ಸಂಬಳ ಪಡೆಯುವ ಹೆಚ್ಚಿನ ಐಟಿ ಪಾವತಿದಾರರು (tax payers) ಶೇ.5ರಿಂದ 30ರಷ್ಟು ಆದಾಯ ತೆರಿಗೆ ಪಾವತಿಸುತ್ತಾರೆ. ಬಹಳಷ್ಟು ಹಣ ತೆರಿಗೆಗೆಯೇ ಕಡಿತಗೊಳ್ಳುತ್ತದೆ. ಹಳೆಯ ಟ್ಯಾಕ್ಸ್ ರಿಟರ್ನ್ ವ್ಯವಸ್ಥೆಯಲ್ಲಿ (old tax regime) ಒಂದಷ್ಟು ತೆರಿಗೆ ರಿಯಾಯಿತಿಗಳು ಸಿಗುತ್ತವೆ. ಟ್ಯಾಕ್ಸ್ ಡಿಡಕ್ಷನ್ ಇರುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದು. ಈಗ ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದ್ದು, ಈಗಲೇ ನಿಮ್ಮ ಹೂಡಿಕೆಗಳನ್ನು ಪ್ಲಾನ್ ಮಾಡುವುದು ಉತ್ತಮ ನಿರ್ಧಾರವಾಗಬಹುದು. ಟ್ಯಾಕ್ಸ್ ಡಿಡಕ್ಷನ್ಗೂ ಮಿತಿ ಇರುವುದರಿಂದ ನಿಮ್ಮ ಎಲ್ಲಾ ಹೂಡಿಕೆಯನ್ನು ಅಂಥ ಯೋಜನೆಗಳಿಗೇ ತೊಡಗಿಸಿಕೊಳ್ಳುವುದೂ ಕೂಡ ತಪ್ಪಾಗುತ್ತದೆ. ಈ ನಿಟ್ಟಿನಲ್ಲಿ ಒಂದಷ್ಟು ಮುನ್ನೆಚ್ಚರಿಕೆಗಳನ್ನು ಮನವರಿಕೆ ಮಾಡಿಕೊಳ್ಳುವುದು ಲೇಸು.
ಒಟ್ಟು ಎಷ್ಟು ತೆರಿಗೆ ಉಳಿಸಬಹುದು, ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಯಾವ್ಯಾವ ವಿಧಾನಗಳಿವೆ, ಇತ್ಯಾದಿ ವಿವರವನ್ನು ತಿಳಿದಿರಬೇಕು. ಹಳೆಯ ತೆರಿಗೆ ಪದ್ಧತಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇದೆ. ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ ಒಂದೂವರೆ ಲಕ್ಷ ರೂವರೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು. ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ನ್ಯಾಷನಲ್ ಪೆನ್ಷನ್ ಸ್ಕೀಮ್ಗೆ ಮಾಡಲಾಗುವ 50,000 ರೂವರೆಗಿನ ಹೂಡಿಕೆಗೂ ಡಿಡಕ್ಷನ್ ಪಡೆಯಬಹುದು.
ಇಎಲ್ಎಸ್ಎಸ್ ಜೋಡಿತ ಹೂಡಿಕೆ ಯೋಜನೆಗಳು, ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (ಎಸ್ಸಿಎಸ್ಎಸ್) ಇತ್ಯಾದಿ ಸ್ಕೀಮ್ಗಳು; ಎಲ್ಐಸಿ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ, ಗೃಹ ಸಾಲದ ಅಸಲು ಹಣ ಪಾವತಿ, ಪೆನ್ಷನ್ ಫಂಡ್ಗಳಿಗೆ ಪಾವತಿ ಇತ್ಯಾದಿ ಹಣಕ್ಕೆ 1.5 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಸಿಗುತ್ತದೆ.
ನ್ಯಾಷನಲ್ ಪೆನ್ಷನ್ ಸ್ಕೀಮ್ನಲ್ಲಿ ಮಾಡುವ 50,000 ರೂ ಹೂಡಿಕೆಗೂ ಟ್ಯಾಕ್ಸ್ ಡಿಡಕ್ಷನ್ ಇರುತ್ತದೆ. ಇದರೊಂದಿಗೆ 80ಸಿ ಸೆಕ್ಷನ್ಗಳಲ್ಲಿ ಒಟ್ಟು 2 ಲಕ್ಷ ರೂ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.
ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್ನಲ್ಲಿ ಎಫ್ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್
ಸಂಬಳದಲ್ಲಿ ಎಚ್ಆರ್ಎ ಇಲ್ಲದ ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜನರು ಸೆಕ್ಷನ್ 80ಜಿಜಿ ಅಡಿಯಲ್ಲಿ ಬಾಡಿಗೆ ಹಣ ಪಾವತಿಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಈ ಕೆಳಗಿನ ಮೂರು ಅಂಶಗಳಲ್ಲಿ ಯಾವುದು ಕನಿಷ್ಠವೋ ಆ ಮೊತ್ತಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಬಹುದು.
ಇದರಲ್ಲಿ ಅತಿ ಕಡಿಮೆ ಎನಿಸುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಅವಕಾಶ ಸಿಗುತ್ತದೆ. ಅದರಂತೆ ವರ್ಷಕ್ಕೆ 60,000 ರೂವರೆಗೆ ಡಿಡಕ್ಷನ್ ಸಾಧ್ಯ ಇದೆ.
ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಪಿಎಂ ನ್ಯಾಷನಲ್ ರಿಲೀಫ್ ಫಂಡ್, ನ್ಯಾಷನಲ್ ಡಿಫೆನ್ಸ್ ಫಂಡ್ ಇತ್ಯಾದಿ ವಿವಿಧ ಸರ್ಕಾರೀ ಫಂಡ್ಗಳಿಗೆ ಮಾಡುವ ದಾನಕ್ಕೆ ಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.
ಜವಾಹರಲಾಲ್ ನೆಹರೂ ಮೆಮೋರಿಯಲ್ ಫಂಡ್, ಪಿಎಂ ಬರ ಪರಿಹಾರ ನಿಧಿ, ಇಂದಿರಾ ಗಾಂದಿ ಮೆಮೋರಿಯಲ್ ಟ್ರಸ್ಟ್, ರಾಜೀವ್ ಗಾಂಧಿ ಫೌಂಡೇಶನ್ಗೆ ಮಾಡಲಾಗುವ ಡೊನೇಶನ್ನ ಅರ್ಧದಷ್ಟು ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಪೈಕಿ ಬರ ಪರಿಹಾರ ನಿಧಿ ಹೊರತುಪಡಿಸಿ ಉಳಿದ ಮೂರು ಫಂಡ್ಗಳಿಗೆ 2024ರ ಏಪ್ರಿಲ್ 1ರ ಬಳಿಕ ಮಾಡಲಾಗುವ ದಾನದ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಕ್ಲೈಮ್ ಮಾಡಲು ಆಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ