರುವ ಸಂಸ್ಥೆಗಳಲ್ಲಿ ಎಲ್​ಐಸಿ ಒಂದು. ಇಲ್ಲಿ ಎಲ್​ಐಸಿ ಏಜೆಂಟ್​ಗಳಿಗೆ ನಿಶ್ಚಿತ ಸಂಬಳ ಎಂಬುದು ಇರುವುದಿಲ್ಲ. ಪ್ರತೀ ಏಜೆಂಟ್​ಗಳೂ ಕೂಡ ಕಮಿಷನ್ ಆಧಾರದ ಮೇಲೆ ಆದಾಯ ಗಳಿಸುತ್ತಾರೆ. ಕರ್ನಾಟಕದಲ್ಲಿ ಒಟ್ಟು 81,674 ಎಲ್​ಐಸಿ ಏಜೆಂಟ್​ಗಳು ಇದ್ದು, ಇವರು ಗಳಿಸುವ ಆದಾಯ ತಿಂಗಳಿಗೆ ಸರಾಸರಿಯಾಗಿ 13,265 ರೂ ಎನ್ನಲಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ಐಲ್ಯಾಂಡ್​ನಲ್ಲಿ ಎಲ್​ಐಸಿ ಏಜೆಂಟ್ ತಿಂಗಳಿಗೆ 20,446 ರೂ ಗಳಿಸುತ್ತಾರೆ. ಇದು ದೇಶದಲ್ಲೇ ಗರಿಷ್ಠ. ಹಿಮಾಚಲಪ್ರದೇಶದಲ್ಲಿ ಪ್ರತೀ ಏಜೆಂಟ್​ನ ಸರಾಸರಿ ಗಳಿಕೆ 10,328 ರೂ. ಇದು ಕನಿಷ್ಠ.

ಉತ್ತರಪ್ರದೇಶದಲ್ಲಿ ಅತಿಹೆಚ್ಚು ಎಲ್​ಐಸಿ ಏಜೆಂಟ್​ಗಳಿದ್ದಾರೆ. 1.84 ಎಲ್​ಐಸಿ ಏಜೆಂಟ್​ಗಳ ಸರಾಸರಿ ಮಾಸಿಕ ಗಳಿಕೆ 11,887 ರೂ. ಇನ್ನು, ಮಹಾರಾಷ್ಟ್ರದಲ್ಲಿ ಇರುವ 1.61 ಲಕ್ಷ ಏಜೆಂಟ್​ಗಳು ತಿಂಗಳಿಗೆ 14,931 ರೂ ದುಡಿಯುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಇರುವ 1.20 ಲಕ್ಷ ಎಲ್​ಐಸಿ ಏಜೆಂಟ್​ಗಳ ಸರಾಸರಿ ಗಳಿಕೆ 13,512 ರೂ.

ಇದನ್ನೂ ಓದಿ: ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ

ರಾಜ್ಯವಾರು ಎಲ್​ಐಸಿ ಏಜೆಂಟ್​ಗಳ ಸಂಖ್ಯೆ ಮತ್ತು ಸರಾಸರಿ ಗಳಿಕೆ (ತಿಂಗಳಿಗೆ)

  • ಉತ್ತರಪ್ರದೇಶ: 1.84 ಲಕ್ಷ ಏಜೆಂಟ್​ಗಳ ಸರಾಸರಿ ಗಳಿಕೆ 11,887 ರೂ.
  • ಮಹಾರಾಷ್ಟ್ರ: 1.61 ಲಕ್ಷ ಏಜೆಂಟ್​ಗಳ ಸರಾಸರಿ ಗಳಿಕೆ 14,931 ರೂ
  • ಪಶ್ಚಿಮ ಬಂಗಾಳ: 1.20 ಲಕ್ಷ ಏಜೆಂಟ್​ಗಳ ಸರಾಸರಿ ಗಳಿಕೆ 13,512 ರೂ
  • ತಮಿಳುನಾಡು: 87,347 ಏಜೆಂಟ್​ಗಳ ಸರಾಸರಿ ಗಳಿಕೆ 13,444 ರೂ
  • ಕರ್ನಾಟಕ: 81,674 ಏಜೆಂಟ್​ಗಳ ಸರಾಸರಿ ಗಳಿಕೆ 13,265 ರೂ
  • ರಾಜಸ್ಥಾನ: 75,310 ಏಜೆಂಟ್​ಗಳ ಸರಾಸರಿ ಗಳಿಕೆ 13,960 ರೂ
  • ಮಧ್ಯಪ್ರದೇಶ: 63,779 ಏಜೆಂಟ್​ಗಳ ಸರಾಸರಿ ಗಳಿಕೆ 11,647 ರೂ.
  • ದೆಹಲಿ: 40,469 ಏಜೆಂಟ್​ಗಳ ಸರಾಸರಿ ಗಳಿಕೆ 15,169 ರೂ
  • ಹಿಮಾಚಲಪ್ರದೇಶ: 12,731 ಏಜೆಂಟ್​ಗಳ ಸರಾಸರಿ ಗಳಿಕೆ 10,328 ರೂ
  • ಅಂಡಮಾನ್ ಮತ್ತು ನಿಕೋಬಾರ್: 273 ಏಜೆಂಟ್​ಗಳ ಸರಾಸರಿ ಗಳಿಕೆ 20,446 ರೂ.

ಎಲ್​ಐಸಿ ಏಜೆಂಟ್ ಆಗುವುದು ಹೇಗೆ?

ಎಲ್​ಐಸಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುವವರು ಕನಿಷ್ಠ ದ್ವಿತೀಯ ಪಿಯುಸಿ ಓದಿರಬೇಕು. ಐಆರ್​ಡಿಎಐ ಪ್ರತೀ ವರ್ಷ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಆಗಿರಬೇಕು. ನಿಮ್ಮ ಸ್ಥಳದ ಸಮೀಪ ಇರುವ ಎಲ್​ಐಸಿ ಕಚೇರಿಯಲ್ಲಿ ಏಜೆಂಟ್ ಆಗಿ ಸೇರಲು ಅಲ್ಲಿನ ಬ್ರ್ಯಾಂಚ್ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ವಿಚಾರಿಸಬಬಹುದು. ಇಂಟರ್ವ್ಯೂನಲ್ಲಿ ನೀವು ಏಜೆಂಟ್ ಆಗಿ ಆಯ್ಕೆಯಾದ ಬಳಿಕ ನಾಲ್ಕು ದಿನಗಳ ತರಬೇತಿ ಇರುತ್ತದೆ.

ಇದನ್ನೂ ಓದಿ: ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ

ಎಲ್​ಐಸಿ ಏಜೆಂಟ್​ಗೆ ನಿರ್ದಿಷ್ಟ ಸಂಬಳ ಇರುವುದಿಲ್ಲ. ವರ್ಷಕ್ಕೆ ಇಷ್ಟು ಬಿಸಿನೆಸ್ ತರಬೇಕಾಗುತ್ತದೆ. ನೀವು ಮಾಡಿಸುವ ಎಲ್​ಐಸಿ ಪಾಲಿಸಿಗಳ ಪ್ರೀಮಿಯಮ್​ಗಳಿಂದ ನಿಮಗೆ ಕಮಿಷನ್ ಸಿಗುತ್ತದೆ. ಎರಡನೇ ಮತ್ತು ಮೂರನೇ ವರ್ಷದ ಪ್ರೀಮಿಯಮ್​ಗಳಿಂದ ಶೇ. 7.5ರಷ್ಟು ಕಮಿಷನ್ ಸಿಗುತ್ತದೆ. ನಾಲ್ಕನೇ ವರ್ಷದಿಂದ ಪ್ರತೀ ಪ್ರೀಮಿಯಮ್ ಮೇಲೆ ಶೇ. 5ರಷ್ಟು ಕಮಿಷನ್ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ