SBM Offer: ಎಸ್​ಬಿಎಂನಲ್ಲಿ ಕೇವಲ 2,000 ರೂಗೆ ಎಫ್​ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ

Step-up Credit Card on Rs 2,000 FDs: ಕ್ರೆಡಿಟ್ ರೇಟಿಂಗ್ ಕಳಪೆಯಾಗಿರುವ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಸಿಗದವರಿಗೆ ಎಸ್​ಬಿಐ ಬ್ಯಾಂಕ್​ನಲ್ಲಿ ಅಪೂರ್ವ ಅವಕಾಶ ಇದೆ. ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಸ್​ಬಿಎಂ ಬ್ಯಾಂಕ್​ನಲ್ಲಿ ನೀವು ಕೇವಲ 2,000 ರೂನ ಎಫ್​ಡಿ ಇಟ್ಟರೂ ಸಾಕು ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್​ನ ಭಾರತೀಯ ವಿಭಾಗವಾದ ಎಸ್​ಬಿಎಂ ಇಂಡಿಯಾ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಬೆಂಗಳೂರು ಮೊದಲಾದೆಡೆ ಇದರ ಶಾಖೆಗಳಿವೆ.

SBM Offer: ಎಸ್​ಬಿಎಂನಲ್ಲಿ ಕೇವಲ 2,000 ರೂಗೆ ಎಫ್​ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ
ಎಸ್​ಬಿಎಂ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 20, 2024 | 1:01 PM

ಎಸ್​ಬಿಎಂ ಬ್ಯಾಂಕ್​ನಲ್ಲಿ ಕೇವಲ 2,000 ರೂನಷ್ಟು ನಿಶ್ಚಿತ ಠೇವಣಿ (fixed deposit) ಇಟ್ಟರೆ ಒಂದು ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್ (Step up credit card) ಪಡೆಯುವ ಅವಕಾಶ ಸಿಗುತ್ತದೆ. ಕಳಪೆ ಕ್ರೆಡಿಟ್ ಸ್ಕೋರ್ ಕಾರಣಕ್ಕೆ ಕ್ರೆಡಿಟ್ ಕಾರ್ಡ್​ನಿಂದ ವಂಚಿತರಾಗಿರುವ ಜನರಿಗೆ ಇದು ಅನುಕೂಲವಾಗಬಹುದು. ಫಿಕ್ಸೆಡ್ ಡೆಪಾಸಿಟ್ ಅನ್ನೇ ಅಡಮಾನದಂತೆ ಪರಿಗಣಿಸಿ ಈ ಬ್ಯಾಂಕು ವಿಶೇಷ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಈ ಸ್ಪೆಪಪ್ ಕ್ರೆಡಿಟ್ ಕಾರ್ಡ್​ಗೆ ಪೈಸಾಬಜಾರ್ ಸಂಸ್ಥೆ ಕೋಬ್ರ್ಯಾಂಡಿಂಗ್ ಪಾರ್ಟ್ನರ್ ಆಗಿದೆ.

ಸ್ಟೆಪ್ ಅಪ್ ಕ್ರೆಡಿಟ್ ಕಾರ್ಡ್​ನಿಂದ ಏನು ಪ್ರಯೋಜನ?

ಕಳಪೆ ಕ್ರೆಡಿಟ್ ಸ್ಕೋರ್ ಹೊಂದಿರುವವರು ಸುಲಭವಾಗಿ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಉತ್ತಮ ನಿರ್ವಹಣೆ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವ ಅವಕಾಶ ಸಿಗುತ್ತದೆ.

ಎಸ್​ಬಿಎಂನಲ್ಲಿ ಇಡಲಾಗುವ ಠೇವಣಿಗೆ ಉತ್ತಮ ಬಡ್ಡಿದರ ಸಿಗುತ್ತದೆ. ಶೇ. 8.2ರವರೆಗೂ ವಾರ್ಷಿಕ ಬಡ್ಡಿ ದರ ಇದೆ. ಎಫ್​ಡಿ ಮೂಲಕ ಇರಿಸುವ ನಿಮ್ಮ ದುಡ್ಡಿಗೆ ಬಡ್ಡಿ ಲಾಭದ ಜೊತೆಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವೂ ದೊರಕಿದಂತಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್​ನ ಬೇರೆ ಬೇರೆ ಸ್ಕೀಮ್​ಗಳಲ್ಲಿ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಡೀಟೇಲ್ಸ್

ಯಾವುದಿದು ಎಸ್​ಬಿಎಂ ಬ್ಯಾಂಕ್?

ಎಸ್​ಬಿಎಂ ಬ್ಯಾಂಕ್ ಅನ್ನು ಹಿಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ತಪ್ಪಾಗಿ ತಿಳಿಯುವ ಸಾಧ್ಯತೆ ಹೆಚ್ಚು. ಅದು ಎಸ್​ಬಿಐ ಜೊತೆ ವಿಲೀನವಾಗಿದೆ. ಇದು ಮಾರಿಷಸ್ ಮೂಲದ ಸ್ಟೇಟ್ ಬ್ಯಾಂಕ್ ಆಫ್ ಮಾರಿಷಸ್​ನ ಭಾರತೀಯ ಅಂಗ ಸಂಸ್ಥೆಯಾಗಿದೆ. ಎಸ್​ಬಿಎಂ ಹೋಲ್ಡಿಂಗ್ಸ್ ಮಾರಿಷಸ್ ದೇಶದ ಷೇರು ಮಾರುಕಟ್ಟೆಯಲ್ಲಿ ಮೂರನೇ ಅತಿದೊಡ್ಡ ಸಂಸ್ಥೆಯೂ ಹೌದು.

ಎಸ್​ಬಿಐ ಇಂಡಿಯಾದ ಮುಖ್ಯ ಕಚೇರಿ ಮುಂಬೈನಲ್ಲಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇದರ ಶಾಖೆಗಳಿವೆ. ಇದರ ವೆಬ್​ಸೈಟ್ ಲಿಂಕ್ ಇಲ್ಲಿದೆ: www.sbmbank.co.in/

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್​ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿವೆ ಮೂರು ದಾರಿಗಳು

ಠೇವಣಿಗಳಿಗೆ ಅತಿಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳಲ್ಲಿ ಎಸ್​ಬಿಎಂ ಒಂದು. ಇದರ 3 ವರ್ಷ 2 ದಿನದ ಠೇವಣಿಗೆ ಶೇ. 8.20ರಷ್ಟು ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!