ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನಲ್ಲಿ ಎಫ್​ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್

Ujjivan Small Finance Bank Fixed Deposit Rates: ಬೆಂಗಳೂರಿನ ಕೋರಮಂಗಲದಲ್ಲಿ ಮುಖ್ಯ ಕಚೇರಿ ಹೊಂದಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಕೆಲ ನಿಶ್ಚಿತ ಠೇವಣಿ ದರಗಳನ್ನು ಪರಿಷ್ಕರಿಸಿದೆ. 15 ತಿಂಗಳ ಎಫ್​ಡಿಗೆ ಶೇ. 8.50ರಷ್ಟು ಬಡ್ಡಿ ಆಫರ್ ಮಾಡಿದೆ. ಹಿರಿಯ ನಾಗರಿಕರಿಗೆ ಶೇ. 9ರಷ್ಟು ಬಡ್ಡಿ ನೀಡಲಾಗುತ್ತದೆ. ಒಂದು ಕೋಟಿ ರೂ ಮೇಲ್ಪಟ್ಟ ಠೇವಣಿ ಇರುವ ವಿಶೇಷ ಪ್ಲಾಟಿನಾ ಎಫ್​ಡಿಗೆ ಶೇ. 9.20ರಷ್ಟು ಬಡ್ಡಿ ಸಿಗುತ್ತದೆ. ದೇಶದ 26 ರಾಜ್ಯಗಳಲ್ಲಿ ಉಪಸ್ಥಿತಿ ಹೊಂದಿರುವ ಉಜ್ಜೀವನ್ ಬ್ಯಾಂಕ್ ಅತಿಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳ ಸಾಲಿಗೆ ಸೇರುತ್ತದೆ.

ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನಲ್ಲಿ ಎಫ್​ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 19, 2024 | 11:41 AM

ಬೆಂಗಳೂರು, ಮಾರ್ಚ್ 19: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕು (Ujjivan small finance bank) ತನ್ನ ವಿವಿಧ ಫಿಕ್ಸೆಡ್ ಡೆಪಾಸಿಟ್ ದರಗಳನ್ನು ಪರಿಷ್ಕರಿಸಿದೆ. ಸಾಮಾನ್ಯ ಗ್ರಾಹಕರ ಎಫ್​ಡಿಗಳಿಗೆ ಶೇ. 8.50ರಷ್ಟು ಬಡ್ಡಿ ಆಫರ್ ಮಾಡಿದೆ. ಹಿರಿಯ ನಾಗರಿಕರಿಗೆ ಶೇ. 9ರಷ್ಟು ಬಡ್ಡಿ ಕೊಡಲಾಗುತ್ತದೆ. ವಿಶೇಷ ಠೇವಣಿಯಾದ ಪ್ಲಾಟಿನಾ ಎಫ್​ಡಿಗೆ (platina fd) ಶೇ. 9.2ರಷ್ಟು ಬಡ್ಡಿ ಸಿಗುತ್ತದೆ. ಯಾವುದೇ ಕಮರ್ಷಿಯಲ್ ಬ್ಯಾಂಕುಗಳಿಗಿಂತ ಹೆಚ್ಚು ಲಾಭ ತಂದುಕೊಡುತ್ತದೆ ಉಜ್ಜೀವನ್ ಬ್ಯಾಂಕ್​ನ ನಿಶ್ಚಿತ ಠೇವಣಿ ಪ್ಲಾನ್​ಗಳು. ನಿಶ್ಚಿತ ಠೇವಣಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳ ಸಾಲಿನಲ್ಲಿ ಉಜ್ಜೀವನ್ ಸೇರುತ್ತದೆ.

ಉಜ್ಜೇವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ 15 ತಿಂಗಳ ನಿಶ್ಚಿತ ಠೇವಣಿಗೆ ಈ ಭರ್ಜರಿ ಬಡ್ಡಿ ಆಫರ್ ಇದೆ. ಶೇ. 9.2ರಷ್ಟು ಬಡ್ಡಿ ಸಿಗುವ ಪ್ಲಾಟಿನಾ ಎಫ್​ಡಿ ಪ್ಲಾನ್​ನಲ್ಲಿ ಠೇವಣಿ ಒಂದು ಕೋಟಿ ರೂಗಿಂತ ಹೆಚ್ಚಿರಬೇಕು, ಎರಡು ಕೋಟಿ ರೂಗಿಂತ ಕಡಿಮೆ ಇರಬೇಕು. ಹಾಗೆಯೇ, ತೆರಿಗೆ ಲಾಭ ತಂದುಕೊಡುವ ಫಿಕ್ಸೆಡ್ ಡೆಪಾಸಿಟ್​ಗಳೂ ಉಂಟು. ಇವು ಐದು ವರ್ಷದ ಲಾಕ್-ಇನ್ ಅವಧಿ ಇರುತ್ತದೆ. ಅಂದರೆ, ಕನಿಷ್ಠ ಐದು ವರ್ಷವಾದರೂ ಈ ಠೇವಣಿಯಲ್ಲಿ ಹಣ ಇರಿಸಬೇಕು.

ಇದನ್ನೂ ಓದಿ: ಡೆಟ್ ಫಂಡ್ ಎಂದರೇನು? ಎಫ್​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದರಿಂದ ಹೆಚ್ಚು ಲಾಭ? ಇಲ್ಲಿದೆ ಡೀಟೇಲ್ಸ್

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಈ ಉಜ್ಜೀವನ್ ಬ್ಯಾಂಕ್​ನಲ್ಲಿ ಠೇವಣಿಗಳಿಗೆ ನೀಡಲಾಗುವ ಬಡ್ಡಿ ಹಣವನ್ನು ವಿವಿಧ ಅವಧಿಯಲ್ಲಿ ಪಡೆಯುವ ಆಯ್ಕೆಗಳಿವೆ. ಮಾಸಿಕವಾಗಿಯೋ, ತ್ರೈಮಾಸಿಕವಾಗಿಯೋ ಬಡ್ಡಿ ಸ್ವೀಕರಿಸಬಹುದು. ಅಥವಾ ಎಫ್​ಡಿ ಮೆಚ್ಯೂರ್ ಆದ ಬಳಿಕ ಠೇವಣಿ ಹಣದ ಜೊತೆಗೆ ಒಟ್ಟಿಗೆ ಬಡ್ಡಿಹಣವನ್ನೂ ಸೇರಿಸಿ ಪಡೆಯಬಹುದು.

26 ರಾಜ್ಯಗಳಿಗೆ ವ್ಯಾಪಿಸಿರುವ ಉಜ್ಜೀವನ್ ಬ್ಯಾಂಕ್

ಭಾರತದಲ್ಲಿರುವ ಅತಿದೊಡ್ಡ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಒಂದಾದ ಉಜ್ಜೀವನ್ ಬ್ಯಾಂಕ್ 2017ರ ಫೆಬ್ರುವರಿಯಲ್ಲಿ ಆರಂಭವಾಗಿದೆ. ದೇಶಾದ್ಯಂತ 26 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದರ 729 ಶಾಖೆಗಳಿವೆ. 21 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಬಳಗ ಹೊಂದಿದೆ. 82 ಲಕ್ಷ ಗ್ರಾಹಕರು, 29,869 ಕೋಟಿ ರೂ ಠೇವಣಿ ಹೊಂದಿದೆ. ಇನ್ನಷ್ಟು ಠೇವಣಿ ಮೊತ್ತ ಹೆಚ್ಚಿಸುವ ಗುರಿ ಹೊಂದಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಈ ನಿಟ್ಟಿನಲ್ಲಿ ಹೆಚ್ಚಿನ ಠೇವಣಿ ದರ ಪ್ರಕಟಿಸಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ