Investment: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

Debt fund vs Fixed Deposits: ಡೆಟ್ ಫಂಡ್ ಎಂಬುದು ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್ ಇತ್ಯಾದಿಗಳ ಮೇಲೆ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಆಗಿದೆ. ಈ ಫಂಡ್​ಗಳು ವರ್ಷಕ್ಕೆ ಶೇ. 7ರಿಂದ 8ರಷ್ಟು ಲಾಭ ತರಬಲ್ಲುವು ಎಂಬುದು ತಜ್ಞರ ಅನಿಸಿಕೆ. ಇನ್ನು ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್​ಗಳು ವರ್ಷಕ್ಕೆ ಶೇ. 6ರಿಂದ 7ರಷ್ಟು ಬಡ್ಡಿ ಆದಾಯ ಒದಗಿಸುತ್ತವೆ.

Investment: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 13, 2024 | 12:01 PM

ಇವತ್ತು ಸಾಕಷ್ಟು ಹೂಡಿಕೆ ಆಯ್ಕೆಗಳಿವೆ. ಹೂಡಿಕೆ ಕಾರ್ಯ ಬಹಳ ಸುಲಭವೂ ಹೌದು. ಅವರವರ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ಹೂಡಿಕೆಗಳನ್ನು ಆಯ್ದುಕೊಳ್ಳಬಹುದು. ಈಕ್ವಿಟಿ ಮಾರುಕಟ್ಟೆ, ಡೆಟ್ ಮಾರುಕಟ್ಟೆ, ಸಾಂಪ್ರದಾಯಿಕ ಬ್ಯಾಂಕ್ ಠೇವಣಿಗಳು (Bank FDs), ಸಣ್ಣ ಉಳಿತಾಯ ಯೋಜನೆಗಳಿಗೆ ಬಹಳಷ್ಟು ಪ್ರಮಾಣದಲ್ಲಿ ಹೂಡಿಕೆಗಳು ಹರಿದುಬರುತ್ತಿವೆ. ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವ ಜನರು ಈಕ್ವಿಟಿ ಷೇರು ವಹಿವಾಟು ಹಾಗೂ ಅದಕ್ಕೆ ಜೋಡಿತವಾದ ಮ್ಯುಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡುತ್ತಾರೆ. ಸುರಕ್ಷಿತ ಹೂಡಿಕೆ ಆಯ್ಕೆಗಳಾದರೆ ಡೆಟ್ ಮಾರುಕಟ್ಟೆ ಹಾಗೂ ಅದಕ್ಕೆ ಜೋಡಿತವಾದ ಮ್ಯೂಚುವಲ್ ಫಂಡ್​ಗಳು ಹಾಗೂ ಬ್ಯಾಂಕ್ ಠೇವಣಿ ಮತ್ತು ಸಣ್ಣ ಉಳಿತಾಯ ಯೋಜನೆಗಳಿವೆ.

ಸಣ್ಣ ಉಳಿತಾಯ ಯೋಜನೆಗಳು ತೆರಿಗೆ ಲಾಭ ತಂದುಕೊಡುವುದರಿಂದ ನಿರ್ದಿಷ್ಟ ಪ್ರಮಾಣದಲ್ಲಿ ಹೂಡಿಕೆ ಆಕರ್ಷಿಸುತ್ತವೆ. ಇನ್ನು, ಇತರ ಸುರಕ್ಷಿತ ಹೂಡಿಕೆಗಳಲ್ಲಿ ಡೆಟ್ ಫಂಡ್ ಮತ್ತು ಫಿಕ್ಸೆಡ್ ಡೆಪಾಸಿಟ್​ಗಳಿವೆ.

ಏನಿದು ಡೆಟ್ ಫಂಡ್?

ಡೆಟ್ ಎಂದರೆ ಸಾಲ. ಡೆಟ್ ಮಾರುಕಟ್ಟೆ ಎಂದರೆ ಸಾಲದ ಮಾರುಕಟ್ಟೆ. ಗವರ್ನ್ಮೆಂಟ್ ಬಾಂಡ್ ಅಥವಾ ಸರ್ಕಾರ ಬಿಡುಗಡೆ ಮಾಡುವ ಬಾಂಡ್, ಸಾಲಪತ್ರ, ಕಾರ್ಪೊರೇಟ್ ಬಾಂಡ್ ಇತ್ಯಾದಿಗಳು ಡೆಟ್ ಮಾರುಕಟ್ಟೆಯಲ್ಲಿರುತ್ತವೆ. ಈ ಸಾಲಪತ್ರಗಳ ಮೇಲೆ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್​ಗಳನ್ನು ಡೆಟ್ ಫಂಡ್ ಎಂದು ಕರೆಯಬಹುದು. ಕೆಲ ಮ್ಯುಚುವಲ್ ಫಂಡ್​ಗಳು ಈಕ್ವಿಟಿ ಮತ್ತು ಡೆಟ್ ಎರಡರಲ್ಲೂ ಹೂಡಿಕೆ ಮಾಡುತ್ತವೆ. ಶೇ. 60ಕ್ಕಿಂತ ಹೆಚ್ಚು ಹಣವನ್ನು ಡೆಟ್​ಗಳಲ್ಲಿ ಹೂಡಿಕೆ ಮಾಡುವ ಮ್ಯುಚುವಲ್ ಫಂಡ್ ಅನ್ನು ಡೆಟ್ ಫಂಡ್ ಎಂದು ಪರಿಗಣಿಸಬಹುದು.

ಇದನ್ನೂ ಓದಿ: ಬಿಸಿನೆಸ್ ಮಾಡಬೇಕು, ಆದರೆ ಯಾವ ವ್ಯವಹಾರ ಆರಂಭಿಸಬೇಕು ಅಂತ ಗೊಂದಲವಾ? ಇಲ್ಲಿದೆ ಒಂದಷ್ಟು ಐಡಿಯಾ

ಬ್ಯಾಂಕ್ ಎಫ್​ಡಿ ಮತ್ತು ಡೆಟ್ ಫಂಡ್​ನಲ್ಲಿ ಯಾವುದು ಲಾಭಕಾರಿ?

ಪ್ರಮುಖ ಕಮರ್ಷಿಯಲ್ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳಿಗೆ ಶೇ. 6ರಿಂದ 7ರಷ್ಟು ಬಡ್ಡಿ ಸಿಗುತ್ತದೆ. ಕೆಲವೊಂದು ಅವಧಿಗೆ ಶೇ. 7.5ರಷ್ಟು ವಾರ್ಷಿಕ ಬಡ್ಡಿ ಸಿಗಬಹುದು.

ಡೆಟ್ ಮಾರುಕಟ್ಟೆ ಒಂದು ವರ್ಷದಲ್ಲಿ ಶೇ. 7ರಿಂದ 8ರಷ್ಟು ಬಡ್ಡಿ ಆದಾಯ ಕೊಡಬಹುದು. ಕೆಲವೊಮ್ಮೆ ಇನ್ನೂ ಹೆಚ್ಚಾಗಬಹುದು ಎಂದು ಕೆಲವರು ಅಂದಾಜು ಮಾಡುತ್ತಾರೆ. ಆದರೆ, ಮೇಲ್ನೋಟಕ್ಕೆ ಡೆಟ್ ಫಂಡ್ ಮತ್ತು ಬ್ಯಾಂಕ್ ಎಫ್​ಡಿಯಿಂದ ಸಿಗುವ ಆದಾಯದಲ್ಲಿ ಅಷ್ಟೇನೂ ವ್ಯತ್ಯಾಸ ಇರುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್